Chikkaballapur Crime: ಒಂಟಿ ಮಹಿಳೆಯ ಸರ ಕಳವು : ಆರೋಪಿಗಳ ಬಂಧನ, ಮಾಲು ವಶ
ಬಟ್ಲಹಳ್ಳಿ ಠಾಣಾ ವ್ಯಾಪ್ತಿಯ ದಿಗವಕೋಟೆ ಗ್ರಾಮದ ಶಾರದಮ್ಮ ಅವರು ಅಕ್ಟೋಬರ್ ೧೬ರಂದು ಒಂಟಿಯಾಗಿ ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಪರಿಚಿತರು ಕೊಲ್ಲುವುದಾಗಿ ಬೆದರಿಸಿ ಈಕೆಯ ಬಳಿಯಿದ್ದ ೩೫ ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಕಸಿದು ಹೋಗಿದ್ದರು. ಈ ಸಂಬಂಧ ಸಂತ್ರಸ್ಥೆ ನೀಡಿದ ದೂರನ್ನು ದಾಖಲಿಸಿಕೊಂಡಿದ್ದ ಬಟ್ಲಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದು ವರೆಸಿದ್ದರು.
-
ಚಿಕ್ಕಬಳ್ಳಾಪುರ : ಬಟ್ಲಹಳ್ಳಿ ಠಾಣಾ ವ್ಯಾಪ್ತಿಯ ದಿಗವಕೋಟೆ ಗ್ರಾಮದ ಶಾರದಮ್ಮ ಅವರು ಅಕ್ಟೋಬರ್ ೧೬ರಂದು ಒಂಟಿಯಾಗಿ ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಪರಿಚಿತರು ಕೊಲ್ಲುವುದಾಗಿ ಬೆದರಿಸಿ ಈಕೆಯ ಬಳಿಯಿದ್ದ ೩೫ ಗ್ರಾಂ ತೂಕದ ಬಂಗಾರದ ಮಾಂಗಲ್ಯದ ಸರವನ್ನು ಕಸಿದು ಹೋಗಿದ್ದರು. ಈ ಸಂಬಂಧ ಸಂತ್ರಸ್ಥೆ ನೀಡಿದ ದೂರನ್ನು ದಾಖಲಿಸಿಕೊಂಡಿದ್ದ ಬಟ್ಲಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದರು.
ಜಿಲ್ಲೆಯ ಎಸ್ಪಿ ಕುಶಾಲ್ ಚೌಕ್ಸೆ, ಎಸ್ಪಿ ಜಗನ್ನಾಥರೈ, ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಪಿ.ಮುರಳೀಧರ್, ಕೆಂಚಾರ್ಲಹಳ್ಳಿ ವೃತ್ತದ ಸರ್ಕಲ್ ಇನ್ಸ್ʼಪೆಕ್ಟರ್ ನಾರಾಯಣಸ್ವಾಮಿ,ಬಟ್ಲಹಳ್ಳಿ, ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ೩೭ ಮಂಜುನಾಥ ಬಿ.ಎನ್, ಪಿಸಿ ೧೨೬ ವೆಂಕಟೇಶ್ ಮತ್ತು ಪಿಸಿ ೧೧೭ ಪುವೀಣ್ ಕುಮಾರ್ ಅವರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Chikkaballapur Crime: ಬಾಡಿಗೆ ಮನೆಯಲ್ಲಿ ಇದ್ದ ದಂಪತಿ ಶವವಾಗಿ ಪತ್ತೆ
ಪ್ರಕರಣದ ಆರೋಪಿಗಳಾದ ಎ೧ ಶ್ರೀರಾಮಪ್ಪ ಎನ್ ಬಿನ್ ವೆಂಕಟೇಶಪ್ಪ, ೩೫ ವರ್ಷ, ಬೋವಿ ಜನಾಂಗ, ಗಾರೆ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಎ೨ ಶ್ರೀ ಮಾರಪ್ಪ ಬಿನ್ ನಾರಾಯಣಪ್ಪ, ೩೨ ವರ್ಷ, ಬೋವಿ ಜನಾಂಗ, ಗಾರೆ ಕೆಲಸ, ನಾರಾಯಣಹಳ್ಳಿಗ್ರಾಮ, ಚಿಂತಾಮಣಿ ತಾಲ್ಲೂಕು ರವರನ್ನು ಡಿ.೮ರಂದು ವಶಕ್ಕೆ ಪಡೆದು ಆರೋಪಿಗಳಿಂದ 325000 ರೂ ಬೆಲೆ ಬಾಳುವ ೨೫.೧೭ ಗ್ರಾಂ ತೂಕದ ಬಂಗಾರದ ಚೈನ್‌ನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.
ತನಿಖೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳಾದ ನಾರಾಯಣಸ್ವಾಮಿ ಜಿ.ಸಿ, ವೃತ್ತ ನಿರೀಕ್ಷಕರು, ಕೆಂಚಾರ್ಲಹಳ್ಳಿ ವೃತ್ತ,ಶಿವಕುಮಾರ್ ಪಿ.ಎಸ್.ಐ ಬಟ್ಲಹಳ್ಳಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ೩೭ ಮಂಜುನಾಥ ಬಿ.ಎನ್, ಪಿಸಿ ೧೨೬ ವೆಂಕಟೇಶ್ ಹಾಗೂ ಪಿಸಿ ೧೧೭ ಪ್ರವೀಣ್ ಕುಮಾರ್ ರವರ ಉತ್ತಮ ಕಾರ್ಯವನ್ನು ಎಸ್ಪಿ ಶ್ಲಾಘಿಸಿ ಅಭಿನಂದಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.