ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shimoga News: ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್‌ ಮಿನುಗುತಾರೆ

ಜಾಹೀರಾತು ಪ್ರಚಾರದ ಸಾಧನವಲ್ಲ. ಬರೀ ಮಾಹಿತಿ ನೀಡುವುದಲ್ಲ. ಉತ್ಪನ್ನಗಳ ಆತ್ಮವನ್ನು ತುಂಬಿ ಗ್ರಾಹಕರ ಭಾವನೆಗಳಿಗೆ ಜೋಡಿಸುವುದೇ ಜಾಹೀರಾತು. ಆ ಕೆಲಸವನ್ನು ಝೇಂಕಾರ್ ಅಡ್ವರ್ಟೈಸಿಂಗ್ ಮೂಲಕ ನರೇಶ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಬೆಂಗಳೂರಲ್ಲಿ ಆಗಿದ್ದರೆ ಅಷ್ಟೊಂದು ಯಶಸ್ಸು ಆಗುತ್ತಿರಲಿಲ್ಲ. ಹುಟ್ಟೂರಲ್ಲಿ ಆಗುವ ಸನ್ಮಾನವೇ ನಿಜವಾದ ಸಾರ್ಥಕ ಆಗುತ್ತದೆ

ಶಿವಮೊಗ್ಗ: ವಿಶಾಲವಾದ ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್ ಮಿನುಗುತಾರೆ ಆಗಿದ್ದು, ಜಾಹೀರಾತು ಉದ್ಯಮದಲ್ಲಿ ಹೊಸ ಗಾಳಿ, ಹೊಸತನ ತಂದಿದ್ದಾರೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಬಣ್ಣಿಸಿದರು.

ನಗರದ ಕಿಮ್ಮನೆ ಗಾಲ ರೆಸಾರ್ಟ್ ನಲ್ಲಿ ಬುಧವಾರ ವಿಜಯವಾಣಿ ದಿನಪತ್ರಿಕೆಯ ವಿಜಯರತ್ನ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಬೆಂಗಳೂರಿನ ಝೇಂಕಾರ್ ಅಡ್ವರ್ಟೈಸಿಂಗ್ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ನರೇಶ್‌ಕುಮಾರ್ ಅವರಿಗೆ ಶಿವಮೊಗ್ಗ ಗಾಂಧಿಬಜಾರ್ ಗೆಳೆಯರ ಬಳಗದಿಂದ ಆಯೋಜಿ ಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಹೀರಾತು ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಟಿ.ಎ.ನರೇಶ್‌ಕುಮಾರ್ ದೊಡ್ಡ ಮಟ್ಟದ ಸಾಧನೆ ಬಹಳ ಹತ್ತಿರದಿಂದ ನೋಡಿದ್ದೇನೆ. ಆರಂಭದಲ್ಲಿ ಬೆಂಗಳೂರಿನ ರಾಜಾಜಿ ನಗರದಲ್ಲಿ ಸಣ್ಣ ಕೊಠಡಿಯಲ್ಲಿದ್ದು, ಇಂದು ಸ್ವಂತ ಕಟ್ಟಡದಲ್ಲಿ ವಿಜೃಂಭಿಸುವುದನ್ನೂ ನೋಡಿ ದ್ದೇನೆ. ನರೇಶ್ ಅವರ ಈ ಸಾಧನೆ ನೋಡಿ ಅಭಿಮಾನ ಮತ್ತು ಸಂತೃಪ್ತಿ ಇದೆ. ಅದರ ದ್ಯೋತಕವಾಗಿ ಸ್ನೇಹಿತರು ಸಾಕ್ಷಿಭೂತರಾಗಿzರೆ. ಇದಕ್ಕಿಂತ ದೊಡ್ಡ ಸೌಭಾಗ್ಯದ ಕ್ಷಣ ಮತ್ತೊಂದು ಬರುವುದಿಲ್ಲ ಎಂದರು.

ಇದನ್ನೂ ಓದಿ: Surabhi Hudigere Column: ಧಾರ್ಮಿಕ ಪ್ರಜ್ಞೆಗೆ ಒದಗಿದ ಆಘಾತ

ಜಾಹೀರಾತು ಪ್ರಚಾರದ ಸಾಧನವಲ್ಲ. ಬರೀ ಮಾಹಿತಿ ನೀಡುವುದಲ್ಲ. ಉತ್ಪನ್ನಗಳ ಆತ್ಮವನ್ನು ತುಂಬಿ ಗ್ರಾಹಕರ ಭಾವನೆಗಳಿಗೆ ಜೋಡಿಸುವುದೇ ಜಾಹೀರಾತು. ಆ ಕೆಲಸವನ್ನು ಝೇಂಕಾರ್ ಅಡ್ವರ್ಟೈಸಿಂಗ್ ಮೂಲಕ ನರೇಶ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಬೆಂಗಳೂರಲ್ಲಿ ಆಗಿದ್ದರೆ ಅಷ್ಟೊಂದು ಯಶಸ್ಸು ಆಗುತ್ತಿರಲಿಲ್ಲ. ಹುಟ್ಟೂರಲ್ಲಿ ಆಗುವ ಸನ್ಮಾನವೇ ನಿಜವಾದ ಸಾರ್ಥಕ ಆಗುತ್ತದೆ ಎಂದು ತಿಳಿಸಿದರು.

ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಉದ್ಯಮಿ, ಮಾಜಿ ಎಂಎಲ್ಸಿ ಎಸ್. ರುದ್ರೇಗೌಡ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಪಡಾಕ್ಷರಿ, ಹಿರಿಯ ಪತ್ರಕರ್ತ ಶೃಂಗೇಶ್ ಉಪಸ್ಥಿತರಿದ್ದರು. ದೀಪಿಕಾ ಶ್ರೀಕಾಂತ್ ಮತ್ತು ತಂಡ ನಡೆಸಿಕೊಟ್ಟ ಸುಗಮ ಸಂಗೀತ ಶೋತೃಗಳ ಮನತಣಿಸಿತು. ಜ್ಞಾನೇಂದ್ರ ಕುಮಾರ್, ರಾಜಶೇಖರ್ ನಾಯ್ಡು, ಶಿವಕುಮಾರ್ ಬೆಳ್ಳಿತಟ್ಟೆ. ರೇಣುಕಾ ರಾಧ್ಯಾ, ಮನ್ಸೂರ್, ಕಿರಣ್ ಕುಮಾರ್ ಮತ್ತಿತರರು ಇದ್ದರು.

5 ರಾಜ್ಯಗಳಲ್ಲಿ ಶಾಖೆ ತೆರೆದಿದ್ದು, 200 ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. ವಿದೇಶದಲ್ಲೂ ಶಾಖೆ ತೆರೆದು ಸಾವಿರ ಜನರಿಗೆ ಉದ್ಯೋಗ ಕೊಡುವ ಗುರಿ ಇದೆ ಎಂದು ಬೆಂಗಳೂರಿನ ಝೇಂಕಾರ್ ಅಡ್ವರ್ಟೈಸಿಂಗ್ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ನರೇಶ್ ಕುಮಾರ್ ಹೇಳಿದರು.

ದುಬೈ, ಮಲೇಷಿಯಾದಲ್ಲಿ ಕಚೇರಿ ತೆರೆಯುವ ಆಸೆ ಇದೆ. ಜತೆಗೆ ಝೇಂಕಾರ್ ಫೌಂಡೇಷನ್ ತೆರೆಯುವ ಉದ್ದೇಶವಿದ್ದು, ಪತ್ರಿಕೆ ಕಚೇರಿ, ಪತ್ರಿಕೆ ಹಂಚುವವರ ಬೆಳೆಸುವ ಆಲೋಚನೆ ಇದೆ ಎಂದರು. ಶಿವಮೊಗ್ಗದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿಯು ಬೆಳೆಸಬೇಕು. ಸುಂದರ ಮುತ್ತುಗಳ ಜತೆ ಕೂರಿಸಿದ್ದಕ್ಕೆ ಅನಂತ ಧನ್ಯವಾದಗಳು.

ಇಂತಹ ಸ್ನೇಹಿತರು ಸಿಕ್ಕಿದ್ದು ನನ್ನ ಪುಣ್ಯ. ಜಾಹೀರಾತು ಕಂಪನಿ ಕಟ್ಟುವುದು ಅಷ್ಟು ಸುಲಭವಲ್ಲ. 1998ರಲ್ಲಿ ಒಂದು ಬ್ಯಾಂಕ್ ಖಾತೆ ತೆರೆಯಲು 500 ರು. ಇರಲಿಲ್ಲ. ಸ್ನೇಹಿತರ ಸಹಕಾರದಿಂದ ಕಂಪನಿ ಪ್ರಾರಂಭಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತಾಗಿದೆ. ನನ್ನ ಸಾಧನೆಗೆ ತಾಯಿ ಕಾರಣ. ಈ ಸಂಸ್ಥೆ ಕಟ್ಟುವುದಕ್ಕೆ ಹೆಗಲು ಕೊಟ್ಟಿದ್ದಾರೆ. ನನ್ನ ಕಚೇರಿ ನಿರ್ವಹಣೆಯನ್ನು ಮಾಡುತ್ತಿದ್ದು, ನಿಜವಾದ ಸಿಸಿ ಕ್ಯಾಮೆರಾ ಆಗಿದ್ದಾರೆ ಎಂದರು.

