ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nayana Motamma Interview: ನಯನಾ ಮೋಟಮ್ಮ ಲವ್‌ ಸ್ಟೋರಿ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಸ್ಸಿ ಸಮುದಾಯಕ್ಕೆ ಮೀಸಲಾಗಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಕರ್ನಾಟಕ ವಿಧಾನಸಭೆಯ ಸದಸ್ಯರಾದ ನಯನ ಮೋಟಮ್ಮ(Nayana Motamma) ಅವರು ಇತ್ತೀಚೆಗೆ ವಿಶ್ವವಾಣಿ ಯೂಟ್ಯೂಬ್ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಲೈಫ್‍ಸ್ಟೈಲ್‍ ಬಗ್ಗೆ ಹಂಚಿಕೊಂಡಿದ್ದಾರೆ.

ನಯನಾ ಮೋಟಮ್ಮ ಲವ್‌ ಸ್ಟೋರಿ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

Profile pavithra Mar 28, 2025 5:42 PM

ಬೆಂಗಳೂರು: ಪ್ರಪ್ರಥಮ ಅದೃಷ್ಟ ಪರೀಕ್ಷೆಯಲ್ಲಿ ಚುನಾವಣೆ ಗೆದ್ದು, ಶಾಸಕಿಯಾಗಿರುವ ನಯನಾ ಮೋಟಮ್ಮ(‌Nayana Motamma Interview) ಅತ್ಯಂತ ಆಕ್ಟೀವ್‌ ಶಾಸಕರಲ್ಲಿ ಒಬ್ಬರು. ಶಾಸಕರಾಗಿ ಆಯ್ಕೆಯಾಗುವ ಮೊದಲು, ಅವರು ಕರ್ನಾಟಕ ಹೈಕೋರ್ಟ್‍ನಲ್ಲಿ ವಕೀಲರಾಗಿದ್ದ ನಯನಾ, ತಾಯಿ ಮೋಟಮ್ಮ ಅವರಿಂದಲೇ ರಾಜಕೀಯ ದೀಕ್ಷೆ ಪಡೆದವರು. ಅವರ ತಾಯಿ ಮೋಟಮ್ಮ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದವರು. ವಿದೇಶದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಇದೀಗ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಯನಾ ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಬದುಕಿನ ಹತ್ತು ಹಲವು ಇಂಟ್ರೆಸ್ಟಿಂಗ್‌ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ತಮ್ಮ ವೈವಾಹಿಕ ಬದುಕಿನ ಕುರಿತ ಹಲವಾರು ಸಂಗತಿಗಳನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ನಯನಾ ಅವರ ಪತಿ ಬಿಕಾಶ್ ಝಾವರ್ ವಕೀಲರಾಗಿದ್ದು, ದೆಹಲಿಯ ಮೂಲದವರಂತೆ. ಮಾರ್ವಾಡಿ ಸಮುದಾಯದವರಾದ ಬಿಕಾಶ್ ಝಾವರ್ ಹಾಗೂ ನಯನಾ ಮೋಟಮ್ಮ ಅವರ ಮದುವೆ 2007ರಲ್ಲಿ ಮಾರ್ವಾಡಿ ಸ್ಟೈಲ್‍ನಲ್ಲಿ ಬೆಂಗಳೂರು ಪ್ಯಾಲೇಸ್‍ನಲ್ಲಿ ನಡೆದಿತ್ತು. ಈ ಮದುವೆಗೆ 4000 ಜನರು ಬಂದಿದ್ದರಂತೆ. ಇನ್ನು ಇವರಿಬ್ಬರದ್ದು ಲವ್‌ ಮ್ಯಾರೇಜ್‌ ಅಂತೆ. ನಯನಾ ಅವರು ಬಿಕಾಶ್ ಝಾವರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರಂತೆ. ಇವರಿಬ್ಬರ ನಡುವೆ ಪ್ರೀತಿ ಹೇಗೆ ಚಿಗುರಿತು ಅನ್ನೋದನ್ನು ನಯನಾ ವಿವರಿಸಿದ್ದಾರೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಲ್ಲಿ ಪದವಿ ಮಾಡುವಾಗ ಬಿಕಾಶ್ ಝಾವರ್ ಅವರ ಪರಿಚಯವಾಗಿದ್ದು, ಇಬ್ಬರು ಬೆಸ್ಟ್ ಫ್ರೆಂಡ್ ಆಗಿದ್ದರು. ಆದರೆ ವಿದೇಶದಲ್ಲಿ ಹೈಯರ್ ಸ್ಟಡಿ ಮುಗಿಸಿ ಬಂದ ಮೇಲೆ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ನಂತರ ಸ್ವಲ್ಪ ಕಾಲ ವಕೀಲರಾಗಿ ಕೆಲಸ ಮಾಡಿದ್ದ ನಯನಾ, ಆಮೇಲೆ ವಕೀಲ ವೃತ್ತಿ ಬೇಸರವಾಗಿ ಬಿಕಾಶ್ ಅವರ ಜೊತೆ ಮುಂಬೈನ ಐಸಿಐಸಿಐ ಬ್ಯಾಂಕಿನಲ್ಲಿ ಬೇರೆ ಬೇರೆ ಟೀಂನಲ್ಲಿ ಕೆಲಸ ಮಾಡಿದ್ದಾರೆ. ನಂತರ 2007ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸುಮಾರು 10 ವರ್ಷಗಳ ಕಾಲ ಮುಂಬೈನಲ್ಲೇ ವಾಸವಾಗಿದ್ದರು. ಇದಾದ ನಂತರ ಬೆಂಗಳೂರಿಗೆ ವಾಪಾಸ್‌ ಬಂದ ನಯನಾ ತಾಯಿಯ ಜೊತೆ ರಾಜಕೀಯ ರಂಗದಲ್ಲಿ ಗುರುತಿಸಿಕೊಳ್ಳಲು ಶುರುಮಾಡಿದರು. ಇನ್ನು 2013ರಲ್ಲಿ ಮಗಳು ಆರ್ಯ ಜನಿಸಿದ ನಂತರ ನಯನಾ- ಬಿಕಾಶ್‌ ಜೋಡಿ ಪೋಷಕರಾಗಿ ಬಡ್ತಿ ಪಡೆದರು. ತಮ್ಮ ಪತಿ ಅವರಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಿಂತಿದ್ದಾರೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ನಯನಾ. ಹಾಗೇ ರಾಜಕೀಯಕ್ಕೂ ಬರಲು ಪತಿ ಸಹಕರಿಸಿದ್ದಾರೆ ಎಂದು ನಯನ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Mamata Banerjee: ಬಿಳಿ ಸೀರೆ, ಜಾಕೆಟ್‌, ಚಪ್ಪಲಿ ಹಾಕಿ ಲಂಡನ್‌ನಲ್ಲಿ ಮಮತಾ ಬ್ಯಾನರ್ಜಿ ಜಾಗಿಂಗ್‌ ; ವಿಡಿಯೋ ವೈರಲ್‌

