ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನಕಲಕುವ ಘಟನೆ; ಪಾರ್ಕ್‌ನಲ್ಲಿ ವಿಶೇಷ ಚೇತನ ಮಗುವಿಗೆ ಉಯ್ಯಾಲೆ ನಿರಾಕರಣೆ ಮಾಡಿದ ಸಿಬ್ಬಂದಿ!

Viral Video: ವಿಶೇಷ ಚೇತನ ಮಗುವೊಂದಕ್ಕೆ ಉಯ್ಯಾಲೆ ಆಡಲು ಅವಕಾಶ ನಿರಾಕರಣೆ ಮಾಡಿದ ಘಟನೆ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಗುವಿನ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಮಾಜದಲ್ಲಿ ಇನ್ನೂ ತಾರತಮ್ಯ ಮಾಡುವ ಪರಿಪಾಠ ಕಮ್ಮಿಯಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ವಿಶೇಷ ಚೇತನ ಮಗುವಿಗೆ ಪಾರ್ಕ್‌ನಲ್ಲಿ ಪ್ರವೇಶ ನಿರಾಕರಣೆ

ನವದೆಹಲಿ,ಫೆ.10: ದೆಹಲಿಯ ಸುಂದರ್ ನರ್ಸರಿ ಪಾರ್ಕ್‌ನಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.‌ ವಿಶೇಷ ಚೇತನ ಮಗುವೊಂದಕ್ಕೆ ಉಯ್ಯಾಲೆ ಆಡಲು ಅವಕಾಶ ನಿರಾಕರಣೆ ಮಾಡಿದ ಘಟನೆ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ (Viral Video) ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಗುವಿನ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಮಾಜದಲ್ಲಿ ಇನ್ನೂ ತಾರತಮ್ಯ ಮಾಡುವ ಪರಿಪಾಠ ಕಮ್ಮಿಯಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಪಾರ್ಕ್ ಸಿಬ್ಬಂದಿಯೊಬ್ಬರು ಉಯ್ಯಾಲೆ ಆಡಲು ಮಗುವಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಗು ಉಯ್ಯಾಲೆ ಆಡಲು ಬಂದಾಗ ಅದನ್ನು ತಡೆದ ಸಿಬ್ಬಂದಿ ಇವಳ ಬುದ್ದಿ ಸರಿಯಾಗಿ ಇಲ್ಲ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮಗುವಿನ ತಾಯಿ ಇದನ್ನು ಪ್ರತಿಭಟಿಸಿದಾಗ, ಭದ್ರತಾ ಸಿಬ್ಬಂದಿಯ ತಂಡ ಮಹಿಳೆಗೆ ಬೆದರಿಕೆ ಹಾಕಲು ಪ್ರಯತ್ನಿಸಿದೆ.

ವಿಡಿಯೋ ನೋಡಿ:



ಮಗುವಿನ ತಾಯಿಯೂ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಈ ಹೇಳಿಕೆಯಿಂದ ತಾನು ತೀವ್ರವಾಗಿ ನೊಂದಿದ್ದೇನೆ. ಇದನ್ನು ಅವರು ತಾರತಮ್ಯ ಮತ್ತು ಅವಮಾನಕರ ಎಂದು ಬಣ್ಣಿಸಿದ್ದಾರೆ. ಆದರೆ ಅಲ್ಲಿ ನೆರೆದಿದ್ದ ಇತರ ಪೋಷಕರು ಮಗುವಿನ ತಾಯಿಯ ಪರವಾಗಿ ನಿಂತು, ''ಎಲ್ಲಾ ಮಕ್ಕಳಿಗೂ ಆಟವಾಡುವ ಸಮಾನ ಹಕ್ಕಿದೆ" ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ವೀಡಿಯೊದ ಕೊನೆಯಲ್ಲಿ ತಾಯಿ ಮನವಿಯೊಂದನ್ನು ಮಾಡಿದ್ದಾರೆ. ಪ್ರತಿಯೊಂದು ಮಗುವಿಗೂ ಘನತೆಯಿಂದ ಆಟವಾಡುವ ಹಕ್ಕಿದೆ. ಆದ್ದರಿಂದ ದಯವಿಟ್ಟು ಯಾವುದೇ ಮಗುವನ್ನು ಉದ್ಯಾನ ವನಗಳಿಂದ ನಿಷೇಧಿಸದಂತೆ ನೋಡಿ ಕೊಳ್ಳಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಈ ಬಗ್ಗೆ ಬಳಕೆ ದಾರರೊಬ್ಬರು ವಿಶೇಷ ಚೇತನ ಮಕ್ಕಳನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ನಾಚಿಕೆ ಯಾಗುತ್ತದೆ.. ಇಂತವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಕಾಮೆಂಟ್ ಮಾಡಿದ್ದಾರೆ.