ಜಾಹೀರಾತಿನಿಂದ ಬ್ರಾಂಡ್ ಮೌಲ್ಯ ಹೆಚ್ಚಳ

ಜಾಹೀರಾತು ಕ್ಷೇತ್ರ ವಿಭಿನ್ನವಾದ, ಕಲೆಗೆ ಹೆಚ್ಚು ಪ್ರೋತ್ಸಾಹ ಕೊಡುವ ಉದ್ಯಮವಾಗಿದೆ. ಜಾಹೀ ರಾತು ಉದ್ಯಮ ಎಂದರೆ ಪ್ರಚಾರ ಕೊಡುವುದು ಎಂದು ಬಹಳಷ್ಟು ಜನ ಭಾವಿಸಿದ್ದಾರೆ. ಪ್ರಚಾರ ಕೊಡುವುದು ಅಷ್ಟೆ ಆಗಿದ್ದರೆ ಇಷ್ಟೊಂದು ಮಹತ್ವ ಬರುತ್ತಿರಲಿಲ್ಲ. ಒಂದು ಉತ್ಪನ್ನಕ್ಕೆ ಮಹತ್ವ ಕೊಡುವುದು. ಬ್ರಾಂಡ್ ಮೌಲ್ಯ ಹೆಚ್ಚಿಸುವುದು. ಗ್ರಾಹಕರ ನಂಬಿಕೆಯನ್ನು ಹೆಚ್ಚಿಸುವುದೇ ನಿಜವಾದ ಜಾಹೀರಾತು ಆಗಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.

ಸುಪ್ತ ಮನಸ್ಸಿನಲ್ಲಿರುವ ಭಾವನೆಗಳನ್ನು ಜಾಹೀರಾತು ಕನೆಕ್ಟ್ ಮಾಡುತ್ತವೆ. ಕರ್ನಾಟಕ ರಾಜ್ಯದ ಬಜೆಟ್ 4.64 ಲಕ್ಷ ಕೋಟಿ ರು. ಇದೆ. ಇಂದು ಜಾಹೀರಾತು ಬಿಸಿನೆಸ್ ರಾಜ್ಯದಲ್ಲಿ 3 ಲಕ್ಷ ಕೋಟಿ ರು. ತಲುಪಿದೆ. ಕರ್ನಾಟಕದ ಮೂರನೇ ಒಂದು ಭಾಗ ಜಾಹೀರಾತು ಉದ್ಯಮವಿದೆ.

-ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕ

ಶಿವಮೊಗ್ಗದ ಗಾಂಧಿಬಜಾರ್‌ನ ಸಣ್ಣ ಗಲ್ಲಿಯಿಂದ ದೆಹಲಿಯಲ್ಲಿ ಕಚೇರಿ ತೆರೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ರಾಜ ಕೀಯ ಹಿನ್ನೆಲೆ ಇಲ್ಲದ ನರೇಶ್ ಕುಮಾರ್, ಅಡ್ವಟೈಸರ್ಸ್ ಕಂಪನಿ ಆರಂಭಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ದೇಶದ 14 ರಾಜ್ಯಗಳಲ್ಲಿ ಶಾಖಾ ಕಚೇರಿ ಹೊಂದಿ ನೂರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. 150 ರು.ನಿಂದ ಪ್ರಾರಂಭ ವಾದ ಉದ್ದಿಮೆಯನ್ನು 300 ಕೋಟಿ ರು.ಗೆ ವಿಸ್ತರಿಸಿದ್ದಾರೆ.

-ಟಿ.ಮಂಜುನಾಥ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ

ಎಷ್ಟು ಸಂಪಾದನೆ ಮಾಡುತ್ತಿಯಾ ಎಂಬುದಕ್ಕಿಂತ ಎಷ್ಟು ಜನರಿಗೆ ಊಟ ಹಾಕಿದ್ದಿಯ ಎಂಬುದು ಮುಖ್ಯ. ಆಸ್ತಿ, ಹಣ ಸಂಪಾದನೆಗಿಂತ ಟಿ.ಎ.ನರೇಶ್‌ಕುಮಾರ್ ಅವರು ನೂರಾರು ಸ್ನೇಹಿತರನ್ನು ಸಂಪಾದಿಸಿದ್ದು ದೊಡ್ಡದು. ಹಾಲಿ 150ರಿಂದ 200 ಜನರಿಗೆ ಉದ್ಯೋಗ ಕೊಟ್ಟಿರುವುದು ಸಣ್ಣ ಸಾಧನೆಯಲ್ಲ. ಮುಂದಿನ ಐದಾರು ವರ್ಷದಲ್ಲಿ ಅವರಿಗೆ ಕನಿಷ್ಠ 500 ಜನರಿಗೆ ಉದ್ಯೋಗ ಕಲ್ಪಿಸುವ ಶಕ್ತಿಯನ್ನು ದೇವರು ಕಲ್ಪಿಸಲಿ.

-ಕೆ.ಇ.ಕಾಂತೇಶ್, ಜಿಪಂ ಮಾಜಿ ಸದಸ್ಯ