ರೋಚಕ ಹಣಾಹಣಿಯಲ್ಲಿ 3 ರನ್ ಅಂತರದಿಂದ ಗೆಲುವು ಸಾಧಿಸಿದ ಪೊಲೀಸ್ ತಂಡ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬುಧವಾರ ನಡೆದ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ ೧೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೩೧ ರನ್‌ಗಳ ಬೃಹತ್ ರನ್ ಗಳಿಸಿತು.ಇದನ್ನು ಬೆನ್ನಟ್ಟಿದ ಮಾಧ್ಯಮ ತಂಡವು ೧೦ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೨೮ ರನ್ ಗಳಿಸಿ ಕೇವಲ ೩ ರನ್‌ಗಳಿಂದ ವಿರೋಚಿತ ಸೋಲನ್ನು ಕಂಡಿತು.
ಚಿಕ್ಕಬಳ್ಳಾಪುರ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್ ಇಲಾಖೆ ಮತ್ತು ಮಾಧ್ಯಮ ತಂಡದ ನಡುವಿನ ಸೌಹಾರ್ಧ ಕ್ರಿಕೆಟ್ ಸಂದರ್ಭದಲ್ಲಿ ಎಸ್ಪಿ ಕುಶಾಲ್ ಚೌಕ್ಸೆ ಮಾತನಾಡಿದರು. -
ಚಿಕ್ಕಬಳ್ಳಾಪುರ : ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪತ್ರಕರ್ತರ ನಡುವೆ ಬುಧವಾರ ನಡೆದ ಸೌರ್ಹಾರ್ಧ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆಯ ತಂಡ ೩ ರನ್ ಅಂತರದಿAದ ಗೆಲುವು ಸಾಧಿಸಿದ್ದು ಮಾಧ್ಯಮ ತಂಡ ವಿರೋಚಿತ ಸೋಲನ್ನು ಕಂಡಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬುಧವಾರ ನಡೆದ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ ೧೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೩೧ ರನ್‌ಗಳ ಬೃಹತ್ ರನ್ ಗಳಿಸಿತು.ಇದನ್ನು ಬೆನ್ನಟ್ಟಿದ ಮಾಧ್ಯಮ ತಂಡವು ೧೦ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೨೮ ರನ್ ಗಳಿಸಿ ಕೇವಲ ೩ ರನ್‌ಗಳಿಂದ ವಿರೋಚಿತ ಸೋಲನ್ನು ಕಂಡಿತು.
ಮಾಧ್ಯಮ ವಿಭಾಗದ ದಾಂಡಿಗ ರಮೇಶ್ ೩೨ ಬಾಲ್‌ಗಳಲ್ಲಿ ೬೩ ರನ್‌ಗಳ ಗಳಿಸಿ ಅಜೇಯರಾಗಿ ಉಳಿದರು. ಇವರ ಆಟದ ವೈಖರಿಯಲ್ಲಿ ೨ ಬೌಂಡರಿ, ೭ ಭರ್ಜರಿ ಸಿಕ್ಸ್ಗಳು ಬಂದವು.
ಇದನ್ನೂ ಓದಿ:Chikkaballapur News: ಯುವಶಕ್ತಿಗೆ ದೊರೆತಿರುವ ರಾಷ್ಟ್ರಮಟ್ಟದ ಅವಕಾಶ ಸದುಪಯೋಗವಾಗಲಿ: ಭಾನು ಚೈತನ್ಯ ವರ್ಮಾ
ಪೊಲೀಸ್ ವಿಭಾಗದಲ್ಲಿ ಬಾಗೇಪಲ್ಲಿ ಠಾಣೆಯ ಪಿಎಸ್‌ಐ ಸುನಿಲ್ ೨೩ ಬಾಲುಗಳಲ್ಲಿ ೪೩ ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಗೇಪಲ್ಲಿ ಡಿ.ಆರ್. ಪೊಲೀಸ್ ಪೇದೆ ರಾಜು ಕೂಡ ೧೯ ಬಾಲ್‌ಗಳಲ್ಲಿ ೪೩ರನ್ ಸಿಡಿಸಿ ರಾಮದಾಸ್ ಬೌಲಿಂಗ್‌ನಲ್ಲಿ ಕ್ಯಾಚಿತ್ತರು.
