ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sling Bag Fashion: ಯುವತಿಯರ ಟ್ರಾವೆಲ್‌ ಫ್ಯಾಷನ್‌ಗೆ ಸಾಥ್‌ ನೀಡುವ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌

Sling Bag Fashion: ಯುವತಿಯರ ಟ್ರಾವೆಲ್‌ ಫ್ಯಾಷನ್‌ಗೆ ಸಾಥ್‌ ನೀಡುವ ನಾನಾ ಬಗೆಯ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳು ಇಂದು ಟ್ರೆಂಡಿಯಾಗಿವೆ. ಜತೆಗೆ ನೋಡಲು ಬಿಂದಾಸ್‌ ಲುಕ್‌ ನೀಡುತ್ತವೆ. ಈ ಸೀಸನ್‌ನಲ್ಲಿ ಯಾವ್ಯಾವ ಡಿಸೈನ್‌ನವು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

ಚಿತ್ರಗಳು: ಪಿಕ್ಸೆಲ್‌

-ಶೀಲಾಸಿ. ಶೆಟ್ಟಿ, ಬೆಂಗಳೂರು

ಯುವತಿಯರ ಟ್ರಾವೆಲ್‌ ಫ್ಯಾಷನ್‌ ಪ್ರಿಯರಿಗೆ ಸಾಥ್‌ ನೀಡಲು ನಾನಾ ಬಗೆಯ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳು (Sling Bag Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಇವು ಯೂನಿಸೆಕ್ಸ್‌ ಡಿಸೈನ್‌ನಲ್ಲಿ ಫ್ಯಾಷನ್‌ಪ್ರಿಯರ ಮನಗೆದ್ದಿವೆ. ಅದರಲ್ಲೂ ಸೆಲೆಬ್ರೆಟಿಗಳ ಕಲೆಕ್ಷನ್‌ನಲ್ಲಿ ಸ್ಥಾನಗಳಿಸಿವೆ. ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಡಿಸೈನ್‌ಗಳಲ್ಲಿ ಲಭ್ಯವಿರುವ ಇವು ಲೆಕ್ಕವಿಲ್ಲದಷ್ಟು ಕಲರ್‌ ಹಾಗೂ ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿದ್ದು, ಧರಿಸಿದಾಗ ಪಕ್ಕಾ ಟ್ರಾವೆಲರ್‌ ಲುಕ್‌ ನೀಡುವುದರೊಂದಿಗೆ ಔಟ್‌ಫಿಟ್‌ನೊಂದಿಗೆ ಮ್ಯಾಚ್‌ ಆಗುತ್ತಿವೆ. ವೈರ್‌, ಚೈನ್‌, ಲೆದರ್‌, ಸ್ಟ್ರಾಪ್‌, ಪೌಚ್‌ ಸ್ಟೈಲ್‌, ಕ್ಲಾತ್‌ ಸ್ಟ್ರಾಪ್‌, ಮಿಕ್ಸ್‌ ಮ್ಯಾಚ್‌ ಚೈನ್‌ ಹಾಗೂ ಸ್ಟ್ರಾಪ್‌, ವ್ಯಾನಿಟಿ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌, ಬೋಟ್‌ ಶೇಪ್‌, ಪರ್ಸ್‌ ಶೇಪ್‌, ಜಿಪ್‌, ಬಟನ್‌, ಹಾಲೋಗ್ರಾಫಿಕ್‌, ವಾಟರ್‌ಪ್ರೂಫ್‌, ಕಿಟ್‌ ಸ್ಟೈಲ್‌ ಸೇರಿದಂತೆ ನಾನಾ ಬಗೆಯ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಇವುಗಳಲ್ಲಿ ಇದೀಗ ಯೂನಿಸೆಕ್ಸ್‌ ಡಿಸೈನ್‌ ಇರುವಂತಹ ಬ್ಯಾಗ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

ಇತ್ತ ಹುಡುಗರೂ ಹಾಗೂ ಹುಡುಗಿಯರು ಧರಿಸಬಹುದಾದ ಇವು ನೋಡಲು ರಫ್‌ ಹಾಗೂ ಟಫ್‌ಲುಕ್‌ ನೀಡುತ್ತವೆ. ಟ್ರಾವೆಲ್‌ ಸಮಯದಲ್ಲಿ ಹುಡುಗಿಯರಿಗೆ ಬೇಸರವಾದಲ್ಲಿ ಹುಡುಗರು ಧರಿಸಬಹುದು. ನೋಡಲು ಫೆಮಿನೈನ್‌ಲುಕ್‌ ನೀಡುವುದಿಲ್ಲ. ಬದಲಿಗೆ ಟ್ರಾವೆಲ್‌ಲುಕ್‌ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.‌

