ಏಟ್ರಿಯಾ ರಿನ್ಯೂಎಬಲ್ ಮೈಸೂರಿಗೆ ವಿಸ್ತರಣೆ; ಕರ್ನಾಟಕದಲ್ಲಿ ರೂಫ್‌ಟಾಪ್ ಸೌರಶಕ್ತಿ ಸೇವೆ ಮತ್ತಷ್ಟು ಬಲ
ವಸತಿ ಹಾಗೂ ವಾಣಿಜ್ಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ತೊಂದರೆಯಿಲ್ಲದ ರೂಫ್ ಟಾಪ್ ಸೌರಶಕ್ತಿ ಪರಿಹಾರಗಳನ್ನು ಒದಗಿಸುತ್ತಿರುವ ಏಟ್ರಿಯಾ ರಿನ್ಯೂಎಬಲ್, ಹೆಚ್ಚಿನ ಸೌರ ವ್ಯವಸ್ಥೆಗಳ ಅಳವಡಿಕೆಯನ್ನು ಕೇವಲ 5 ರಿಂದ 6 ಗಂಟೆಗಳೊಳಗೆ ಪೂರ್ಣಗೊಳಿಸುತ್ತದೆ. ಪ್ರತಿಯೊಂದು ಸೌರಶಕ್ತಿ ವ್ಯವಸ್ಥೆಗೆ 30 ವರ್ಷಗಳ ವಾರಂಟಿ ಹಾಗೂ 5 ವರ್ಷಗಳ ಉಚಿತ ನಿರ್ವಹಣಾ ಸೇವೆ ಒದಗಿಸಲಾಗುತ್ತಿದ್ದು, ಗ್ರಾಹಕರು ವಿಶ್ವಾಸದಿಂದ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಇದು ನೆರವಾಗಲಿದೆ.
-
ಮೈಸೂರು: ಬೆಂಗಳೂರಿನಲ್ಲಿ ರೂಫ್‌ಟಾಪ್ ಸೌರಶಕ್ತಿ ವ್ಯವಸ್ಥೆಗಳ ಯಶಸ್ವಿ ಅಳವಡಿಕೆಯ ನಂತರ, ಬೆಂಗಳೂರಿನ ಮೂಲದ ಏಟ್ರಿಯಾ ರಿನ್ಯೂಎಬಲ್ ಪ್ರೈವೇಟ್ ಲಿಮಿಟೆಡ್ ಇದೀಗ ತನ್ನ ಸೇವೆ ಯನ್ನು ಮೈಸೂರು ನಗರಕ್ಕೂ ವಿಸ್ತರಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಸಂಸ್ಥೆಯ ಕಾರ್ಯಾ ಚರಣೆಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ದಕ್ಷಿಣ ಭಾರತದಲ್ಲಿ ಸ್ವಚ್ಛ ಇಂಧನ ಬಳಕೆ ಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆ ಇಟ್ಟಿದೆ.
ವಸತಿ ಹಾಗೂ ವಾಣಿಜ್ಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ತೊಂದರೆಯಿಲ್ಲದ ರೂಫ್ ಟಾಪ್ ಸೌರಶಕ್ತಿ ಪರಿಹಾರಗಳನ್ನು ಒದಗಿಸುತ್ತಿರುವ ಏಟ್ರಿಯಾ ರಿನ್ಯೂಎಬಲ್, ಹೆಚ್ಚಿನ ಸೌರ ವ್ಯವಸ್ಥೆಗಳ ಅಳವಡಿಕೆಯನ್ನು ಕೇವಲ 5 ರಿಂದ 6 ಗಂಟೆಗಳೊಳಗೆ ಪೂರ್ಣಗೊಳಿಸುತ್ತದೆ. ಪ್ರತಿ ಯೊಂದು ಸೌರಶಕ್ತಿ ವ್ಯವಸ್ಥೆಗೆ 30 ವರ್ಷಗಳ ವಾರಂಟಿ ಹಾಗೂ 5 ವರ್ಷಗಳ ಉಚಿತ ನಿರ್ವಹಣಾ ಸೇವೆ ಒದಗಿಸಲಾಗುತ್ತಿದ್ದು, ಗ್ರಾಹಕರು ವಿಶ್ವಾಸದಿಂದ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಇದು ನೆರವಾಗಲಿದೆ.
ಈಗಾಗಲೇ ಕರ್ನಾಟಕದಲ್ಲಿ ಸುಮಾರು 500ಕ್ಕೂ ಹೆಚ್ಚು ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸಿರುವ ಸಂಸ್ಥೆ, ಮೈಸೂರು ವಿಸ್ತರಣೆಯೊಂದಿಗೆ ತನ್ನ ಗ್ರಾಹಕ ವಲಯವನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿದೆ.
