ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ಅಪಚಾರ ಮಾಡುವವರಿಗೆ ಹುಚ್ಚು ಹಿಡಿಸುತ್ತೇನೆ: ಪಿಲಿಚಂಡಿ ದೈವದ ನುಡಿ

‘ಕಾಂತಾರ ಚಾಪ್ಟರ್‌ 1’ ಸಿನಿಮಾದಲ್ಲಿ ದೈವದ ಚಿತ್ರಣ ಮತ್ತು ವಿವಿಧೆಡೆ ದೈವದ ಅಪಹಾಸ್ಯ ಮಾಡುತ್ತಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪೆರಾರ ಕ್ಷೇತ್ರದಲ್ಲಿ ನಡೆದ ಪುದರ್‌ ಮೆಚ್ಚಿ ನೇಮದಲ್ಲಿ ಪಿಲಿಚಂಡಿ ಹಾಗೂ ಬಲವಂಡಿ ದೈವದ ಮುಂದೆ ಪ್ರಾರ್ಥನೆ ಮಾಡಲಾಗಿದೆ.

ಅಪಚಾರ ಮಾಡುವವರಿಗೆ ಹುಚ್ಚು ಹಿಡಿಸುತ್ತೇನೆ: ಪಿಲಿಚಂಡಿ ದೈವದ ನುಡಿ

-

ಹರೀಶ್‌ ಕೇರ ಹರೀಶ್‌ ಕೇರ Oct 9, 2025 3:53 PM

ಮಂಗಳೂರು: ದೈವಾರಾಧನೆಯನ್ನು ʼಕಾಂತಾರ ಚಾಪ್ಟರ್‌ 1ʼ (Kantara Chapter 1) ಸಿನಿಮಾದಲ್ಲಿ ಬಿಂಬಿಸಿರುವ ಹಾಗೂ ಅದನ್ನು ನೋಡಿ ಅನುಕರಣೆ ಮಾಡುತ್ತಿರುವವರ ಬಗ್ಗೆ ದೈವದ ಮುಂದೆ ಭಕ್ತರು ಅಳಲು ತೋಡಿಕೊಂಡಿದ್ದು, ʼನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ, ಹುಚ್ಚು ಹಿಡಿಯುವಂತೆ ಮಾಡುತ್ತೇನೆʼ ಎಂದು ದೈವ ನುಡಿ ನೀಡಿದೆ. ಮಂಗಳೂರು (Mangaluru) ಬಳಿ ಪೆರಾರ ಕ್ಷೇತ್ರದಲ್ಲಿ ನಡೆದ ಪಿಲಿಚಂಡಿ ದೈವದ ನೇಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ʼಕಾಂತಾರ ಚಾಪ್ಟರ್ 1ʼ ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾ ಥಿಯೇಟರ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೈವದ ಅನುಕರಣೆ ಮಾಡುತ್ತಿರುವವರ ವಿಡಿಯೋ ಹರಿದಾಡುತ್ತಿವೆ. ‘ಕಾಂತಾರ’ ಸಿನಿಮಾದಲ್ಲಿ ದೈವದ ಚಿತ್ರಣ ಮತ್ತು ವಿವಿಧೆಡೆ ದೈವದ ಅಪಹಾಸ್ಯ ಮಾಡುತ್ತಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪೆರಾರ ಕ್ಷೇತ್ರದಲ್ಲಿ ನಡೆದ ಪುದರ್‌ ಮೆಚ್ಚಿ ನೇಮದಲ್ಲಿ ಪಿಲಿಚಂಡಿ ಹಾಗೂ ಬಲವಂಡಿ ದೈವದ ಮುಂದೆ ಪ್ರಾರ್ಥನೆ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ ವೇಳೆ ಭಕ್ತರಿಗೆ ಸಮಾಧಾನದ ನುಡಿಯನ್ನು ಪಿಲಿಚಂಡಿ ದೈವದ ನುಡಿ ನುಡಿದಿದೆ.

ಇದನ್ನೂ ಓದಿ: Kantara: Chapter 1: ನೀವು ದೈವಗಳ ಅನುಕರಣೆ ಮಾಡೋದು ಸರೀನಾ?; ಕಾಂತಾರ-1 ಚಿತ್ರತಂಡದ ವಿರುದ್ಧ ನೆಟ್ಟಿಗರ ಆಕ್ರೋಶ

ʼನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ಅವರಿಗೆ ಹುಚ್ಚು ಹಿಡಿಯುವಂತೆ ಮಾಡುತ್ತೇನೆ. ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ. ಅವರಿಗೆ ಬುದ್ಧಿ ಬರುವಂತೆ ಮಾಡುತ್ತೇನೆ. ಅವರು ಸಂಗ್ರಹಿಸಿದ ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆʼ ಎಂದು ದೈವ ನುಡಿದಿದೆ. ʼಇನ್ನು ಮುಂದೆ ಎಲ್ಲಾ ದೇವಸ್ಥಾನಗಳಲ್ಲಿ ನಡೆಯು ನೇಮಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆʼ ಎಂದು ದೈವ ಆಕ್ರೋಶಪೂರ್ವಕವಾಗಿ ನುಡಿದಿದೆ ಎಂದು ತಿಳಿದುಬಂದಿದೆ.