Sling Bag Fashion 3

ಸೆಲೆಬ್ರೆಟಿಗಳ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಪ್ರೇಮ

ಸೆಲೆಬ್ರೆಟಿಗಳಿಗೆ ಶೋಲ್ಡರ್‌ಸ್ಲಿಂಗ್‌ ಬ್ಯಾಗ್‌ಗಳ ಮೇಲೆ ಮೋಹ ಕೊಂಚ ಹೆಚ್ಚಾಗಿಯೇ ಇದೆ. ಏರ್‌ಪೋರ್ಟ್‌ ಲುಕ್‌ನಿಂದಿಡಿದು, ದೇಶ ಪ್ರವಾಸದಲ್ಲಿ ಟ್ರೆಂಡಿಯಾಗಿರುವ ಸ್ಲಿಂಗ್‌ ಬ್ಯಾಗ್‌ಗಳಲ್ಲೆ ಇವರು ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಒಂದೊಂದು ಬಾರಿಯೂ ಒಂದೊಂದು ಬಗೆಯ ಶೋಲ್ಡರ್‌ ಬ್ಯಾಗ್‌ನಲ್ಲಿ ಟ್ರಾವೆಲ್‌ ಲುಕ್‌ ಬದಲಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಈ ರೀತಿಯ ಬ್ಯಾಗ್‌ಗಳು ಮೊದಲು ಚಾಲ್ತಿಗೆ ಬಂದದ್ದು ಹಾಲಿವುಡ್‌ನಲ್ಲಿ, ನಂತರ ಬಾಲಿವುಡ್‌ಗೆ ಕಾಲಿಟ್ಟಿತು. ಇದೀಗ ತಾರೆಯರ ಟ್ರಾವೆಲ್‌ಟೈಮ್‌ನ ಭಾಗವಾಗಿ ಹೋಗಿದೆ ಎನ್ನುತ್ತಾರೆ.

Sling Bag Fashion 1

ಸ್ಟೈಲಿಂಗ್‌ ಹೀಗೆ

ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳು ಎಲ್ಲಾ ಬಗೆಯ ಔಟ್‌ಫಿಟ್‌ಗಳಿಗೆ ಮ್ಯಾಚ್‌ ಆಗುತ್ತವೆ. ಟ್ರೆಡಿಷನಲ್‌ ಲುಕ್‌ಗೆ ಅಷ್ಟಾಗಿ ಸಾಥ್‌ ನೀಡುವುದಿಲ್ಲ. ಕ್ಯಾಶುವಲ್‌ ಬಿಂದಾಸ್‌ ಲುಕ್‌ಗೆ ಹೊಂದುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಟ್ರಾವೆಲ್‌ ಟೈಮ್‌ಗೆ ಹಾಗೂ ಔಟಿಂಗ್‌ಗೆ ಹೇಳಿ ಮಾಡಿಸಿದ ಬ್ಯಾಗ್‌ಗಳು ಇವು. ಸಾಕಷ್ಟು ಶೋಲ್ಡರ್‌ ಸ್ಲಿಂಗ್‌ಬ್ಯಾಗ್‌ಗಳಲ್ಲಿ ಮೊಬೈಲ್‌, ಕಾರ್ಡ್‌, ಕ್ಯಾಶ್‌ ಇರಿಸಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಇನ್ನು ವ್ಯಾನಿಟಿಬ್ಯಾಗ್‌ ಶೈಲಿಯವಲ್ಲಿ ಮಾತ್ರ ಒಂದಿಷ್ಟು ಹೆಚ್ಚು ಜಾಗವಿರುತ್ತದೆ. ಆದಷ್ಟೂ ಭಾರವಿರದಂತೆ ನೋಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Sling Bag Fashion 2

ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ ಪ್ರಿಯರಿಗೆ ಟಿಪ್ಸ್‌

  • ಯೂನಿಸೆಕ್ಸ್‌ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳನ್ನು ಯಾರೂ ಬೇಕಾದರೂ ಧರಿಸಬಹುದು.
  • ಆದಷ್ಟೂ ಕಾಮನ್‌ ಬಣ್ಣದವನ್ನು ಖರೀದಿಸಿ. ಎಲ್ಲವಕ್ಕೂ ಮ್ಯಾಚ್‌ ಆಗುತ್ತದೆ.
  • ಟ್ರೆಡಿಷನಲ್‌ ಔಟ್‌ಫಿಟ್‌ಗೆ ಧರಿಸಬೇಡಿ.

(ಲೇಖಕಿ: ಫ್ಯಾಷನ್‌ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Big Jumka Fashion: ಮಾನಿನಿಯರನ್ನು ಸೆಳೆಯುತ್ತಿವೆ ಕಿವಿಗಿಂತ ಅಗಲವಾದ ಬಿಗ್‌ ಜುಮುಕಿಗಳು

ಶೀಲಾ ಸಿ ಶೆಟ್ಟಿ

View all posts by this author