Tumkur News: ವಿವಿಧ ಪ್ರಕರಣಗಳಲ್ಲಿ 170 ಕಳ್ಳರ ಬಂಧನ, 5.61 ಕೋಟಿ ಮೌಲ್ಯದ ಚಿನ್ನಾಭರಣ ಸೇರಿ ಕಳವು ಮಾಲು ವಶಕ್ಕೆ
Tumkur News: ತುಮಕೂರು ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, 2025ರ ಫೆಬ್ರವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 170 ಜನ ಕಳ್ಳರನ್ನು ಬಂಧಿಸಿ 5,61,34,580 ರೂ. ಮೌಲ್ಯದ ಕಳವು ಮಾಲುಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸ್ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.


ತುಮಕೂರು: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ 170 ಜನ ಕಳ್ಳರನ್ನು ಬಂಧಿಸಿ, 5,61 ಕೋಟಿ ರೂ ಮೌಲ್ಯದ ಚಿನ್ನಾಭರಣ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 1 ಲಾಭಕ್ಕಾಗಿ ಕೊಲೆ ಪ್ರಕರಣ, 3 ದರೋಡೆ ಪ್ರಕರಣ, 5 ಸುಲಿಗೆ ಪ್ರಕರಣ, 21 ಸರಗಳ್ಳತನ ಪ್ರಕರಣ, 39 ಮನೆ ಕನ್ನಕಳವು, 53 ಸಾಮಾನ್ಯ ಕಳವು ಮತ್ತು 8 ಗಮನ ಬೇರೆಡೆ ಸೆಳೆದು ಕಳವು ಮತ್ತು 1 ಸೈಬರ್ ಅಪರಾಧ ಪ್ರಕರಣ ಸೇರಿ ಒಟ್ಟು 130 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ತುಮಕೂರು ಉಪ ವಿಭಾಗದಿಂದ ಒಟ್ಟು 48 ಆರೋಪಿಗಳನ್ನು ಬಂಧಿಸಿ 1,46,12,210 ರೂ. ಮೌಲ್ಯದ ವಸ್ತುಗಳು, ಕುಣಿಗಲ್ ಉಪವಿಭಾಗದಿಂದ ಒಟ್ಟು 46 ಆರೋಪಿಗಳನ್ನು ಬಂಧಿಸಿ 1,66,82,550 ರೂ. ಮೌಲ್ಯದ ಕಳವು ಮಾಲನ್ನು ಶಿರಾ ಉಪ ವಿಭಾಗದಿಂದ 13 ಆರೋಪಿಗಳನ್ನು ಬಂಧಿಸಿ 45,11,000 ರೂ. ಮೌಲ್ಯದ ವಸ್ತಗಳನ್ನು, ತಿಪಟೂರು ಉಪ ವಿಭಾಗದಿಂದ 15 ಆರೋಪಿಗಳನ್ನು ಬಂಧಿಸಿ 38,27,620 ರೂ. ಮೌಲ್ಯದ ವಸ್ತುಗಳನ್ನು ಹಾಗೂ ಮಧುಗಿರಿ ಉಪ ವಿಭಾಗದಿಂದ 48 ಆರೋಪಿಗಳನ್ನು ಬಂಧಿಸಿ 1,65,01, 200 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ವಸ್ತುಗಳು
- 4,03,10,000/- ರೂ ಮೌಲ್ಯದ 4 ಕೆ.ಜಿ. 31 ಗ್ರಾಂ ಚಿನ್ನಾಭರಣ.
- 7,20,700/- ರೂ ಮೌಲ್ಯದ 7 ಕೆ.ಜಿ. 207 ಗ್ರಾಂ ಬೆಳ್ಳಿಯ ಆಭರಣ.
- 1,11,30,090/- ರೂ ಮೌಲ್ಯದ 99 ಬೈಕ್ಗಳು, 4 ನಾಲ್ಕು ಚಕ್ರದ ವಾಹನಗಳು. 1 ಆಟೋರಿಕ್ಷಾ, 2 ಟ್ರಾಕ್ಟರ್ಗಳು,
- 3,00,000/- ರೂ ಮೌಲ್ಯದ ಜಾನುವಾರುಗಳು,
- 36,73,790 ರೂ ಮೌಲ್ಯದ ಇತರೆ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ರಿಂದ ಯಶಸ್ವಿ ಕಾರ್ಯಾಚರಣೆ 2025ನೇ ಫೆಬ್ರವರಿ ಮಾಹೆಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 170 ಜನ ಕಳ್ಳರನ್ನು ಬಂಧಿಸಿ 5,61,34,580/- ರೂ ಮೌಲ್ಯದ ಕಳವು ಮಾಲುಗಳನ್ನು ಪತ್ತೆ ಮಾಡಲಾಗಿದೆ, ಪ್ರಕರಣದ ಪತ್ತೆಯಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು… pic.twitter.com/AwuHBcOGLq
— SP Tumakuru (@SPTumkur) June 17, 2025
ಈ ಸುದ್ದಿಯನ್ನೂ ಓದಿ | Karnataka Rain news: ರಾಜ್ಯದಲ್ಲಿ ಮಳೆಗೆ ಮೂರು ಬಲಿ, ಹಲವೆಡೆ ಭೂಕುಸಿತ, ಸಾರಿಗೆ ಅಸ್ತವ್ಯಸ್ತ
ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸೆ
ತುಮಕೂರು ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, 2025ರ ಫೆಬ್ರವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 170 ಜನ ಕಳ್ಳರನ್ನು ಬಂಧಿಸಿ 5,61,34,580 ರೂ. ಮೌಲ್ಯದ ಕಳವು ಮಾಲುಗಳನ್ನು ಪತ್ತೆ ಮಾಡಲಾಗಿದೆ. ಪ್ರಕರಣದ ಪತ್ತೆಯಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಶಿಸಲಾಗಿದೆ ಎಂದು ತುಮಕೂರು ಎಸ್ಪಿ ಕೆ.ವಿ. ಅಶೋಕ್ ಅವರು ಮಾಹಿತಿ ನೀಡಿದ್ದಾರೆ.