ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Transgender murder: ಬೆಂಗಳೂರಲ್ಲಿ ಕೋಟ್ಯಧಿಪತಿ ಮಂಗಳಮುಖಿಯ ಭೀಕರ ಹತ್ಯೆ; ಆಸ್ತಿಗಾಗಿ ಗಂಡನೇ ಕೊಲೆ ಮಾಡಿದ್ನಾ?

Transgender murder: ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆ ಹಾಗೂ ಎನ್‌ಜಿಒ ಮೂಲಕ ಗುರುತಿಸಿಕೊಂಡಿದ್ದ ಮಂಗಳಮುಖಿ ಕೋಟ್ಯಂತರ ಆಸ್ತಿ ಹೊಂದಿದ್ದಳು. ಈಕೆಯ ಹಣಕ್ಕಾಗಿಯೇ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಲ್ಲಿ ಕೋಟ್ಯಧಿಪತಿ ಮಂಗಳಮುಖಿಯ ಭೀಕರ ಹತ್ಯೆ

Profile Prabhakara R Apr 20, 2025 10:31 PM

ಬೆಂಗಳೂರು: ಮಂಗಳಮುಖಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ (Transgender murder) ಕೆ.ಆರ್.ಪುರದ ಬಸವೇಶ್ವರ ನಗರದ ಗಾಯತ್ರಿ ಲೇಔಟ್‌ನಲ್ಲಿ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಮಂಗಳಮುಖಿಯನ್ನು ಕೊಲೆ ಮಾಡಿದ್ದಾರೆ. ತನುಶ್ರೀ (40) ಮೃತ ಮಂಗಳಮುಖಿಯಾಗಿದ್ದು, ಕಳೆದ 3 ತಿಂಗಳ ಹಿಂದೆಯಷ್ಟೇ ಈಕೆ ಜಗನ್ನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಇದೀಗ ಮನೆಯಲ್ಲಿಯೇ ಈಕೆಯ ಕೊಲೆ ನಡೆದಿದೆ. ಕನ್ನಡಪರ ಸಂಘಟನೆ ಹಾಗೂ ಎನ್‌ಜಿಒ ಮೂಲಕ ಗುರುತಿಸಿಕೊಂಡಿದ್ದ ಮಂಗಳಮುಖಿ ತನುಶ್ರೀ ಕೋಟ್ಯಂತರ ಆಸ್ತಿ ಹೊಂದಿದ್ದಳು. ಈಕೆಯ ಹಣಕ್ಕಾಗಿಯೇ ಮದು‌ವೆ ಮಾಡಿಕೊಂಡು ಜಗನ್ನಾಥ್ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಕೊಲೆ ಬಳಿಕ ಪತಿ ಜಗನ್ನಾಥ್ ಹಾಗೂ ತನುಶ್ರೀ ಅವರ ಮನೆಗೆಲಸದಾಕೆ ಇಬ್ಬರೂ ಪರಾರಿಯಾಗಿದ್ದಾರೆ. ಮಂಗಳಮುಖಿ ತನುಶ್ರೀ ರಕ್ಷಣಾ ವೇದಿಕೆ ಕಾರ್ಯಕರ್ತೆ ಆಗಿದ್ದರು. ಸಂಗಮ ಎನ್ ಜಿಓ ನಡೆಸುತ್ತಿದ್ದರು. ಈಕೆ 40 ವರ್ಷಕ್ಕೆ ಬರುವ ವೇಳೆಗೆ ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದಳು. ಈಕೆಯ ಆಸ್ತಿ ನೋಡಿ ಜಗನ್ನಾಥ್ ಮದುವೆ ಮಾಡಿಕೊಂಡಿದ್ದ. ಹೆಂಡತಿ ಕೊಲೆ ಬೆನ್ನಲ್ಲಿಯೇ ಪರಾರಿ ಆಗಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪುರಂ ಠಾಣೆಯ ಪೋಲಿಸರು ಪರಿಶೀಲನೆ ನಡೆಸಿದ್ದಾರೆ. ನಾಯಕಿಯಂತಿದ್ದ ತನುಶ್ರೀಯನ್ನು ಕಳೆದುಕೊಂಡು ಇತರ ಮಂಗಳಮುಖಿಯರು ದುಃಖಿತರಾಗಿದ್ದಾರೆ. ಪೊಲೀಸರು ಪರಾರಿಯಾಗಿರುವ ಪತಿ ಜಗನ್ನಾಥ್ ಹಾಗೂ ತನುಶ್ರೀ ಮನೆ ಕೆಲಸದಾಕೆ ಪತ್ತೆಗೆ ಹುಡುಕಾಟಆರಂಭಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Self Harming: 8 ವರ್ಷದಿಂದ ಪ್ರೀತಿಸಿ, ಕೈಕೊಟ್ಟ ವಿವಾಹಿತ ಶಿಕ್ಷಕಿ; ಮನನೊಂದು ಶಿಕ್ಷಕ ಆತ್ಮಹತ್ಯೆ

