Bale Honnuru shri: ಸಮಾಜದಲ್ಲಿ ಶ್ರಮಜೀವಿಗಳಿಗೆ ಎಂದಿಗೂ ಉನ್ನತಿ ಲಭ್ಯ : ಬಾಳೆ ಹೊನ್ನೂರು ಶ್ರೀಗಳು
ತಾಲ್ಲೂಕಿನ ನಿಟ್ಟೂರು ಹೋಬಳಿ ಬಾಗೂರು ಗೇಟ್ ಬಳಿಯ ಬಾಲಾಜಿ ಬಡಾವಣೆಯಲ್ಲಿ ಇಷ್ಟಲಿಂಗ ಪೂಜೆ, ಉಷಾ ಚಂದ್ರಶೇಖರ ದಂಪತಿಯ ಷಷ್ಠಿ ಪೂರ್ತಿ ಮತ್ತು 40ನೇ ವಿವಾಹ ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ನಡೆದ ಧರ್ಮ ಜಾಗೃತಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಅವರು ಬೌದ್ಧಿಕ ಬದುಕು ಪರಿಪೂರ್ಣ ಆಗಲು ಧರ್ಮಗುರುಗಳ ಆಶೀರ್ವಾದ ಪಡೆಯುವುದು ಮುಖ್ಯ
-
ಗುಬ್ಬಿ: ಸಮಾಜದಲ್ಲಿ ಮನುಷ್ಯ ಉನ್ನತಿ ಪಡೆಯಲು ನಿರಂತರ ಶ್ರಮ ಜೀವಿಯಾಗಿ ದುಡಿಯಬೇಕು. ಈ ಸಮಯದಲ್ಲಿ ಬೆನ್ನ ಹಿಂದೆಯೇ ಯಶಸ್ಸು ಐಶ್ವರ್ಯ ತಾನಾಗಿಯೇ ಬರುತ್ತದೆ ಎಂದು ಬಾಳೆ ಹೊನ್ನೂರು ಶ್ರೀಮದ್ ರಂಭಾಪುರಿ ವಿರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಹೋಬಳಿ ಬಾಗೂರು ಗೇಟ್ ಬಳಿಯ ಬಾಲಾಜಿ ಬಡಾವಣೆಯಲ್ಲಿ ಇಷ್ಟ ಲಿಂಗ ಪೂಜೆ, ಉಷಾ ಚಂದ್ರಶೇಖರ ದಂಪತಿಯ ಷಷ್ಠಿ ಪೂರ್ತಿ ಮತ್ತು 40ನೇ ವಿವಾಹ ವಾರ್ಷಿಕೋ ತ್ಸವ ಸಮಾರಂಭ ಅಂಗವಾಗಿ ನಡೆದ ಧರ್ಮ ಜಾಗೃತಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತ ನಾಡಿದ ಅವರು ಬೌದ್ಧಿಕ ಬದುಕು ಪರಿಪೂರ್ಣ ಆಗಲು ಧರ್ಮಗುರುಗಳ ಆಶೀರ್ವಾದ ಪಡೆಯು ವುದು ಮುಖ್ಯ ಎಂದರು.
ಕೌಟುಂಬಿಕ ಎಂಬುದು ಪ್ರಸ್ತುತ ಛಿದ್ರವಾದ ವಾತಾವರಣ ನೋಡುತ್ತಿದ್ದೇವೆ. ಹೆತ್ತ ತಂದೆ ತಾಯಿಯ ನಿರ್ಲ್ಯಕ್ಷ ಮಾಡುವ ಈ ಕಾಲದಲ್ಲಿ ಸಂಧ್ಯಾ ಕಾಲದಲ್ಲಿ ಅವರ ಹಾರೈಕೆ ಮಾಡುವುದು ಎಲ್ಲರಿಗೂ ದಕ್ಕುವ ಅವಕಾಶ ಅಲ್ಲ. ತಂದೆ ತಾಯಿಯ ಬಯಕೆಯನ್ನು ಅರಿತು ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಿ ಅವರ ಇಷ್ಟ ಲಿಂಗ ಪೂಜೆ ಜೊತೆಗೆ ಗುರು ಭಕ್ತಿ, ಧರ್ಮ ನಿಷ್ಠೆ ಮೆರೆದ ವರ್ತಕ ಸಚಿನ್ ಅವರ ಸೇವೆ ಸಾರ್ಥಕವಾದದ್ದು. ಸಾಮಾಜಿಕವಾಗಿ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜನಜಾಗೃತಿ ಕಾರ್ಯಕ್ರಮ ಇಂದಿನ ಯುವಕರಿಗೆ ಮಾದರಿಯಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣ ತತ್ವ ಅಳವಡಿಸಿಕೊಂಡ ಯುವಕರ ಧರ್ಮ ಕಾರ್ಯ ನಿರಂತರ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ: Gubbi News: ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜೂ.29ರಂದು ಜಾಗೃತಿ ಸಂವಾದ
ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಧರ್ಮ ಪಾಲನೆಯ ಒಂದು ಭಾಗವಾಗಿ ಜಾಗೃತಿ ಕಾರ್ಯಕ್ರಮ ಆಯೋಜನೆ ಒಂದೇ ವೇದಿಕೆಗೆ ನಲವತ್ತು ಗುರುಗಳ ಆಗಮನಕ್ಕೆ ನಾಂದಿ ಹಾಡಿದೆ. ಶ್ರದ್ಧೆ ಭಕ್ತಿ ಕಡಿಮೆಯಾಗುತ್ತಿರುವ ಕಾಲದಲ್ಲಿ ಸಚಿನ್ ಅವರ ಸೇವಾ ಕಾರ್ಯ ಶ್ಲಾಘನೀಯ. ವಯಸ್ಸಾದ ಹೆತ್ತವರ ಬಗ್ಗೆ ಅಪಾರ ಕಾಳಜಿ ಹಾಗೂ ಅವರ ಇಚ್ಛೆಯಂತೆ ಕಾರ್ಯ ಕ್ರಮ ಆಯೋಜನೆ ಧರ್ಮಾಚರಣೆ ತಿಳಿಸುತ್ತದೆ. ಮಾನವೀಯ ಗುಣಗಳನ್ನು ತೋರುವ ಯಾವುದೇ ಧರ್ಮವನ್ನು ಪಾಲಿಸಿದರೂ ಮಾನವ ಕುಲಕ್ಕೆ ಒಳಿತು ಬಯಸಬೇಕು ಎಂದರು.
