Raichur News: ಲಿಂಗಸುಗೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ಕೊಲೆ ಶಂಕೆ

Raichur News: ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಐದನಾಳ ಗ್ರಾಮದಲ್ಲಿ ಕೊಲೆ ಪ್ರಕರಣ ನಡೆದಿದೆ.

Profile Prabhakara R December 27, 2024
ರಾಯಚೂರು: ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ (Raichur News) ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಐದನಾಳ ಗ್ರಾಮದಲ್ಲಿ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಗಣೇಶ್ (21) ಮೃತ ಯುವಕ. ಗ್ರಾಮದ ಹೊರವಲಯದ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ಬಾವಿ ಬಳಿ ಯುವಕ ಮದ್ಯಪಾನ ಮಾಡಿದ್ದ ಎನ್ನಲಾಗಿದ್ದು, ಕುಡಿದ ಅಮಲಿನಲ್ಲಿ ಕಾಲು ಜಾರಿ ಬಾವಿಗೆ ಬಿದ್ದಿರುವುದಾಗಿ ಸ್ನೇಹಿತರ ಹೇಳಿದ್ದಾರೆ. ಆದರೆ, ಕೊಲೆ ಮಾಡುವ ಉದ್ದೇಶದಿಂದ ಪಾರ್ಟಿ ಮಾಡಲು ಕರೆದೊಯ್ದಿರುವ ಆರೋಪ ಕೇಳಿಂದ ಹಿನ್ನೆಲೆಯಲ್ಲಿ ನಿಂಗಪ್ಪ, ರಮೇಶ್ ವಿರುದ್ಧ ಕೊಲೆ ಆರೋಪ ಪ್ರಕರಣ ದಾಖಲಾಗಿದೆ. ಮೃತ ಗಣೇಶ‌ನ ತಂದೆ ಮಾನಪ್ಪ ನೀಡಿದ ದೂರಿನ ಮೇರೆಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸುದ್ದಿಯನ್ನೂ ಓದಿ | Self Harming: ಹೊಸ ಸಂಸತ್‌ ಭವನದ ಬಳಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾವು ತನ್ನ ಹಿರಿಯ ಮಗನಾದ ಗಣೇಶನನ್ನು ಆರೋಪಿಗಳು ಯಾವುದೋ ದುರುದ್ದೇಶದಿಂದ ಡಿ. 26ರಂದು ರಾತ್ರಿ 9 ಗಂಟೆಗೆ ಮನೆಯಿಂದ ಹೊರಗಡೆ ಕರೆಯಿಸಿಕೊಂಡು, ಐದನಾಳ ಗ್ರಾಮದ ಹಳ್ಳದ ಹತ್ತಿರ ಇರುವ ಬಾವಿಯ ದಂಡೆಯ ಹತ್ತಿರ ಪಾರ್ಟಿ ಮಾಡಿ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಭಾವಿಯಲ್ಲಿ ನೂಕಿದ್ದಾರೆ ಎಂದು ತಂದೆ ಮಾನಪ್ಪ ದೂರು ನೀಡಿದ್ದಾರೆ. ಮಗ ಬಾವಿಯಲ್ಲಿ ಬಿದ್ದ ವಿಷಯ ರಾತ್ರಿ 11.45 ಗಂಟೆಗೆ ತಿಳಿದು ಬಾವಿ ಬಳಿ ಹೋಗಿ ಗಣೇಶನನ್ನು ಹೊರ ತೆಗೆದು ವೈದ್ಯಕೀಯ ಚಿಕಿತ್ಸೆ ಕುರಿತು ಲಿಂಗಸೂರು ಸರಕಾರಿ ಆಸ್ಪತ್ರೆಗೆ ಸೇರಿಸಿದಾಗ ಮಾಡಿದಾಗ ಚೇತರಿಸಿಕೊಳ್ಳದೇ ಡಿ.27ರಂದು ಮಧ್ಯರಾತ್ರಿ ಮೃತಪಟ್ಟಿದ್ದಾನೆ. ಮಗನ ಕಾಲಿನ ಎರಡು ಕಾಲಿನ ಹೆಬ್ಬೆರಳಿಗೆ ಹಾಗೂ ಇತರೆ ಬೆರಳುಗಳಿಗೆ ಗಾಯಗಳಾಗಿತ್ತು. ಹೀಗಾಗಿ ಮಗನ ಕೊಲೆ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮೃತ ಯುವಕನ ತಂದೆ ಕೋರಿದ್ದಾರೆ. ಈ ಸುದ್ದಿಯನ್ನು ಓದಿ | Actor Charith Balappa: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಕನ್ನಡ ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ ವಿಮೆ ಹಣದ ಆಸೆಗೆ ತಂದೆಯನ್ನೇ ಕೊಂದ ಕಿರಿ ಮಗ; ಮನನೊಂದು ಹಿರಿಯ ಮಗ ಆತ್ಮಹತ್ಯೆ! ಮೈಸೂರು: ಎಲ್‌ಐಸಿ ವಿಮೆ ಹಣದ ಆಸೆಗೆ ಸ್ವಂತ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ (Murder Case) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗೆರೋಸಿ ಕಾಲೋನಿಯಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕಿರಿಯ ಮಗ ಹೇಳಿದ್ದ. ಹೀಗಾಗಿ ತಂದೆಯ ಸಾವಿನಿಂದ ಮನನೊಂದು ಹಿರಿಯ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಂಡು ಕೊಲೆ ಆರೋಪಿಯಾಗಿದ್ದಾನೆ. ಈತ ತನ್ನ ತಂದೆ ಅಣ್ಣಪ್ಪನ ಹೆಸರಿನಲ್ಲಿ ವಿಮೆ ಮಾಡಿಸಿದ್ದ. ಆ ಹಣವನ್ನು ಲಪಟಾಯಿಸಲು ಸ್ವಂತ ತಂದೆಯನ್ನೆ ಕೊಲೆ ಮಾಡಿದ್ದಾನೆ. ಟಿಬೇಟಿಯನ್​ ಕ್ಯಾಂಪ್‌ನಲ್ಲಿ ಕೆಲಸ ಇದೆ ಹೋಗಿ ಎಂದು ಹೇಳಿದ್ದ ಮಗ ಪಾಂಡು ಮಾತನ್ನು ಕೇಳಿ ತಂದೆ ಅಪ್ಪಣ್ಣ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ತಲೆಗೆ ದೊಣ್ಣೆಯಿಂದ ಹೊಡೆದು ಮಗ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬಿ.ಎಂ.ರಸ್ತೆಯ ಮಂಚದೇವನಹಳ್ಳಿ ಸಮೀಪ ಎಸೆದು, ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದ. ಆದರೆ ಈ ವಿಷಯ ತಿಳಿಯದೆ ತಂದೆ ಕಳೆದುಕೊಂಡ ದುಃಖದಲ್ಲಿದ್ದ ಆರೋಪಿ ಪಾಂಡು ಅಣ್ಣ ಧರ್ಮ ಎಂಬುವವರು ಕೂಡ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ತಂದೆ ಸಾವನ್ನಪ್ಪಿದ್ದಾರೆ ಎಂದು ಪಾಂಡು ಬೈಲುಕುಪ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದನು. ಆದರೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪಾಂಡುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿಮೆ ಹಣಕ್ಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಸುದ್ದಿಯನ್ನೂ ಓದಿ | Manmohan Singh: ಶನಿವಾರ ರಾಜ್‌ಘಾಟ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅಂತ್ಯಕ್ರಿಯೆ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