ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mamata Banerjee: ಬಿಳಿ ಸೀರೆ, ಜಾಕೆಟ್‌, ಚಪ್ಪಲಿ ಹಾಕಿ ಲಂಡನ್‌ನಲ್ಲಿ ಮಮತಾ ಬ್ಯಾನರ್ಜಿ ಜಾಗಿಂಗ್‌ ; ವಿಡಿಯೋ ವೈರಲ್‌

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ಸೀದಾ ಸಾದಾ ಉಡುಪು ಧರಿಸಿ ಲಂಡನ್‌ ನಗರದಲ್ಲಿ ಅವರು ಓಡಾಡಿದ್ದಾರೆ. ಹೌದು, ಲಂಡನ್‌ನಂತ ನಗರದಲ್ಲಿ ತಾವು ಕೊಲ್ಕತ್ತಾದಲ್ಲಿ ಧರಿಸುತ್ತಿದ್ದ ಸ್ಟೈಲಿನಂತೆ ಬಿಳಿ ಸೀರೆ, ಚಪ್ಪಲಿ ಧರಿಸಿ ಮಮತಾ ಜಾಗಿಂಗ್‌ ಮಾಡುತ್ತಿರುವುದು ಕಂಡುಬಂದಿದೆ.

ಬಿಳಿ ಸೀರೆ, ಚಪ್ಪಲಿ ಹಾಕಿ ಲಂಡನ್‌ನಲ್ಲಿ ಮಮತಾ ಬ್ಯಾನರ್ಜಿ ಜಾಗಿಂಗ್‌

ಮಮತಾ ಬ್ಯಾನರ್ಜಿ

Profile Vishakha Bhat Mar 25, 2025 11:24 AM

ಲಂಡನ್‌: ಜಾಗಿಂಗ್‌ ಮಾಡುವಾಗ, ಪ್ಯಾಂಟ್‌, ಜಾಕೆಟ್‌, ಶೂ ಹಾಕಿಕೊಂಡು ಹೋಗುವುದು ಸಾಮಾನ್ಯ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ( Mamata Banerjee) ಇದೇ ವಿಷಯಕ್ಕೆ ಇದೀಗ ಸುದ್ದಿಯಲ್ಲಿದ್ದಾರೆ. ಸೀದಾ ಸಾದಾ ಉಡುಪು ಧರಿಸಿ ಲಂಡನ್‌ ನಗರದಲ್ಲಿ ಅವರು ಓಡಾಡಿದ್ದಾರೆ. ಹೌದು, ಲಂಡನ್‌ನಂತ ನಗರದಲ್ಲಿ ತಾವು ಕೊಲ್ಕತ್ತಾದಲ್ಲಿ ಧರಿಸುತ್ತಿದ್ದ ಸ್ಟೈಲಿನಂತೆ ಬಿಳಿ ಸೀರೆ, ಚಪ್ಪಲಿ ಧರಿಸಿ ಮಮತಾ ಜಾಗಿಂಗ್‌ ಮಾಡುತ್ತಿರುವುದು ಕಂಡುಬಂದಿದೆ. ಸದ್ಯ ಅವರು ವಾಕಿಂಗ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.



ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ) ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದ ಮೈಲ್ ಎಂಡ್ ಇನ್ಸ್ಟಿಟ್ಯೂಟ್‌ನ ಕಾರ್ಯಕ್ರಮಕ್ಕೆಂದು ಲಂಡನ್‌ಗೆ ತೆರಳಿರುವ ಮಮತಾ ಬ್ಯಾನರ್ಜಿ ಹೈಡ್ ಪಾರ್ಕ್‌ನಲ್ಲಿ, ತಾವು ಯಾವಾಗಲೂ ಕೊಲ್ಕಾತ್ತಾದಲ್ಲಿ ಉಡುವ ಬಿಳಿ ಸೀರೆ ಮತ್ತು ಬಿಳಿ ಚಪ್ಪಲಿಯಲ್ಲಿ ವಾಕಿಂಗ್‌ ಮಾಡಿದ್ದಾರೆ. ಈ ವಿಡಿಯೋವನ್ನು ತೃಣಮೂಲ ಕಾಂಗ್ರೆಸ್‌ನ ಕುನಾಲ್ ಘೋಷ್ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಲಂಡನ್‌ ಆದರೂ ತಮ್ಮದೇ ಆದ ಸ್ಟೈಲ್‌ನ್ನು ಬಿಡದೆ, ಮಮತಾ ಬ್ಯಾನರ್ಜಿ ಬಿಳಿ ಚಪ್ಪಲಿ, ಬಿಳಿ ಸೀರೆಯಲ್ಲಿ ಮಿಂಚಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.



ಬ್ಯಾನರ್ಜಿ ವಿದೇಶಿ ನೆಲದಲ್ಲಿ ಜಾಗಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. 2023 ರಲ್ಲಿ ಸ್ಪೇನ್‌ಗೆ ಅಧಿಕೃತ ಭೇಟಿ ನೀಡಿದ್ದಾಗ, ಮುಖ್ಯಮಂತ್ರಿಯವರು ಸೀರೆ ಮತ್ತು ಚಪ್ಪಲಿ ಧರಿಸಿ ಜಾಗಿಂಗ್ ಮಾಡಿದ್ದರು. ಬ್ರಿಟನ್ ಜೊತೆಗಿನ ಬಂಗಾಳದ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಅಧಿಕೃತ ಭೇಟಿಯ ಭಾಗವಾಗಿ ಶ್ರೀಮತಿ ಬ್ಯಾನರ್ಜಿ ಭಾನುವಾರ ಲಂಡನ್‌ಗೆ ತೆರಳಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಅವರು ಬ್ರಿಟನ್‌ ಮತ್ತು ಬಂಗಾಳದ ಸಂಬಂಧ "ಇತಿಹಾಸ, ಸಂಸ್ಕೃತಿ ಮತ್ತು ವಾಣಿಜ್ಯದಲ್ಲಿ ಬೇರೂರಿರುವ ಶತಮಾನಗಳಷ್ಟು ಹಳೆಯದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Mamata Banerjee : 2026ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಇಲ್ಲ; ಮಮತಾ ಬ್ಯಾನರ್ಜಿಯಿಂದ ಮಹತ್ವದ ಘೋಷಣೆ

ನಾವು ನಿನ್ನೆ ಲಂಡನ್‌ಗೆ ಬಂದಿಳಿದಾಗ, ಕೋಲ್ಕತ್ತಾದಂತೆಯೇ ಅನ್ನಿಸಿತು, ಬಂಗಾಳ ಮತ್ತು ಬ್ರಿಟನ್ ಶತಮಾನಗಳಷ್ಟು ಹಳೆಯದಾದ ಸಂಬಂಧವನ್ನು ಉಳಿಸಿಕೊಂಡಿವೆ. ಇತಿಹಾಸ, ಸಂಸ್ಕೃತಿ ಮತ್ತು ವಾಣಿಜ್ಯದಲ್ಲಿ ಬೇರೂರಿದೆ. ನನ್ನ ಅಧಿಕೃತ ಕಾರ್ಯಕ್ರಮಗಳು ಪ್ರಾರಂಭವಾಗುವ ಮೊದಲು, ಲಂಡನ್‌ ನೋಡಲು ತೆರಳಿದ್ದೆ, ಬಂಗಾಳವು ಸಹ ಹೃದಯಕ್ಕೆ ಹತ್ತಿರವಾಗಿರುವ ಮೌಲ್ಯ. ಮುಂದೆ ಬ್ರಿಟನ್‌ನೊಂದಿಗೆ ಬಂಗಾಳದ ಸಂಬಂಧ ಗಟ್ಟಿಗೊಳಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.