ಗುಬ್ಬಿ : ಡಾಕ್ಟರ್ ಬಾಬು ಜಗಜೀವನ್ ರಾಮ್ ಆದಿ ಜಾಂಬವ ಯುವ ಬ್ರಿಗೇಡ್ ವತಿಯಿಂದ ಬಾಬು ಜಗಜೀವನ ರಾಮ್ ರವರ 39ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಆಯೋಜಿಸಲಾಗಿತ್ತು.
ಆದಿ ಜಾಂಬವ ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಬಸವರಾಜು ಎಚ್ ಮಾತನಾಡಿ ಬಾಬು ಜಗಜೀವನ ರಾಮ್ ರವರು ಅನೇಕ ಖಾತೆಗಳನ್ನು ನಿರ್ವಹಿಸಿ ಅವರದೇ ಆದ ಚಾಪೂ ಮೂಡಿಸಿ ದ್ದಾರೆ. ಕಾರ್ಮಿಕ ಇಲಾಖೆ ಮತ್ತು ಕೃಷಿ ಇಲಾಖೆಯಲ್ಲಿ ಅವರ ಕೆಲಸವು ಸ್ಮರಣೀಯವಾದದ್ದು. 12 ಗಂಟೆ ದುಡಿಯುವ ಕಾರ್ಮಿಕರಿಗೆ 8 ಗಂಟೆ ಕೆಲಸ ಹಾಗೂ ಪಿಎಫ್, ಇ ಎಸ್ಐ ಅಂತಹ ಸೌಲಭ್ಯ ಗಳನ್ನು ಕೊಡಿಸಲು ಅವಿಸ್ಮರಣೀಯ ಹಾಗೆ ಆಹಾರದ ಕೊರತೆ ದೇಶದಲ್ಲಿ ಉದ್ಭವವಾದಾಗ ರೈತರು ಜಮೀನುಗಳಲ್ಲಿ ವ್ಯವಸಾಯ ಮಾಡಲು ಹುರಿದುಂಬಿಸಿ ಹಸಿರು ಕ್ರಾಂತಿಯ ನೇಕಾರರಾಗಿರುತ್ತಾರೆ.
ಇದನ್ನೂ ಓದಿ: Gubbi (Tumkur) News: ಗೂಗಲ್ ಲೊಕೇಶನ್ ಬಳಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ..!
ಇವರು ಇಡೀ ದೇಶವನ್ನು ಆಳುವಂಥ ಸಮರ್ಥ ನಾಯಕರಾಗಿದ್ದು ಪ್ರಧಾನಮಂತ್ರಿ ಹುದ್ದೆಯನ್ನು ಹೊಂದುವ ಅರ್ಹತೆ ಇದ್ದರು ಇವರಿಗೆ ಉಪ ಪ್ರಧಾನಿಯನ್ನು ಮಾಡಿದರು. ಸ್ವತಂತ್ರ ಪೂರ್ವದಲ್ಲಿ ಸ್ವತಂತ್ರಕ್ಕಾಗಿ ಹೋರಾಡಲು ಶೋಷಿತ ವರ್ಗದವರನ್ನು ಒಟ್ಟುಗೂಡಿಸಿ ಮುಂಚೂಣಿ ನಾಯಕರಾಗಿ ಸ್ವತಂತ್ರ ಪಡೆಯಲು ಹೋರಾಡಿದವರಲ್ಲಿ ಒಬ್ಬ ನಾಯಕ ರಾಗಿದ್ದಾರೆ. ಇಂತಹ ಮಹಾನಿಯರ ಸ್ಮರಣೆ ನಮಗೆ ಅಗತ್ಯವಾಗಿದ್ದು. ಮುಂದಿನ ಪೀಳಿಗೆ ಇವರ ಕೊಡುಗೆಗಳನ್ನು ತಿಳಿಸುತ್ತಾ ಜನಾಂಗದ ಬಗ್ಗೆ ಮತ್ತು ನಾಯಕತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಗನ್ನಾಥ್, ಬಾಬು ಜಗಜೀವನ್ ರಾಮ್ ಯುವ ಬ್ರಿಗೇಡಿನ ಗೌರವ ಅಧ್ಯಕ್ಷ ಮುದ್ದಯ್ಯ ತಿಪ್ಪೂರು, ಪ್ರಧಾನ ಕಾರ್ಯದರ್ಶಿ ಶಿವರಾಜು ಹಂಡನಳ್ಳಿ, ಖಜಾಂಚಿ ಇರಕ ಸಂದ್ರ ನರಸಿಂಹಮೂರ್ತಿ, ದಲಿತ್ ಗಂಗಣ್ಣ, ಸಚಿನ್, ಗಿರೀಶ್, ಮಧು, ನವೀನ್ ,ಕುಮಾರ್ ಹೇರೂರು, ಶಾರದಮ್ಮ ತಿಪ್ಪೂರು ಭಾಗವಹಿಸಿದ್ದರು.