ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Piriyapattana News: ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ

ಜಾನಪದಗಳು ಉಳಿಯ ಬೇಕು. ವಿದ್ಯಾರ್ಥಿಗಳುಜ ಕೂಡ ಜಾನಪದ ಕಲೆಯನ್ನು ಉಳಿಸಿಬೆಳೆಸಬೇಕು. ಸ್ಥಳೀಯವಾಗಿ ನಡೆಯವ ಹಬ್ಬ, ಜಾತ್ರೆಗಳಲ್ಲಿ ಪಾಲ್ಗೊಂಡು ಅಲ್ಲಿನ ಜಾನಪದ ಸೊಗಡನ್ನು ನೋಡ ಬೇಕು. ಮನೆ ಮನೆಗೆ ತೆರಳಿ ಜಾನಪದ ಹಾಡುಗಳನ್ನು ಹಾಡುವ ಕಲಾವಿದರನ್ನು ಗೌರವಿಸಬೇಕು. ಅವರ ಹಾಡುಗಳನ್ನು ನಾವು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು

ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ

-

Profile
Ashok Nayak Jun 19, 2026 1:44 PM

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆದಿ ಕವಿ ಪಂಪ ಕನ್ನಡ ಸಂಘ ಉದ್ಘಾಟನೆಯಾಯಿತು. ಕರ್ನಾಟಕ ಜಾನಪ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಅಂಬಳಿಕೆ ಹಿರಿಯ ಕಾರ್ಯಕ್ರಮ ಉದ್ಘಾಟಿಸಿದರು.

ಜಾನಪದಗಳು ಉಳಿಯ ಬೇಕು. ವಿದ್ಯಾರ್ಥಿಗಳುಜ ಕೂಡ ಜಾನಪದ ಕಲೆಯನ್ನು ಉಳಿಸಿ ಬೆಳೆಸ ಬೇಕು. ಸ್ಥಳೀಯವಾಗಿ ನಡೆಯವ ಹಬ್ಬ, ಜಾತ್ರೆಗಳಲ್ಲಿ ಪಾಲ್ಗೊಂಡು ಅಲ್ಲಿನ ಜಾನಪದ ಸೊಗಡನ್ನು ನೋಡಬೇಕು. ಮನೆ ಮನೆಗೆ ತೆರಳಿ ಜಾನಪದ ಹಾಡುಗಳನ್ನು ಹಾಡುವ ಕಲಾವಿದರನ್ನು ಗೌರವಿಸಬೇಕು. ಅವರ ಹಾಡುಗಳನ್ನು ನಾವು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. 

ಇದನ್ನೂ ಓದಿ: Greater Mysore: ಗ್ರೇಟರ್‌ ಮೈಸೂರಿಗಾಗಿ ಜನತೆ ಕಾತರ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ವಿಶ್ವಕೋಶ ನಿವೃತ್ತ ಸಂಪಾದಕರಾದ ಡಾ.ಹಾ.ತಿ. ಕೃಷ್ಟೇಗೌಡ ಮಾತನಾಡಿ, ಈ ಸಂಘದ ಮೂಲಕ ಪ್ರತಿಭೆಯನ್ನು ವೃದ್ದಿಸಿಕೊಳ್ಳಿ. ಸಾಹಿತ್ಯ, ಕಲೆ, ಸಂಗೀತ ನಮ್ಮ ವ್ಯಕ್ತಿತ್ವವನ್ನು ವೃದ್ದಿಸುತ್ತದೆ. ನಮಗೆ ಯಾರೂ ಇಲ್ಲದಾಗಣ ಒಬ್ಬೊಂಟಿ ಅನ್ನಿಸಿದಾಗ ಪುಸ್ತಗಳು ನಮ್ಮ ಸ್ನೇಹಿತರಾಗುತ್ತವೆ. ಎಲ್ಲರೂ ವಿದ್ಯಾರ್ಜನೆಯಲ್ಲಿ ಆಸಕ್ತಿ ಬೆಳೆಸಿ ಕೊಳ್ಳಿ ಎಂದು ಸಲಹೆ ನೀಡಿದರು. 

Piriya 2

ನಿವೃತ್ತ ಪ್ರಾಧ್ಯಾಪಕರು ಹಾಗೂ ಕವಿಗಳಾದ ಪ್ರಕಾಶ್ ಜಿ.ಎಸ್.ಹಳ್ಳಿ‌ ಮಾತನಾಡಿ, ಜೀವನದಲ್ಲಿ ಶ್ರಮವಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಬುಸದಂತೆ ಬದುಕು ಕಟ್ಟಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ರಂಗಭೂಮಿ ಕಲಾವಿದ ಭರಮಣ್ಣ ಬೆಟ್ಟಗೇರಿ ಮಾತನಾಡಿ, ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.‌ ಅದೇ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ರಂಗಭೂಮಿ ಗೀತೆಯನ್ನು ಹಾಡಿ ರಂಜಿಸಿದರು. 

ಅನಿಕೇತನ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಅಪ್ಪಣ್ಣ, ಕಾರ್ಯದರ್ಶಿಗಳಾದ ಡಾ.ಜೆ.ಸೋಮಣ್ಣ, ನಿವೃತ್ತ ಪ್ರಾಧ್ಯಾಪಕರಾದ ಎಸ್.ಆರ್.ದೊಡ್ಡಣ್ಣ, ಇ.ಸುಲೇಮಾನ್ ಮುಂತಾ ದವರು ಕಾರ್ಯಕ್ರಮಮದಲ್ಲಿ ಹಾಜರಿದ್ದರು. ಇದೇ ವೇಳೆ ಸಾಹಿತ್ಯ ಸಂಘದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.