ನಯನಾ ಮೋಟಮ್ಮ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನವರಿ 1, 1980ರಲ್ಲಿ ಜನಿಸಿದ್ದಾರೆ.ಅವರು 2003ರಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 2004ರಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಎಂ ಪದವಿ ಪಡೆದಿದ್ದಾರೆ. ಅವರು ಲೂಥ್ರಾ & ಲೂಥ್ರಾ ಮತ್ತು ಐಸಿಐಸಿಐನಲ್ಲಿ ಕಾರ್ಪೊರೇಟ್ ವಕೀಲರಾಗಿ ಕೆಲಸ ಮಾಡಿದ್ದಾರೆ. ನಯನಾ ಮೋಟಮ್ಮ ಕಾಂಗ್ರೆಸ್‍ನ ಸದಸ್ಯರಾಗಿದ್ದಾರೆ. ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಪ್ರಪ್ರಥಮವಾಗಿ ಸ್ಪರ್ಧಿಸಿ ವಿಧಾನಸಭೆಗೆ ಎಂಟ್ರಿ ಕೊಟ್ಟಿದ್ದರು.

ನಯನಾ ಮೋಟಮ್ಮ ಸಂದರ್ಶನದ ವಿಡಿಯೊ ಇಲ್ಲಿದೆ ನೋಡಿ



ಮೋಟಮ್ಮ ಮದುವೆಗೆ ಇಂದಿರಾ ಗಾಂಧಿ ಆಗಮನ

ನಯನಾ ಮೋಟಮ್ಮನವರ ತಂದೆ-ತಾಯಿಯ ಮದುವೆಗೆೆಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಬಂದು ದಂಪತಿಯನ್ನು ಹರಸಿ ಊಟ ಮಾಡಿ ಹೋಗಿದ್ದರಂತೆ. ಬಡಕುಟುಂಬದಲ್ಲಿ ಜನಿಸಿದ್ದ ತಂದೆತಾಯಿಯ ಮದುವೆಗೆ ದೊಡ್ಡ ವ್ಯಕ್ತಿ ಇಂದಿರಾ ಗಾಂಧಿ ಬಂದಿದ್ದು ಒಂದು ಸ್ಮರಣೀಯವಾದ ದಿನ. ಇದು ತಮಗೆ ಹೆಮ್ಮೆ ಎಂದು ನಯನಾ ಖುಷಿಯನ್ನು ಹಂಚಿಕೊಂಡಿದ್ದಾರೆ.

ಅವರ ತಾಯಿ 1999ಯ ಚುನಾವಣೆ ಗೆದ್ದು ಮೂಡಿಗೆರೆ ಕ್ಷೇತ್ರದಿಂದ ಮೊದಲಬಾರಿಗೆ ಎಂಎಲ್‍ಎ ಆಗಿದ್ದರು. ಅವರ ತಂದೆ ಮಂಡ್ಯದವರು. ಅವರು ಚಿಕ್ಕಮಂಗಳೂರಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರಂತೆ. ನಯನಾ ಮೋಟಮ್ಮ ತಾಯಿ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಕೊನೆಯ ಮಗಳಾಗಿ ಜನಿಸಿದ್ದರು. ಹಾಗೂ ಓದಿ ವಿದ್ಯಾವಂತರಾಗಿದ್ದರು ಮತ್ತು ವಾಲಿಬಾಲ್‍ ಮತ್ತು ಶಾಟ್ ಫುಟ್‍ನಲ್ಲಿ ನ್ಯಾಷನಲ್‍ ಲೆವೆಲ್‍ಗೆ ಹೋಗಿದ್ದರು. ಮೋಟಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಯಾದ ನಂತರ 2000ರಲ್ಲಿ ಸ್ತೀಶಕ್ತಿ ಸಂಘಗಳನ್ನು ಸ್ಥಾಪನೆ ಮಾಡಿದ್ದಾರೆ.

ಡಿಬಿ ಚಂದ್ರೆ ಗೌಡರು ಮೋಟಮ್ಮ ಅವರ ರಾಜಕೀಯ ಗುರುಗಳಾಗಿದ್ದರು. ಮೋಟಮ್ಮ ಅವರನ್ನು ರಾಜಕೀಯಕ್ಕೆ ತಂದವರು ಈ ಡಿಬಿ ಚಂದ್ರೇಗೌಡರು. ಅವರು ಚಿಕ್ಕಮಂಗಳೂರಿನಲ್ಲಿ ಸಬ್‍ ರಿಜಿಸ್ಟರ್‌ ಆಗಿ ಕೆಲಸ ಮಾಡುತ್ತಿದ್ದಾಗ ಮೂಡಿಗೆರೆ ಕ್ಷೇತ್ರಕ್ಕೆ ವಿದ್ಯಾವಂತ ಮಹಿಳಾ ಅಭ್ಯರ್ಥಿಯನ್ನು ಹುಡುಕುತ್ತಿದ್ದ ಡಿಬಿ ಚಂದ್ರೆ ಗೌಡರ ಕಣ್ಣಿಗೆ ಬಿದ್ದಿದ್ದು ಈ ಮೋಟಮ್ಮ .