ಇದನ್ನೂ ಓದಿ: Kambala at Mysuru Dasara: ಮೈಸೂರು ದಸರಾ ಉತ್ಸವದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದ ಎಚ್‌ಡಿಕೆ
ಈ ಕುರಿತು ಮಾತನಾಡಿದ ಏಟ್ರಿಯಾ ರಿನ್ಯೂಎಬಲ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ತಿಕ್ ರಾಜು, “ಮೈಸೂರು ನಮ್ಮ ವಿಸ್ತರಣೆಗೆ ಅತ್ಯಂತ ಸೂಕ್ತ ನಗರವಾಗಿದೆ. ಕರ್ನಾಟಕದ ಎರಡನೇ ಐಟಿ ನಗರವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ 30 ಸಾವಿರಕ್ಕೂ ಹೆಚ್ಚು ಐಟಿ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ವ್ಯಾಪ್ತಿ ವಿಸ್ತರಿಸುತ್ತಿದ್ದು, ವಸತಿ ಹಾಗೂ ವಾಣಿಜ್ಯ ಅಭಿವೃದ್ಧಿಯೂ ವೇಗವಾಗಿ ನಡೆಯುತ್ತಿದೆ. ಬೆಂಗಳೂರಿಗೆ ಹೋಲಿಸಿದರೆ ಆಸ್ತಿ ಬೆಲೆಗಳು ಶೇ.20ರಿಂದ 30ರಷ್ಟು ಕಡಿಮೆಯಿರುವುದರಿಂದ, ದೀರ್ಘಾವಧಿಯ ಮತ್ತು ವಿಶ್ವಾಸಾರ್ಹ ಇಂಧನ ಪರಿಹಾರಗಳನ್ನು ಹುಡುಕುತ್ತಿರುವ ಮನೆಮಾಲೀಕರು ಹಾಗೂ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದೆ,” ಎಂದು ಹೇಳಿದರು.
“ಗ್ರಾಹಕರಲ್ಲಿ ಆಸಕ್ತಿ ಹೆಚ್ಚಿದ್ದರೂ, ಅನೇಕ ಟಿಯರ್-2 ನಗರಗಳಲ್ಲಿ ರೂಫ್‌ಟಾಪ್ ಸೌರಶಕ್ತಿ ಬಳಕೆ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ. ಮೈಸೂರು ವಿಸ್ತರಣೆಯ ಮೂಲಕ ಮನೆಗಳು ಹಾಗೂ ಉದ್ಯಮಗಳಿಗೆ ವಿಶ್ವಾಸಾರ್ಹ, ಸುಲಭ ಮತ್ತು ಕೈಗೆಟುಕುವ ಸೌರಶಕ್ತಿ ಪರಿಹಾರಗಳನ್ನು ಒದಗಿಸಿ, ಪ್ರದೇಶದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವುದು ನಮ್ಮ ಉದ್ದೇಶವಾಗಿದೆ,” ಎಂದು ಅವರು ತಿಳಿಸಿದರು.
ಮೈಸೂರಿನ ಗ್ರಾಹಕರಿಗೆ ಸಂಸ್ಥೆಯ ಸಂಪೂರ್ಣ ರೂಫ್‌ಟಾಪ್ ಸೌರಶಕ್ತಿ ಸೇವೆಗಳು ಲಭ್ಯವಾಗಲಿವೆ. 10 ಕಿಲೋವ್ಯಾಟ್‌ವರೆಗಿನ ಸೌರ ವ್ಯವಸ್ಥೆಯನ್ನು 5–6 ಗಂಟೆಗಳಲ್ಲಿ ಅಳವಡಿಸುವ ಎಂಡ್-ಟು-ಎಂಡ್ ಸೇವೆ, ‘ನಮ್ಮ ಏಟ್ರಿಯಾ’ (Namma Atria) ಮೊಬೈಲ್ ಆ್ಯಪ್ ಮೂಲಕ ವಿದ್ಯುತ್ ಉತ್ಪಾದನೆ ಯ ರಿಯಲ್-ಟೈಮ್ ಮೇಲ್ವಿಚಾರಣೆ, ಹಾಗೂ ಭಾರತ ಸರ್ಕಾರದ ಪಿಎಂ ಸೂರ್ಯ ಘರ್ ಯೋಜನೆ ಅಡಿಯಲ್ಲಿ ಲಭ್ಯವಿರುವ ಸಬ್ಸಿಡಿ ಪಡೆಯಲು ಅಗತ್ಯ ಸಹಾಯವನ್ನು ಸಂಸ್ಥೆ ಒದಗಿಸಲಿದೆ. ಇದರಿಂದ ಮನೆಮಾಲೀಕರಿಗೆ ಸೌರಶಕ್ತಿ ಅಳವಡಿಕೆ ಇನ್ನಷ್ಟು ಕೈಗೆಟುಕುವಂತಾಗಲಿದೆ.
ಮೈಸೂರು ವಿಸ್ತರಣೆಯು ಕರ್ನಾಟಕದಲ್ಲಿ ಏಟ್ರಿಯಾ ರಿನ್ಯೂಎಬಲ್‌ನ ಬೆಳವಣಿಗೆಯ ಮತ್ತೊಂದು ಮೈಲಿಗಲ್ಲಾಗಿದ್ದು, ವಿಶ್ವಾಸಾರ್ಹ ತಂತ್ರಜ್ಞಾನ, ಸರಳ ಪ್ರಕ್ರಿಯೆ ಹಾಗೂ ಗ್ರಾಹಕಕೇಂದ್ರಿತ ಸೇವೆಗಳ ಮೂಲಕ ರೂಫ್‌ಟಾಪ್ ಸೌರಶಕ್ತಿಯ ಬಳಕೆಯನ್ನು ಇನ್ನಷ್ಟು ವಿಸ್ತರಿಸುವ ಸಂಸ್ಥೆಯ ಬದ್ಧತೆ ಯನ್ನು ಪ್ರತಿಬಿಂಬಿಸುತ್ತದೆ.