ಹೀಗೆ ಯಾವುದೇ ರಾಷ್ಟ್ರೀಯ ಆಟಗಳಿಗೂ ಕಡಿಮೆಯಿಲ್ಲದಂತೆ ರಣರೋಚಕವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮದವರ ನಡುವೆ ನಡೆದುಕೊಂಡು ಬರುತ್ತಿದ್ದು ಉತ್ತಮ ಬಾಂಧವ್ಯಕ್ಕೆ ಭದ್ರ ಬುನಾದಿ ಹಾಕಿತು.
ಪಂದ್ಯಾವಳಿ ನಂತರ ಮಾತನಾಡಿದ ಎಸ್ಪಿ ಕುಶಾಲ್ ಚೌಕ್ಸೆ ಮಾಧ್ಯಮ ವಿಭಾಗ ಮತ್ತು ಪೊಲೀಸ್ ಇಲಾಖೆ ನಡುವೆ ದಶಕಗಳಿಗೂ ಹೆಚ್ಚು ಕಾಲದಿಂದ ಕ್ರಿಕೆಟ್ ಪಂದ್ಯಾವಳಿ ನಡೆದುಕೊಂಡು ಬರುತ್ತಿದೆ. ಎರಡೂ ವಿಭಾಗಗಳೂ ಕೂಡ ಸದಾಕಾಲ ಒತ್ತಡದಲ್ಲಿಯೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುತ್ತವೆ. ಈ ನಡುವೆ ಇಂತಹ ಸೌಹಾರ್ಧ ಆಟಗಳ ಮೂಲಕ ಕೊಂಚ ಮಟ್ಟಿಗೆ ಒತ್ತಡದ ಬದುಕಿನಿಂದ ಬಿಡುಗಡೆ ಪಡೆದು ಸಂತೋಷದಿಂದ ಕಾಲಕಳೆಯುವುದನ್ನು ನೋಡುವುದೇ ಚೆನ್ನ. ಬುಧವಾರ ನಡೆದ ರಣರೋಚಕ ಪಂದ್ಯದಲ್ಲಿ ನಮ್ಮ ಪೊಲೀಸ್ ತಂಡ ೩ ರನ್‌ಗಳ ಅಂತರದಿAದ ಗೆಲುವು ಸಾಧಿಸಿದ್ದು ಅತ್ಯಂತ ಖುಷಿಯ ಸಂಗತಿ. ಈ ಬಾಂಧವ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಎಎಸ್ಪಿ ಜಗನ್ನಾಥರೈ ಮಾತನಾಡಿ, ಮಾಧ್ಯಮ ಮತ್ತು ಪೊಲೀಸ್ ಇಲಾಖೆ ನಡುವೆ ನಡೆದ ಕ್ರಿಕೆಟ್ ಆಟ ತುಂಬಾ ಚೆನ್ನಾಗಿ ಮೂಡಿಬಂದಿತು. ನಿಮ್ಮ ಕೆಲಸ ನಮ್ಮಷ್ಟೇ ಮಹತ್ವದ್ದಾಗಿದ್ದು ರಾಥ್ರಿ ಹಗಲು ಕೆಲಸ ಮಾಡುವಂತಹದ್ದು. ಇಂತಹ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಿದ್ದೇವೆ.ರಮೇಶ್ ಅವರ ಅಮೋಘ ಆಟದ ನಡುವೆ ನಮ್ಮ ತಂಡ ಗೆಲುವು ಕಂಡಿದೆ.ಇದು ವರ್ಷಕ್ಕೆ ಒಮ್ಮೆ ಆಡುವ ಬದಲು ಆಗಾಗ ನಡೆಯಲಿ ಎಂದರು.