ಮಾಜಿ ಡಿಜಿ-ಐಜಿಪಿ ಓಂ ಪ್ರಕಾಶ್‌ ಪತ್ನಿ ಅರೆಸ್ಟ್

ಬೆಂಗಳೂರು: ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ (Om Prakash Murder ) ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ಓಂ ಪ್ರಕಾಶ್ ಅವರನ್ನು 8 ರಿಂದ 10 ಬಾರಿ ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದಿದ್ದರು ಎನ್ನಲಾಗಿದೆ. ಇನ್ನು ಕೊಲೆ ಬಳಿಕ I Have Finished Monster ಎಂದು ಮತ್ತೊಬ್ಬ ಮಾಜಿ ಡಿಜಿ ಮತ್ತು ಐಜಿಪಿ ಪತ್ನಿಗೆ ಪಲ್ಲವಿ ವಿಡಿಯೊ ಕಾಲ್‌ ಮಾಡಿ ಹೇಳಿದ್ದಾರೆ ಎನ್ನಲಾಗಿದೆ.

ಓಂ ಪ್ರಕಾಶ್ ಅವರ ಎದೆ, ಹೊಟ್ಟೆ, ಕೈಗೆ ಚಾಕುವಿನಿಂದ ಇರಿದು ಪತ್ನಿ ಪಲ್ಲವಿ ಹತ್ಯೆಗೈದಿದ್ದಾರೆ. ಚಾಕು ಇರಿದಿದ್ದರಿಂದ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡಿ ಮಾಜಿ ಡಿಜಿ ಮತ್ತು ಐಜಿಪಿ ಪ್ರಾಣ ಬಿಟ್ಟಿದ್ದಾರೆ. ಕೊಲೆ ಬಳಿಕ ನಾನು ರಾಕ್ಷಸನನ್ನು ಮುಗಿಸಿದೆ ಎಂದು ವಿಡಿಯೊ ಕಾಲ್‌ನಲ್ಲಿ ಪತ್ನಿ ಪಲ್ಲವಿ ಹೇಳಿರುವುದಾಗಿ ತಿಳಿದುಬಂದಿದೆ.

ಕೊಲೆಯಾಗಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ 68 ವರ್ಷ ವಯಸ್ಸಾಗಿತ್ತು. 1981ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿ ಓಂ ಪ್ರಕಾಶ್ ಅವರು ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದರು. 2015ರ ಅವಧಿಯಲ್ಲಿ ಡಿಜಿ ಮತ್ತು ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರು ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ನಲ್ಲಿ ವಾಸವಿದ್ದರು.

ಓಂ ಪ್ರಕಾಶ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅವರು ತಮ್ಮ ಪತ್ನಿ ಪಲ್ಲವಿ ಜತೆ ವಾಸಿಸುತ್ತಿದ್ದರು. ಕೆಲವು ದಿನಗಳಿಂದ ಗಂಡ ಹೆಂಡತಿಯ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ವೈಯಕ್ತಿಕ ವಿಚಾರಗಳಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.