ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈ ಬಾರಿಯ ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಪ್ರಶಾಂತ ಆನೆ ಆಯ್ಕೆ; ಮಹೇಂದ್ರನಿಗೆ ಕೈ ತಪ್ಪಿದ ಚಾನ್ಸ್‌

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲು ದುಬಾರೆ ಶಿಬಿರದ 'ಪ್ರಶಾಂತ' ಆನೆಯನ್ನು ಇಂದು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಈ ಬಾರಿ ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಪ್ರಶಾಂತ ಆನೆ ಆಯ್ಕೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 14, 2026 4:15 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ (Mysore Dasara) ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲು ದುಬಾರೆ ಶಿಬಿರದ ಪ್ರಶಾಂತ ಆನೆಯನ್ನು ಇಂದು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಕಳೆದ 6 ವರ್ಷಗಳಿಂದ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆ ವಯಸ್ಸಿನ ಮಿತಿಯಿಂದ ನಿವೃತ್ತಿ ಹೊಂದಿದ್ದು, ಆತನ ಉತ್ತಾರಾಧಿಕಾರಿಯಾಗಿ 54 ವರ್ಷದ ಪ್ರಶಾಂತ ಆನೆಯನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಅಂಬಾರಿ ಹೊರುವ ರೇಸ್‌ನಲ್ಲಿ ಆರಂಭದಲ್ಲಿ ಮಹೇಂದ್ರ ಆನೆ ಮುಂಚೂಣಿಯಲ್ಲಿತ್ತು. ಆದರೆ, ಇತ್ತೀಚೆಗೆ ನಡೆದ ತಾಲೀಮಿನ ವೇಳೆ ಮರದ ಅಂಬಾರಿಯನ್ನು ಹೊತ್ತು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವಾಗ ಮಹೇಂದ್ರ ಅರ್ಧದಲ್ಲೇ ನಿಂತು, ಸಾಗಲು ನಿರಾಕರಿಸಿದ್ದ. ದೈಹಿಕವಾಗಿ ಫಿಟ್ ಆಗಿದ್ದರೂ ಮಾನಸಿಕ ಹಿಂಜರಿಕೆಯಿಂದಾಗಿ ಮಹೇಂದ್ರ ಎರಡು ಬಾರಿ ವಿಫಲನಾದ ಕಾರಣ, ಅರಣ್ಯ ಇಲಾಖೆಯು ಆತನನ್ನು ಅಂಬಾರಿ ಹೊರುವ ರೇಸ್‌ನಿಂದ ಕೈಬಿಟ್ಟಿತು. ಇದಾದ ಬಳಿಕ ಪ್ರಶಾಂತ, ಧನಂಜಯ, ಸುಗ್ರೀವ ಹಾಗೂ ಏಕಲವ್ಯ ಆನೆಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಇದೀಗ ಪ್ರಶಾಂತನ ಹೆಸರು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.

ಯಾರು ಈ ಪ್ರಶಾಂತ?

ಪ್ರಶಾಂತ ಆನೆಯನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕೆರೆಕೊಪ್ಪ ಅರಣ್ಯ ವಲಯದಲ್ಲಿ ಸೆರೆಹಿಡಿಯಲಾಗಿತ್ತು. ಬಳಿಕ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆತನನ್ನು ಸಾಕಲಾಗುತ್ತಿದೆ. ಈತ 2.61 ಮೀಟರ್ ಎತ್ತರ ಹಾಗೂ ಸುಮಾರು 4,800 ಕೆಜಿ ತೂಕ ಇದ್ದಾನೆ. ಅನುಭವಿಯಾದ ಈ ಆನೆ ಕಳೆದ 19 ವರ್ಷಗಳಿಂದ ಮೈಸೂರು ದಸರಾದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಪ್ರಶಾಂತ, ಆರಂಭದಲ್ಲಿ ಸಾಲು ಆನೆಯಾಗಿ ಹಾಗೂ ನಂತರ 'ನೌಪತ್' ಆನೆಯಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾನೆ.

Hebbal Dasara: ಶತಮಾನ ಇತಿಹಾಸದ ಹೆಬ್ಬಾಳ ದಸರಾಗೆ ಅ.11 ರಂದು ಚಾಲನೆ: ಅ.21 ರವರೆಗೆ ನಡೆಯಲಿರುವ ರಾಜ್ಯದ ಎರಡನೇ ಮೈಸೂರು ದಸರಾ

ಪ್ರಶಾಂತನಿಗೆ ಅಂಬಾರಿ ಹೊರುವ ಜವಾಬ್ದಾರಿ ಕೊಟ್ಟ ಬೆನ್ನಲ್ಲೇ ಧನಂಜಯನನ್ನು ಮೀಸಲು ಅಂಬಾರಿ ಆನೆಯಾಗಿ, ಅಭಿಮನ್ಯುವನ್ನು ನಿಶಾನೆ ಆನೆಯಾಗಿ, ಗೋಪಿ ನೌಫತ್ ಆನೆಯಾಗಿ ಹಾಗೂ ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳಾಗಿ ಆಯ್ಕೆ ಮಾಡಲಾಗಿದೆ.