ಸಿದ್ದರಬೆಟ್ಟ ಮಠದ ಶ್ರೀ ವೀರಭದ್ರ ಸ್ವಾಮೀಜಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಸಂವತ್ಸರ ಲೆಕ್ಕದ ಆಚರಣೆ ಪ್ರಾಮುಖ್ಯತೆ ಪಡೆದಿದೆ. ಮನುಷ್ಯನ ಆಯಸ್ಸು 120 ವರ್ಷ ಎಂಬ ಮಾತು ಧಾರ್ಮಿಕ ಕ್ಷೇತ್ರದಲ್ಲಿದೆ. ಈ ಆಯಸ್ಸಿನ ಅರ್ಧ ಭಾಗ 60 ವರ್ಷ ಮನುಷ್ಯನ ಕುಗ್ಗುವಿಕೆ ತೋರುತ್ತದೆ. ಈ ಸಮಯ ಆಧ್ಯಾತ್ಮಿಕತೆಯತ್ತ ವಾಲಬೇಕು ಎಂಬ ನಿಟ್ಟಿನಲ್ಲಿ ಷಷ್ಠಿ ಪೂರ್ತಿ ಕಾರ್ಯಕ್ರಮ ನಡೆಯುತ್ತದೆ ಎಂದು ವಿವರಿಸಿದರು.
ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ ಗುರಿಯ ಹಿಂದೆ ಗುರು ಇರಬೇಕು ಎಂಬ ಮಾತು ಅಕ್ಷರಶಃ ಸತ್ಯ. ಎಲ್ಲಾ ವರ್ಗದ ಜನರೊಂದಿಗೆ ಇಷ್ಟಲಿಂಗ ಪೂಜೆ ಆಯೋಜಿಸಿದ ವರ್ತಕ ಸಚಿನ್ ನಡೆ ಯುವಕರಿಗೆ ದಾರಿ ಎಂದರು.
ಎರಡು ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಸಾರೋಟ್ ಮೆರವಣಿಗೆ ವಿವಿಧ ಕಲಾ ಮೇಳದೊಂದಿಗೆ ಅದ್ದೂರಿಯಾಗಿ ನಡೆಯಿತು. ಮಂಗಳವಾರ ಮುಂಜಾನೆ ಇಷ್ಟಲಿಂಗ ಪೂಜೆ ಶ್ರೀಗಳು ನಡೆಸಿದರು.
ಸಮಾರಂಭದಲ್ಲಿ ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಎಡೆಯೂರು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಸ್ವಾಮೀಜಿ, ಚನ್ನಗಿರಿ ಮಠದ ಶ್ರೀ ಕೇದಾರಲಿಂಗ ಶಿವಶಾಂತ ವೀರ ಸ್ವಾಮೀಜಿ, ಸಂಗೊಳ್ಳಿ ಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಹೊನ್ನುಡಿಕೆ ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಪಿ. ಬಿ.ಚಂದ್ರಶೇಖರಬಾಬು, ಎನ್.ಸಿ.ಪ್ರಕಾಶ್, ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ಬೆಣಚಿಗೆರೆ ರುದೇಶ್, ಜಿಪಂ ಮಾಜಿ ಸದಸ್ಯೆ ಡಾ.ನವ್ಯಬಾಬು, ತೆವಡೇಹಳ್ಳಿಯ ಸದಾಶಿವಯ್ಯ, ಪ್ರಸನ್ನಕುಮಾರ್, ದಕ್ಷಿಣಾಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ, ಚಂದ್ರಶೇಖರ, ಉಷಾ, ವರ್ತಕ ಸಚಿನ್ ಇತರರು ಇದ್ದರು.