ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagavad Gita seminar: ಕುವೆಂಪು ವಿವಿಯಲ್ಲಿ ಭಗವದ್ಗೀತೆ ವಿಚಾರ ಸಂಕಿರಣ: ದಲಿತ ಸಂಘರ್ಷ ಸಮಿತಿ ವಿರೋಧ

Shivamogga News: ಈ ವಿಚಾರಗೋಷ್ಠಿ ಬಲಪಂಥೀಯ ತತ್ತ್ವದ ಅಜೆಂಡಾವನ್ನು ಉತ್ತೇಜಿಸುತ್ತಿದೆ. ರಾಷ್ಟ್ರೀಯ ಕವಿ ಕುವೆಂಪು ಅವರ ಆದರ್ಶಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಭಗವದ್ಗೀತೆಯನ್ನು ಇತಿಹಾಸದಲ್ಲಿ ಚಾತುರ್ವರ್ಣ ವ್ಯವಸ್ಥೆ ಮತ್ತು ಜಾತಿ ಪದ್ಧತಿಯನ್ನು ಸಮರ್ಥಿಸಲು ಬಳಸಲಾಗಿದೆ. ಬಲಪಂಥೀಯ ಗುಂಪುಗಳು ಇಂತಹ ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾಲಯಗಳಲ್ಲಿ ಒಂದೇ ರೀತಿಯ ತತ್ತ್ವದ ಚೌಕಟ್ಟನ್ನು ಮುನ್ನೆಲೆಗೆ ತಂದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಲಾಗಿದೆ.

ಕುವೆಂಪು ವಿಶ್ವವಿದ್ಯಾನಿಲಯ

ಶಿವಮೊಗ್ಗ: ಇಲ್ಲಿನ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ (Shivamogga Kuvempu University) ʼಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣʼ ಎಂಬ ಕುರಿತು ಮಂಗಳವಾರ ವಿಚಾರ ಸಂಕಿರಣ (Bhagavad Gita seminar) ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (KDSS) ವಿರೋಧ ವ್ಯಕ್ತಪಡಿಸಿದೆ. ಕಾರ್ಯಕ್ರಮ ನಡೆಸಿದರೆ ತಮಟೆ ಚಳವಳಿ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದೆ. ವಿಶ್ವವಿದ್ಯಾಲಯದ ಬಸವ ಮಂಟಪದಲ್ಲಿ ಸ್ವರ್ಣ ರಶ್ಮಿ ಟ್ರಸ್ಟ್, ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ಮತ್ತು ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಂದು (ನ.18) ವಿಚಾರಗೋಷ್ಠಿ ಆಯೋಜಿಸಲಾಗಿದೆ.

ಈ ವಿಚಾರಗೋಷ್ಠಿ ಬಲಪಂಥೀಯ ತತ್ತ್ವದ ಅಜೆಂಡಾವನ್ನು ಉತ್ತೇಜಿಸುತ್ತಿದೆ. ರಾಷ್ಟ್ರೀಯ ಕವಿ ಕುವೆಂಪು ಅವರ ಆದರ್ಶಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಭಗವದ್ಗೀತೆಯನ್ನು ಇತಿಹಾಸದಲ್ಲಿ ಚಾತುರ್ವರ್ಣ ವ್ಯವಸ್ಥೆ ಮತ್ತು ಜಾತಿ ಪದ್ಧತಿಯನ್ನು ಸಮರ್ಥಿಸಲು ಬಳಸಲಾಗಿದೆ. ಬಲಪಂಥೀಯ ಗುಂಪುಗಳು ಇಂತಹ ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾಲಯಗಳಲ್ಲಿ ಒಂದೇ ರೀತಿಯ ತತ್ತ್ವದ ಚೌಕಟ್ಟನ್ನು ಮುನ್ನೆಲೆಗೆ ತಂದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ ಎಂದು KDSS ಸಂಚಾಲಕ ಎಂ. ಗುರುಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಇನ್ನೊಂದು ವಿಶ್ವವಿದ್ಯಾಲಯವೂ ಇಂತಹ ವಿಚಾರಗೋಷ್ಠಿಯನ್ನು ಆಯೋಜಿಸದಿರುವಾಗ, ಕುವೆಂಪು ವಿಶ್ವವಿದ್ಯಾಲಯವೇ ಇದನ್ನು ಏಕೆ ಆಯ್ಕೆ ಮಾಡಿಕೊಂಡಿದೆ ಎಂದು KDSS ಪ್ರಶ್ನಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಉಪ ಕುಲಪತಿಗಳು ವಹಿಸುವುದಕ್ಕೂ ವಿರೋಧ ವ್ಯಕ್ತವಾಗಿದ್ದು, ಇದು ಕುವೆಂಪು ಅವರ ಸರ್ವಮಾನವ ಮೌಲ್ಯಗಳಿಗೆ ಅವಮಾನ. ಅಲ್ಲದೆ, ಆಹ್ವಾನಿತ ವಕ್ತಾರರು ಗಾಂಧಿ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ದೃಷ್ಟಿಕೋನಗಳಿಗೆ ವಿರೋಧವಾಗಿ ನಿಲ್ಲುವ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನೂ ಸಮಿತಿ ಮಾಡಿದೆ. ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇರುವಾಗ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗಿದ್ದು, ವಿಚಾರಗೋಷ್ಠಿಯನ್ನು ರದ್ದುಪಡಿಸುವಂತೆ ವಿಶ್ವವಿದ್ಯಾಲಯವನ್ನು KDSS ಒತ್ತಾಯಿಸಿದೆ.

ವಿಚಾರ ಸಂಕಿರಣದ ಔಚಿತ್ಯವೇನು?

ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ ಶ್ರೀಪಾಲ್ ಅವರು ಈ ವಿಚಾರ ಸಂಕಿರಣದ ಔಚಿತ್ಯವನ್ನು ಪ್ರಶ್ನಿಸಿ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ, ಸಂಘ ಪರಿವಾರದ ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದಾರೆ. ಇದೀಗ ಭಗವದ್ಗೀತೆಯ ಹೆಸರಲ್ಲಿ ಬರುತ್ತಿದ್ದಾರೆ. ಇವರೆಲ್ಲರೂ ಗಾಂಧಿ, ಬುದ್ದ, ಬಸವಣ್ಣ, ಅಂಬೇಡ್ಕರ್ ನಿಲುವುಗಳನ್ನು ವಿರೋಧಿಸುವ ಸಂಸ್ಥೆಯ ಸದಸ್ಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇಡೀ ದೇಶದ ವಿಶ್ವವಿದ್ಯಾಲಯಗಳನ್ನು ಒಂದೇ ಸಿದ್ಧಾಂತದ ಅಡಿಯಲ್ಲಿ ತಂದು, ವಿದ್ಯಾರ್ಥಿಗಳಿಗೆ ಸಂವಿಧಾನಕ್ಕಿಂತ ಹೆಚ್ಚಾಗಿ ಮನುಸ್ಮೃತಿಯನ್ನು ತಲೆಗೆ ತುಂಬಬೇಕು ಎಂಬ ಸಂಘ ಪರಿವಾರದ ತೀರ್ಮಾನದಂತೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಬರುತ್ತಿದ್ದವರು ಈಗ ಭಗವದ್ಗೀತೆ ಹೆಸರಿನಲ್ಲಿ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ದೂರಿದ್ದಾರೆ.

ಇದನ್ನೂ ಓದಿ: Shivamogga News: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ‌ ದಿಢೀರ್ ಭೇಟಿ‌, ಪರಿಶೀಲನೆ

ಹರೀಶ್‌ ಕೇರ

View all posts by this author