7.23 ಗಂಟೆಯ ʻಧುರಂಧರ್ʼ ಮಹಾ ಮ್ಯಾರಥಾನ್; ಎರಡು ಪಾರ್ಟ್‌ಗಳನ್ನು ಒಟ್ಟಿಗೆ ನೋಡುವ ಚಾನ್ಸ್! ಇದು ನಿಜವೇ?
Ranveer Singh Dhurandhar Marathon: ಹಾಂಕಾಂಗ್‌ನ ವಿತರಣಾ ಸಂಸ್ಥೆ 'ಎಎ ಟೆಕ್' ಏಪ್ರಿಲ್ 12 ರಂದು 'ಧುರಂಧರ್' ಮತ್ತು ಅದರ ಸೀಕ್ವೆಲ್ 'ಧುರಂಧರ್: ದಿ ರಿವೆಂಜ್' ಎರಡನ್ನೂ ಒಟ್ಟಿಗೆ ಪ್ರದರ್ಶಿಸಲು ಮುಂದಾಗಿದೆ. ಸುಮಾರು 7 ಗಂಟೆ 23 ನಿಮಿಷಗಳ ಸುದೀರ್ಘ ಅವಧಿಯ ಈ ಪ್ರದರ್ಶನವು ಮೂರು ವಿರಾಮಗಳೊಂದಿಗೆ ಒಟ್ಟು 9 ಗಂಟೆಗಳ ಕಾಲ ನಡೆಯಲಿದೆ.
-
ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾವು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ. ಸಿನಿಮಾದ ಅವಧಿ ದೀರ್ಘವಾಗಿದ್ದರೂ, ಅದು ಪ್ರೇಕ್ಷಕರಿಗೆ ಸಮಸ್ಯೆ ಆಗಿಲ್ಲ. ಬದಲಿಗೆ, ಎರಡೂ ಪಾರ್ಟ್‌ಗಳನ್ನು ಒಟ್ಟಿಗೆ ರಿಲೀಸ್ ಮಾಡಿ ಎಂಬ ವಾದವು ಕೇಳಿಬಂದಿತ್ತು. ಎರಡು ಪಾರ್ಟ್‌ಗಳನ್ನು ಒಟ್ಟಿಗೆ ಸೇರಿಸಿದರೆ, ಅದರ ಅವಧಿ 7.30 ಗಂಟೆ ದಾಟುತ್ತದೆ. ಆದರೂ ಆ ಸಿನಿಮಾವನ್ನು ನೋಡುವುದ ಸಿನಿಪ್ರಿಯರು ಸಿದ್ಧವಿದ್ದಾರೆ. ಅಂತಹ ಸಿನಿಪ್ರಿಯರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.
ಸದ್ಯ ಈ ದುರಂಧರ್ ಚಿತ್ರದ ಎರಡೂ ಭಾಗಗಳನ್ನು ಒಟ್ಟಾಗಿ ಪ್ರದರ್ಶಿಸಬೇಕೆಂಬ ಅಭಿಮಾನಿಗಳ ಬೇಡಿಕೆಗೆ ಹಾಂಕಾಂಗ್‌ನ ಚಿತ್ರಮಂದಿರವೊಂದು ಸಮ್ಮತಿಸುವ ಮೂಲಕ ಅಚ್ಚರಿ ಮೂಡಿಸಿದೆ. 'ಧುರಂಧರ್' ಭಾಗ 1 ಚಿತ್ರವು 3 ಗಂಟೆ 34 ನಿಮಿಷಗಳ ಅವಧಿಯನ್ನು ಹೊಂದಿದ್ದರೆ, ಅದರ ಸೀಕ್ವೆಲ್ 'ಧುರಂಧರ್: ದಿ ರಿವೆಂಜ್' 3 ಗಂಟೆ 49 ನಿಮಿಷಗಳ ದೀರ್ಘ ಅವಧಿಯನ್ನು ಹೊಂದಿದೆ. ಈ ಎರಡೂ ಚಿತ್ರಗಳನ್ನು ಒಟ್ಟಾಗಿ ನೋಡಬೇಕೆಂದರೆ ಪ್ರೇಕ್ಷಕರು ಸುಮಾರು 7 ಗಂಟೆ 23 ನಿಮಿಷಗಳ ಕಾಲ ಚಿತ್ರಮಂದಿರದಲ್ಲಿ ಸಮಯ ಕಳೆಯಬೇಕು.
