ಹೊರಗುತ್ತಿಗೆ ನೌಕರರ ಬಿಡುಗಡೆ ಆದೇಶವೇ ನಕಲಿ: ಆರ್ಥಿಕ ಇಲಾಖೆ ಸ್ಪಷ್ಟನೆ
ಇತ್ತೀಚೆಗೆ ಹಣಕಾಸು ಇಲಾಖೆಯ ಹೆಸರಿನಲ್ಲಿ ಅಧಿಕೃತ ಎನ್ನುವಂತೆ ಜ್ಞಾಪನಾ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದರಲ್ಲಿ, ಗುತ್ತಿಗೆ ಅವಧಿ ಮುಗಿದ ತಕ್ಷಣ ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡಬೇಕು ಎಂದು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿತ್ತು. ಇದು ನೌಕರರಲ್ಲಿ ಭಾರಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.
ಆರ್ಥಿಕ ಇಲಾಖೆ ಸ್ಪಷ್ಟನೆ -
ಬೆಂಗಳೂರು, ಏ.1: ರಾಜ್ಯದ (Karnataka) ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಹೊರಗುತ್ತಿಗೆ (contract employees) ಮತ್ತು ಒಪ್ಪಂದ ಆಧಾರಿತ ನೌಕರರಲ್ಲಿ ಆತಂಕ ಮೂಡಿಸಿದ್ದ ‘ಬಿಡುಗಡೆ ಆದೇಶ’ವು ಸಂಪೂರ್ಣವಾಗಿ ನಕಲಿ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಸುಮಾರು 96 ಸಾವಿರಕ್ಕೂ ಅಧಿಕ ನೌಕರರು ನಿಟ್ಟುಸಿರು ಬಿಡುವಂತಾಗಿದೆ.
ಇತ್ತೀಚೆಗೆ ಹಣಕಾಸು ಇಲಾಖೆಯ ಹೆಸರಿನಲ್ಲಿ ಅಧಿಕೃತ ಎನ್ನುವಂತೆ ಜ್ಞಾಪನಾ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದರಲ್ಲಿ, “ಗುತ್ತಿಗೆ ಅವಧಿ ಮುಗಿದ ತಕ್ಷಣ ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಅದು ಸರ್ಕಾರದ ನಿಯಮಗಳ ಉಲ್ಲಂಘನೆಯಾಗುತ್ತದೆ” ಎಂದು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿತ್ತು. ಇದು ನೌಕರರಲ್ಲಿ ಭಾರಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.
ಆರ್ಥಿಕ ಇಲಾಖೆಯ ಸ್ಪಷ್ಟನೆ
ಈ ಕುರಿತು ತುರ್ತು ಸ್ಪಷ್ಟನೆ ನೀಡಿರುವ ಆರ್ಥಿಕ ಇಲಾಖೆ, ಅಂತಹ ಯಾವುದೇ ಆದೇಶ ಅಥವಾ ಜ್ಞಾಪನಾ ಪತ್ರವನ್ನು ತಾವು ಹೊರಡಿಸಿಲ್ಲ ಎಂದು ತಿಳಿಸಿದೆ. ಈ ನಕಲಿ ಪತ್ರವು ಸರ್ಕಾರದ ಇಲಾಖೆಗಳಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದು ಇಲಾಖೆ ಹೇಳಿದೆ.
Tumkur News: ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡಿ: ರಾಜ್ಯಾಧ್ಯಕ್ಷ ಸುಧಾಕರ್ ಆಗ್ರಹ
ಸರ್ಕಾರದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸ್ ಠಾಣೆಗೆ ಹಣಕಾಸು ಇಲಾಖೆ ದೂರು ನೀಡಿದೆ. ಒಪ್ಪಂದದ ಅವಧಿ ಮುಗಿದ ನಂತರ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಹೊಸ ನಿಯಮ ಜಾರಿಗೆ ತಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಸ್ಪಷ್ಟನೆಯಿಂದಾಗಿ ರಾಜ್ಯದ 96 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ನೌಕರರ ಕೆಲಸಕ್ಕೆ ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ಖಚಿತವಾಗಿದೆ.