Pratap Simha: ಬಾಬರ್ ಇಲ್ಲದಿದ್ದರೂ ಬಾನು ಮುಷ್ತಾಕ್ ಅಂಥವರು ಇದ್ದಾರೆ: ಪ್ರತಾಪ್ ಸಿಂಹ
Banu Mushtaq: ಹಿಂದೆ ಯಾವನೋ ಘಜ್ನಿ, ಅಕ್ಬರ್, ಬಾಬರ್ ಬಂದಿದ್ದ ಅಂತ ಹೇಳಬೇಡಿ. ಇಂದು ಬಾಬರ್ ಇಲ್ಲದೆ ಇದ್ದರೂ ಮುಷ್ತಾಕ್ ಅಂಥವರು ನಮ್ಮ ಮಧ್ಯೆ ಇದ್ದಾರೆ. ಅದಕ್ಕಾಗಿ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ. ದೇಶ ಉಳಿಸಿಕೊಳ್ಳಲು ಹಿಂದೂಗಳು ಜಾತಿ ಬಿಟ್ಟು ಒಂದಾಗಬೇಕು ಎಂದಿದ್ದಾರೆ ಪ್ರತಾಪ್ ಸಿಂಹ.

-

ಚಿಕ್ಕಮಗಳೂರು : ಇಂದು ಬಾಬರ್ ಇಲ್ಲದೆ ಇದ್ದರೂ ಬಾನು ಮುಷ್ತಾಕ್ (Banu Mushtaq) ಅಂತಹವರು ನಮ್ಮ ಮಧ್ಯೆ ಇದ್ದಾರೆ. ಅದಕ್ಕಾಗಿ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ. ದೇಶ ಉಳಿಸಿಕೊಳ್ಳಲು ಹಿಂದೂಗಳು ಜಾತಿ ಬಿಟ್ಟು ಒಂದಾಗಬೇಕು ಎಂದು ಮೈಸೂರು ಮಾಜಿ ಸಂಸದ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಿನ್ನೆ ಸಂಜೆ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರವಾಗಿ ಅವರು ಮುಸ್ಲಿಂ ಎನ್ನುವ ಕಾರಣಕ್ಕೆ ನಾವು ವಿರೋಧ ಮಾಡಿಲ್ಲ. ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಬಗ್ಗೆ ಈ ಮೊದಲೇ ಪ್ರತಿಕ್ರಿಯೆ ನೀಡಿದ್ದೇನೆ. ಮೈಸೂರು ದಸರಾದಲ್ಲಿ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯುತ್ತದೆ. ತಾಯಿ ಚಾಮುಂಡೇಶ್ವರಿಗೆ ವಿವಿಧ ಅಲಂಕಾರ ಮಾಡಲಾಗಿರುತ್ತದೆ. ಇದು ನೂರಕ್ಕೆ ನೂರು ಧಾರ್ಮಿಕ ಕಾರ್ಯಕ್ರಮ ಎಂದಿದ್ದೆ ಎಂದರು.
ಹಿಂದೆ ಯಾವನೋ ಘಜ್ನಿ, ಅಕ್ಬರ್, ಬಾಬರ್ ಬಂದಿದ್ದ ಅಂತ ಹೇಳಬೇಡಿ. ಇಂದು ಬಾಬರ್ ಇಲ್ಲದೆ ಇದ್ದರೂ ಮುಷ್ತಾಕ್ ಅಂಥವರು ನಮ್ಮ ಮಧ್ಯೆ ಇದ್ದಾರೆ. ಅದಕ್ಕಾಗಿ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ. ದೇಶ ಉಳಿಸಿಕೊಳ್ಳಲು ಹಿಂದೂಗಳು ಜಾತಿ ಬಿಟ್ಟು ಒಂದಾಗಬೇಕು. ಅವರು ಮುಸ್ಲಿಂ ಎನ್ನುವ ಕಾರಣಕ್ಕೆ ವಿರೋಧ ಮಾಡಿಲ್ಲ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಇದೇ ಬಿಜೆಪಿ. ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತರತ್ನ ಕೊಟ್ಟಿದ್ದೂ ವಾಜಪೇಯಿ ಎಂದು ತರೀಕೆರೆಯಲ್ಲಿ ಪ್ರತಾಪ್ ಸಿಂಹ ಹೇಳಿಕೆ ಹೇಳಿದರು.
ಇದನ್ನೂ ಓದಿ: CM Siddaramaiah: ಧರ್ಮಾಂಧರಿಂದ ಮಾತ್ರ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧ: ಸಿಎಂ ಸಿದ್ದರಾಮಯ್ಯ