ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tomato Price Hike: ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಹೆಚ್ಚಳ, ಗ್ರಾಹಕ ಕಂಗಾಲು

Vegetables Price hike: ಬೇಡಿಕೆಗೆ ತಕ್ಕಂತೆ ಟೊಮೆಟೋ ವಿತರಣೆಯಾಗದ ಹಿನ್ನೆಲೆ ಈ ಬಿಕ್ಕಟ್ಟು ಉದ್ಭವವಾಗಿದೆ ಎಂದು ಕೆಲವು ವ್ಯಾಪಾರಿಗಳು ಹೇಳಿದ್ದಾರೆ. ನಮ್ಮ ಬೇಡಿಕೆಗೆ ತಕ್ಕಷ್ಟು ಟೊಮೆಟೋ ಪೂರೈಕೆ ಆಗುತ್ತಿಲ್ಲ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವ್ಯಾಪಾರಿ ಅಹಮದ್ ಎಂಬವರು ತಿಳಿಸಿದ್ದಾರೆ. ನಿಲ್ಲದ ಮಳೆಯಂದಾಗಿ ಟೊಮೆಟೊ ಬೆಳೆಯಲ್ಲಿ ಏರುಪೇರಾಗಿದೆ. ಸಾಕಷ್ಟು ಪೂರೈಕೆಯಾಗಿಲ್ಲ. ದಾಸ್ತಾನು ವ್ಯವಸ್ಥೆ ಕೂಡ ಆಗಿಲ್ಲ. ಹೀಗಾಗಿ ಬೆಲೆ ಹೆಚ್ಚಳವಾಗಿದೆ.

ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಹೆಚ್ಚಳ,  ಗ್ರಾಹಕ ಕಂಗಾಲು

ಟೊಮೆಟೊ ಬೆಲೆ ಏರಿಕೆ -

ಹರೀಶ್‌ ಕೇರ
ಹರೀಶ್‌ ಕೇರ Nov 26, 2025 9:47 AM

ಬೆಂಗಳೂರು, ನ.26: ರಾಜ್ಯಾದ್ಯಂತ ಟೊಮೆಟೊ ಬೆಲೆ (tomato price hike) ತೀವ್ರವಾಗಿ ಏರಿವೆ. ಕೋಲಾರ ಮೊದಲಾದ ಕಡೆಗಳ ಸಗಟು ಮಾರುಕಟ್ಟೆಗಳು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯಾಗಿದ್ದು, ರಾಜಧಾನಿಯ ಬೆಲೆಯೂ ತೀವ್ರವಾಗಿ ಏರಿದೆ. ಬೆಂಗಳೂರಿನಲ್ಲಿ (Bengaluru) ಕಳೆದ ವಾರ ಕೆಜಿಗೆ 30-40 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೋ ಪ್ರಸ್ತುತ 70-80 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪಕ್ಕದ ಆಂಧ್ರಪ್ರದೇಶದಲ್ಲಿ ಕೂಡ ಏಷ್ಯಾದ ಅತಿದೊಡ್ಡ ಟೊಮೆಟೊ ವ್ಯಾಪಾರ ಕೇಂದ್ರಗಳಲ್ಲಿ ಒಂದಾದ ಮದನಪಲ್ಲಿ, ಚಿತ್ತೂರು ಕೃಷಿ ಮಾರುಕಟ್ಟೆಗಳಲ್ಲಿ, ಮೊದಲ ದರ್ಜೆಯ ಟೊಮೆಟೊ 10 ಕೆಜಿಗೆ ₹610 ತಲುಪಿದರೆ, ಎರಡನೇ ದರ್ಜೆಯ ಟೊಮೆಟೊ ಸೋಮವಾರ ₹480 ಕ್ಕೆ ಮಾರಾಟವಾಯಿತು. ಕೇವಲ ಒಂದು ವಾರದ ಹಿಂದೆ, ಅದೇ ಪ್ರಭೇದಗಳು ₹440 ಮತ್ತು ₹340 ಕ್ಕೆ ಮಾರಾಟವಾದವು.

ಟೊಮೆಟೋ ಬೆಲೆ ಏರಿಕೆಗೆ ಕಾರಣವೇನು?

ಬೇಡಿಕೆಗೆ ತಕ್ಕಂತೆ ಟೊಮೆಟೋ ವಿತರಣೆಯಾಗದ ಹಿನ್ನೆಲೆ ಈ ಬಿಕ್ಕಟ್ಟು ಉದ್ಭವವಾಗಿದೆ ಎಂದು ಕೆಲವು ವ್ಯಾಪಾರಿಗಳು ಹೇಳಿದ್ದಾರೆ. ನಮ್ಮ ಬೇಡಿಕೆಗೆ ತಕ್ಕಷ್ಟು ಟೊಮೆಟೋ ಪೂರೈಕೆ ಆಗುತ್ತಿಲ್ಲ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವ್ಯಾಪಾರಿ ಅಹಮದ್ ಎಂಬವರು ತಿಳಿಸಿದ್ದಾರೆ. ನಿಲ್ಲದ ಮಳೆಯಂದಾಗಿ ಟೊಮೆಟೊ ಬೆಳೆಯಲ್ಲಿ ಏರುಪೇರಾಗಿದೆ. ಸಾಕಷ್ಟು ಪೂರೈಕೆಯಾಗಿಲ್ಲ. ದಾಸ್ತಾನು ವ್ಯವಸ್ಥೆ ಕೂಡ ಆಗಿಲ್ಲ. ಹೀಗಾಗಿ ಬೆಲೆ ಹೆಚ್ಚಳವಾಗಿದೆ.

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

ಟೊಮೆಟೋ ಮಾತ್ರವಲ್ಲದೆ ಇನ್ನೂ ಹಲವು ತರಕಾರಿಗಳ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಟಾಣಿ, ಬೀನ್ಸ್, ಕ್ಯಾರೆಟ್, ನೌಕಲ್, ಬದನೇಕಾಯಿ, ಮೆಣಸಿನಕಾಯಿ ಸೇರಿ ಹತ್ತು ಹಲವು ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ಹೆಚ್ಚಿದೆ.

ತರಕಾರಿ – ಕಳೆದ ವಾರದ ಬೆಲೆ – ಪ್ರಸ್ತುತ ಬೆಲೆ (ರೂ.ಗಳಲ್ಲಿ)

ಟೊಮೆಟೋ – 40 – 70

ಬಟಾಣಿ – 60 – 100

ಬೀನ್ಸ್ – 50 – 60

ನೌಕಲ್ – 30 – 40

ಬದನೇಕಾಯಿ – 40 – 50

ಮೆಣಸಿನಕಾಯಿ – 60 – 80

ಮೂಲಂಗಿ- 60 – 80

ತೊಂಡೆಕಾಯಿ- 50 – 60

ಬೆಂಡೆಕಾಯಿ- 50 – 60

ಬೆಳ್ಳುಳ್ಳಿ- 100 – 120