ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Padayatra completes 3rd Day: ನೇಗಿಲು ಹೊತ್ತ ರೈತ ನಾಯಕ, ಗದ್ದೆಯಲ್ಲಿ ನಾಟಿ ಮಾಡಿದ ಕಾಯಕ

ಪಾದಯಾತ್ರೆಯುದ್ದಕ್ಕೂ ಸರಕಾರದ ವಿರುದ್ಧ ಧಿಕ್ಕಾರ ಮೊಳಗಿದವು. ಸರಕಾರ ರೈತ, ದಲಿತ, ಯುವಕರ ವಿರೋಧಿ ಎಂಬ ಆಕ್ರೋಶ ವ್ಯಕ್ತವಾಯಿತು. ಮಾರ್ಗಮಧ್ಯೆ ವಿಜಯೇಂದ್ರ ಅವರಿಗಾಗಿ ಕಾದಿದ್ದ ರಂಗಾಪುರದ ಪ್ರಾಥಮಿಕ ಶಾಲಾ ಮಕ್ಕಳತ್ತ ತೆರಳಿದ ವಿಜಯೇಂದ್ರ ಮಕ್ಕಳ ಕೈ ಕುಲುಕಿದರು. ಭತ್ತ ನಾಟಿ: ವಿಜಯೇಂದ್ರ ಅವರು ಪಾದಯಾತ್ರೆಯ ನಡುವೆ ತಾಲೂಕಿನ ಪಾಂಡುರಂಗ ಕ್ಯಾಂಪ್‌ನ ರೈತ ಪಿ. ಸಾಯಿಬಾಬು ಅವರ ಜಮೀನಿಗೆ ಭೇಟಿ ನೀಡಿದರು.

ನೇಗಿಲು ಹೊತ್ತ ರೈತ ನಾಯಕ, ಗದ್ದೆಯಲ್ಲಿ ನಾಟಿ ಮಾಡಿದ ಕಾಯಕ

-

Profile
Ashok Nayak Sep 4, 2026 8:55 AM

ಬಿಜೆಪಿ ಬಳ್ಳಾರಿ ಪಾದಯಾತ್ರೆ 3ನೇ ದಿನ ಮುಕ್ತಾಯ, 20 ಕಿಮೀ ನಡಿಗೆ ದಿನವಿಡೀ ಜನರೊಂದಿಗೆ ಬೆರೆತ ವಿಜಯೇಂದ್ರ

ರಾಯಚೂರು: ರಾಜ್ಯ ಸರಕಾರದ ವೈಫಲ್ಯ ವಿರೋಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ನೇತೃತ್ವದಲ್ಲಿ ಸಾಗಿರುವ ಬಳ್ಳಾರಿ ಚಲೋ ಪಾದಯಾತ್ರೆ ಯಶಸ್ವಿಯಾಗಿ ಮೂರನೇ ದಿನ ಪೂರೈಸಿದೆ. 3ನೇ ದಿನವೂ ಬಿಜೆಪಿ ನಾಯಕರೊಂದಿಗೆ ಸಾವಿರಾರು ಮಂದಿ ಹೆಜ್ಜೆ ಹಾಕಿದರು. ಮಸ್ಕಿ ತಾಲೂಕಿನ ಗುಡುದೂರು ಗ್ರಾಮದ ಕರಿಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಎತ್ತಿನ ಬಂಡಿಯನ್ನೇರಿದ ವಿಜ ಯೇಂದ್ರ ಅವರಿಗೆ ಗ್ರಾಮದ ರೈತರು ನೇಗಿಲು ನೀಡಿ ಗೌರವಿಸಿದರು. ನಂತರದ ಕಾಲ್ನಡಿಗೆ ಆರಂಭವಾಯಿತು.

ಪಾದಯಾತ್ರೆಯುದ್ದಕ್ಕೂ ಸರಕಾರದ ವಿರುದ್ಧ ಧಿಕ್ಕಾರ ಮೊಳಗಿದವು. ಸರಕಾರ ರೈತ, ದಲಿತ, ಯುವಕರ ವಿರೋಧಿ ಎಂಬ ಆಕ್ರೋಶ ವ್ಯಕ್ತವಾಯಿತು. ಮಾರ್ಗಮಧ್ಯೆ ವಿಜಯೇಂದ್ರ ಅವರಿಗಾಗಿ ಕಾದಿದ್ದ ರಂಗಾಪುರದ ಪ್ರಾಥಮಿಕ ಶಾಲಾ ಮಕ್ಕಳತ್ತ ತೆರಳಿದ ವಿಜಯೇಂದ್ರ ಮಕ್ಕಳ ಕೈ ಕುಲುಕಿ ದರು. ಭತ್ತ ನಾಟಿ: ವಿಜಯೇಂದ್ರ ಅವರು ಪಾದಯಾತ್ರೆಯ ನಡುವೆ ತಾಲೂಕಿನ ಪಾಂಡುರಂಗ ಕ್ಯಾಂಪ್‌ನ ರೈತ ಪಿ. ಸಾಯಿಬಾಬು ಅವರ ಜಮೀನಿಗೆ ಭೇಟಿ ನೀಡಿದರು.