ಜಿಲ್ಲೆಯಲ್ಲಿ ಡಿ,೧೨ರಿಂದ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ.ಸಾರ್ವಜನಿಕರು ಯಾರಿಗೋ ಹೆದರಿ ಹೆಲ್ಮೆಟ್ ಧರಿಸುವುದು ಬೇಡ. ನಿಮ್ಮನ್ನು ನಂಬಿಕೊAಡು ನಿಮ್ಮ ಕುಟುಂಬ ಇದೆ.ನಿಮಗಾಗಿ ಅವರ ಸಂತೋಷಕ್ಕಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ. ಸಂಚಾರ ನಿಯಮ ಗಳನ್ನು ಪಾಲಿಸಿ, ವಾಹನ ಚಾಲನಾ ಪರವಾನಗಿ, ಇನ್ಸೂರೆನ್ಸ್ ಇಟ್ಟುಕೊಂಡೇ ವಾಹನ ಚಲಾಯಿಸಿ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ ಜಿಲ್ಲಾ ಪತ್ರಕರ್ತರ ತಂಡ ಮತ್ತು ಪೊಲೀಸ್ ಇಲಾಖೆ ನಡುವೆ ಪ್ರತಿವರ್ಷ ನಡೆಯುವ ಕ್ರಿಕೆಟ್ ಪಂದ್ಯಾವಳಿ ನೋಡುವುದೇ ಚೆನ್ನ. ಈ ಬಾರಿ ಹೆಚ್ಚು ಮಂದಿ ಮಾಧ್ಯಮದವರು ಕ್ರಿಕೆಟ್ ವೀಕ್ಷಣೆ ಮಾಡಿ ತಂಡವನ್ನು ಹುರಿದುಂಬಿಸಿದ್ದು ವಿಶೇಷ.೧೩೧ ರನ್‌ಗಳ ಬೆನ್ನಟ್ಟಿದ ನಮ್ಮ ತಂಡ ಕೇವಲ ೩ ರನ್‌ಗಳಿಂದ ವಿರೋಚಿತ ಸೋಲು ಕಂಡಿದೆ. ನನ್ನ ಪ್ರಕಾರ ಇದು ಸೋಲಲ್ಲ, ಗೆಲುವೆಂದೇ ಭಾವಿಸುತ್ತೇನೆ.ಜಿಲ್ಲಾ ಪೊಲೀಸ್ ಇಲಾಖೆ ಜತೆಗೂಡಿ ಡಿಸೆಂಬರ್ ೧೨ರಿಂದ ಕಡ್ಡಾಯ ಹೆಲ್ಮೆಟ್ ಜಾರಿಯ ಯಶಸ್ಸಿಗೆ ಜಿಲ್ಲಾ ಪತ್ರಕರ್ತರ ಸಂಘವೂ ಕೂಡ ಕೈಜೋಡಿಸಲಿದೆ ಎಂದರು.
ಈ ವೇಳೆ ಡಿವೈಎಸ್ಪಿ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ಶರಣಪ್ಪ, ನಗರಠಾಣೆಯ ಅಮರ್ ಮೊಗಳಿ, ನಂದಿಗಿರಿಧಾಮದ ಸಬ್ ಇನ್ಸ್ಪೆಕ್ಟರ್ ಹರೀಶ್, ಹಿರಿಯ ಪತ್ರಕರ್ತರಾದ ಬಾಲಕೃಷ್ಣ, ದಯಾಸಾಗರ್ ಕೆನಡಿ,ಸೋಮಣ್ಣ, ಜಿಲಾನಿ, ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ಮುಬಾಷಿರ್, ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜ್,ಖಜಾಂಚಿ ಮುದ್ದುಕೃಷ್ಣ,ಜಿಲ್ಲಾಧ್ಯಕ್ಷ ರವಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರೇಗೌಡ ಸೇರಿದಂತೆ ಅನೇಕರು ಇದ್ದರು.