Dhurandhar 2: ‘ಬಾಹುಬಲಿ 2’ ದಾಖಲೆ ಮುರಿದ ‘ಧುರಂಧರ್ 2’ ; ಕಲೆಕ್ಷನ್ ಏನು?
ಸದ್ಯ ಹಾಂಕಾಂಗ್‌ನಲ್ಲಿ ಮಾತ್ರ ವೀಕ್ಷಣೆಗೆ ಲಭ್ಯ!
ಇದೀಗ ಹಾಂಕಾಂಗ್‌ನ ವಿತರಣ ಸಂಸ್ಥೆ ಎಎ ಟೆಕ್ ಏಪ್ರಿಲ್ 12 ರಂದು 'ಪ್ರೀಮಿಯರ್ ಎಲಿಮೆಂಟ್ಸ್' ಚಿತ್ರಮಂದಿರದಲ್ಲಿ 'ಧುರಂಧರ್ ಮ್ಯಾರಾಥಾನ್' ಆಯೋಜಿಸಿದೆ. ಸುಮಾರು 9 ಗಂಟೆಗಳ ಕಾಲ ನಡೆಯುವ ಈ ವಿಶೇಷ ಪ್ರದರ್ಶನದಲ್ಲಿ ಮೂರು ವಿರಾಮಗಳನ್ನು ನೀಡಲಾಗುತ್ತದೆ. ಇದರಲ್ಲಿ ರಣವೀರ್ ಸಿಂಗ್ ಅವರ ಪಾತ್ರ 'ಜಸ್ಕಿರತ್ ಸಿಂಗ್ ರಂಗಿ'ಯಿಂದ 'ಹಮ್ಜಾ ಅಲಿ ಮಜಾರಿ'ಯಾಗಿ ಬದಲಾಗುವ ಮತ್ತು ಪುನಃ ಸ್ವದೇಶಕ್ಕೆ ಮರಳುವ ಸಂಪೂರ್ಣ ಕಥೆಯನ್ನು ಪ್ರೇಕ್ಷಕರು ಒಂದೇ ಬಾರಿಗೆ ನೋಡಬಹುದಾಗಿದೆ.
ಧುರಂಧರ್ ಮ್ಯಾರಥಾನ್ ಕುರಿತ ಪೋಸ್ಟ್
ಏಪ್ರಿಲ್ ಫೂಲ್ ಇರಬಹುದಾ?
ಸದ್ಯ ಧುರಂಧರ್ ಚಿತ್ರತಂಡದ ಕಡೆಯಿಂದ ಇಂಥ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ಧುರಂಧರ್ 2 ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಇಂತಹ ಹೊತ್ತಿನಲ್ಲಿ ಇಂಥದ್ದೊಂದು ದೊಡ್ಡ ರಿಸ್ಕ್ ಅನ್ನು ಚಿತ್ರತಂಡ ತೆಗೆದುಕೊಳ್ಳಲಿದೆಯಾ? ಗೊತ್ತಿಲ್ಲ. ಅಥವಾ ಏಪ್ರಿಲ್ ಫೂಲ್ ಮಾಡುವುದಕ್ಕಾಗಿ ಹಾಂಕಾಂಗ್‌ನ ವಿತರಣ ಸಂಸ್ಥೆಯು ಈ ರೀತಿ ಸುದ್ದಿಯನ್ನು ಹರಿಬಿಟ್ಟಿರಬಹುದೇ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಕಳೆದ ವರ್ಷ ಬಾಹುಬಲಿ ಸರಣಿಯ ಸಿನಿಮಾಗಳನ್ನು ಬಾಹುಬಲಿ ದಿ ಎಪಿಕ್ ಹೆಸರಿನಲ್ಲಿ ರಿಲೀಸ್ ಮಾಡಿದ್ದರು. ಅದೇ ರೀತಿ ಧುರಂಧರ್ ಚಿತ್ರದ ಬರಬೇಕು ಎಂಬ ಫ್ಯಾನ್ಸ್ ಆಸೆ ಈಡೇರಲಿದೆಯಾ? ಕಾದುನೋಡೋಣ.