ಇದನ್ನೂ ಓದಿ: BJP Padayatra: ಬರಗಾಲ; 5 ಲಕ್ಷದವರೆಗೆ ಕೃಷಿ ಸಾಲ ಮನ್ನಾ ಮಾಡಿ: ಬಿ.ವೈ.ವಿಜಯೇಂದ್ರ ಆಗ್ರಹ

ಈ ವೇಳೆ ಕೃಷಿ ಜಮೀನಿನಲ್ಲಿ ರೈತರೊಂದಿಗೆ ಕೆಲಕಾಲ ಹೆಜ್ಜೆ ಹಾಕಿ, ಉತ್ಸಾಹದಿಂದ ಭತ್ತದ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು. ಹೊಲದಲ್ಲಿ ನೇಗಿಲು ಹಿಡಿದು, ರೈತರ ಹೆಗಲಿಗೆ ಹೆಗಲು ಕೊಟ್ಟು ಗದ್ದೆಗೆ ಇಳಿದ ವಿಜಯೇಂದ್ರ ಅವರು ನಾಟಿ ಮಾಡುತ್ತಾ ರೈತರ ಕಷ್ಟ-ಸುಖ ಹತ್ತಿರದಿಂದ ವೀಕ್ಷಿಸಿ, ರೈತರೊಂದಿಗೆ ಸೆಲ್ಫೀ ತೆಗೆದುಕೊಂಡರು.

ಸಿಂಧನೂರಿನಲ್ಲಿ ಅದ್ದೂರಿ ಸ್ವಾಗತ: ಹಾರಾಪೂರ ಗ್ರಾಮಕ್ಕೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಹೂಮಳೆ ಸುರಿಸಿ, ಕುಂಭಕಳಶಗಳೊಂದಿಗೆ ಕ್ರೇನ್ ಮೂಲಕ ಬೃಹತ್ ತುಳಸಿ ಹಾರ ಹಾಕಿ ವಿಜಯೇಂದ್ರ ಅವರನ್ನು ಸ್ವಾಗತಿಸಲಾಯಿತು. ಕುನ್ನಟಗಿ ಕ್ಯಾಂಪ್‌ನಲ್ಲಿ ರೈತ ಮಹಿಳೆಯರು ಸಿದ್ಧಪಡಿಸಿದ ಊಟವನ್ನು ಸೇವಿಸಿದರು.

5 ಲಕ್ಷ ರು. ಸಾಲ ಮನ್ನಾ ಮಾಡಿ: ಸರಕಾರಕ್ಕೆ ಆಗ್ರಹ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರಕಾರ ಸೂಕ್ತ ಕ್ರಮ ಕೈಗೊಳ್ಳು ತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 3655 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಲ್ಯಾಣ ಕರ್ನಾಟಕದ 937 ಪ್ರಕರಣಗಳು ನಡೆದಿವೆ ಎಂದು ವಿಜಯೇಂದ್ರ ಹೇಳಿದರು. ರಾಜ್ಯದ 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬರಪೀಡಿತ ರೈತರ 5 ಲಕ್ಷದವರೆಗೆ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. ಜೋಳದ ಬೆಂಬಲ ಬೆಲೆಯ ಸುಮಾರು 145 ಕೋಟಿ ರು. ಬಾಕಿ ಹಣವನ್ನು ರೈತರಿಗೆ ತಕ್ಷಣ ಪಾವತಿಸ ಬೇಕು ಎಂದು ಆಗ್ರಹಿಸಿದರು.

image

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈಗಲಾದರೂ ಕನಿಷ್ಠ ಶೇ.25ರಷ್ಟು ಗಮನವನ್ನು ಅನ್ನದಾತನ ಸಮಸ್ಯೆಗಳ ಕಡೆಗೆ ಹರಿಸಿ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
image

ರಾಜ್ಯದ ರೈತರ ಸ್ಥಿತಿ ತೀರಾ ಹದಗೆಟ್ಟಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದರೂ ಸರಕಾರ ಅವರಿಗೆ ಸೂಕ್ತ ಪರಿಹಾರ ತಲುಪಿಸಿಲ್ಲ. ರೈತರು ತಮ್ಮ ಮನೆ, ಊರು ತೊರೆದು ಗುಳೆ ಹೋಗುತ್ತಿದ್ದಾರೆ.

ಶ್ರೀರಾಮುಲು, ಶಾಸಕ