ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News: ಎಲ್ಲಾ ವರ್ಗಕ್ಕೂ ದಕ್ಕಿದ ಬಜೆಟ್: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್

ತಾಲ್ಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಯಿಂದ ನಡೆದ 3 ಕೋಟಿ ರೂ ವೆಚ್ಚದ ವಿವಿಧ ಗ್ರಾಮದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಶಾಸಕರು ಬಜೆಟ್'ಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿದ್ದೆವು. ಈ ವರ್ಷ ಮನ್ನಣೆಗೆ ಬಂದಿಲ್ಲ. ಮುಂದಿನ ವರ್ಷದ ಬಜೆಟ್'ನಲ್ಲಿ ಎಲ್ಲಾ ಯೋಜನೆಗೆ ಅಸ್ತು ಸಿಗಲಿದೆ

ಗುಬ್ಬಿ: ಅಹಿಂದ ವರ್ಗ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಒಪ್ಪಿಗೆಯಾದ ಬಜೆಟ್ ಈ ಬಾರಿ ಎಲ್ಲಾ ಕ್ಷೇತ್ರಕ್ಕೂ ಸಂದಿವೆ. ಜನಮನ್ನಣೆಯ ಬಜೆಟ್ ದಾಖಲೆಯಲ್ಲಿ ಮುಖ್ಯಮಂತ್ರಿ ಗಳು ಮಂಡಿಸಿದ್ದಾರೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S.R.Srinivas) ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಡೆದ 3 ಕೋಟಿ ರೂ ವೆಚ್ಚದ ವಿವಿಧ ಗ್ರಾಮದ ರಸ್ತೆ ಅಭಿವೃದ್ದಿ ಕಾಮ ಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಶಾಸಕರು ಬಜೆಟ್ ಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿದ್ದೆವು. ಈ ವರ್ಷ ಮನ್ನಣೆಗೆ ಬಂದಿಲ್ಲ. ಮುಂದಿನ ವರ್ಷದ ಬಜೆಟ್ ನಲ್ಲಿ ಎಲ್ಲಾ ಯೋಜನೆಗೆ ಅಸ್ತು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Gubbi News: ಗುಬ್ಬಿ ಪಟ್ಟಣ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತಾಲ್ಲೂಕಿಗೆ ಜವಳಿ ಪಾರ್ಕ್ ನಿರ್ಮಾಣಕ್ಕೆ 20 ಎಕರೆ ಭೂಮಿಯನ್ನು ಹೊಸಹಳ್ಳಿ ಬಳಿ ಗುರುತಿಸಲಾಗಿತ್ತು. ಕಿರಿದಾದ ರಸ್ತೆ ಹಿನ್ನಲೆ ಈ ಬಾರಿ ಬಜೆಟ್ ನಲ್ಲಿ ಗಣನೆಗೆ ಸಿಕ್ಕಿಲ್ಲ. ರಸ್ತೆ ಅಗಲೀಕರಣ ಮಾಡಲು ಈಗಾಗಲೇ ಚರ್ಚಿಸಿದ್ದೇನೆ. ಮುಂದಿನ ಬಜೆಟ್ ನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಅನುದಾನ ಬರಲಿದೆ. ಕಳೆದ ಬಜೆಟ್ ನಲ್ಲಿ ಬಂದ ಹಣದಲ್ಲಿ ಮಠದ ಹಳ್ಳ ಕೆರೆ ಕೆಲಸ ಹಾಗೂ ಹಾಗಲವಾಡಿ ಕೆರೆ ಮುಕ್ತಾಯ ಹಂತದಲ್ಲಿದೆ. ಬಿಕ್ಕೆಗುಡ್ಡ ಯೋಜನೆ ಸಹ ಚುರುಕಿನಿಂದ ಸಾಗಿದೆ ಎಂದ ಅವರು ವಸತಿ ಯೋಜನೆ ಕಳೆದ 7 ವರ್ಷ ದಿಂದಲೂ ಮನೆ ಮಂಜೂರು ಆಗಿಲ್ಲ. ಇದರ ಅವಶ್ಯಕತೆ ಇತ್ತು ಎಂದರು.

ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಹೇರೂರು ಕೆರೆಯ ಪಕ್ಕದಲ್ಲಿ ದೊಡ್ಡ ಚರಂಡಿ ನಿರ್ಮಾಣಕ್ಕೆ 3 ಕೋಟಿ ಹಣ ಮಂಜೂರು ಆಗಿದೆ. ಕೆಲಸ ನಡೆಯಬೇಕಿದೆ. ಸ್ಥಳೀಯ ರೈತರು ಒಂದೆರೆಡು ಅಡಿಗಳ ಜಾಗ ಬಿಡುತ್ತಿಲ್ಲ. ಚರಂಡಿ ನಿರ್ಮಾಣಕ್ಕೆ ಕೆರೆ ಪಕ್ಕದ ರೈತರು ಸಹಕಾರ ನೀಡಬೇಕು. ಶೀಘ್ರದಲ್ಲಿ ಈ ಕಾಮಗಾರಿ ಮಾಡುತ್ತೇವೆ ಎಂದ ಅವರು ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆದಿದೆ. ಇದಕ್ಕೆ 24 ಕೋಟಿ ಹಣ ಬಂದಿದೆ. ಜೊತೆಗೆ ವಿದ್ಯುತ್ ಕಂಬ ಸ್ಥಳಾಂತರಕ್ಕೆ 2 ಕೋಟಿ ಹಾಗೂ ಚರಂಡಿ ನಿರ್ಮಾಣಕ್ಕೆ 6 ಕೋಟಿ ಬಂದಿದೆ. ರಸ್ತೆ ನಂತರ ಚರಂಡಿ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಇರಾನ್ ಇಸ್ರೇಲ್ ಯುದ್ಧ ಮುಂದುವರೆದಲ್ಲಿ ಎಲ್ಲಾ ದೇಶಕ್ಕೂ ಆರ್ಥಿಕ ಹೊರೆ ಹೆಚ್ಚಾ ಗಲಿದೆ. ನಮ್ಮ ದೇಶಕ್ಕೂ ಅದರ ಬಿಸಿ ಈಗಾಗಲೇ ಅಡುಗೆ ಅನಿಲ ಮೂಲಕ ಕಾಣುತ್ತಿದೆ. ಕಚ್ಚಾ ತೈಲ ಪೂರೈಕೆಗೆ ಹೊಡೆತ ಬೀಳಲಿದೆ. ಜೊತೆಗೆ ಅರಬ್ ದೇಶದಲ್ಲಿರುವ ಶೇ.60 ರಷ್ಟು ಮಂದಿ ಬೇರೆ ದೇಶದವರು ಆಗಿದ್ದಾರೆ. ಹಾಗಾಗಿ ಎಲ್ಲಾ ದೇಶಕ್ಕೂ ತೊಂದರೆ ಕಟ್ಟಿಟ್ಟಬುತ್ತಿ ಎಂದ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಎಸ್.ಕೊಡಗೀಹಳ್ಳಿ ಪಾಳ್ಯದಲ್ಲಿ 90 ಲಕ್ಷ ಹಾಗೂ 45 ಲಕ್ಷ, ಎಸ್.ಕೊಡಗಿಹಳ್ಳಿ ಗ್ರಾಮಕ್ಕೆ 50 ಲಕ್ಷ, ಹೊಸಪಾಳ್ಯ ಗ್ರಾಮಕ್ಕೆ 50 ಲಕ್ಷ ಮತ್ತು ಚಿಕ್ಕೋನಹಳ್ಳಿ ಗ್ರಾಮದಲ್ಲಿ 25 ಲಕ್ಷ ಸಿಸಿ ರಸ್ತೆಗೆ ಚಾಲನೆ ನೀಡಲಾಗಿದೆ. ಇನ್ನೂ ಬಾಕಿ ಇರುವ ನೂರು ಕೋಟಿ ಕಾಮಗಾರಿಗಳಿಗೆ ಪೂಜೆ ಶೀಘ್ರದಲ್ಲಿ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಗೋವಿಂದರಾಜು, ವೆಂಕಟೇಗೌಡ, ಮುಖಂಡರಾದ ಉಂಡೆ ರಾಮಣ್ಣ, ಗಿರೀಶ್, ರಾಮು, ಸೋಮಶೇಖರ್, ರಾಜಣ್ಣ, ದಿವಾಕರ್, ಗ್ರಾಮೀಣಾಭಿ ವೃದ್ಧಿ ಇಲಾಖೆಯ ಎಇಇ ಚಂದ್ರಶೇಖರ್, ಗುತ್ತಿಗೆದಾರರಾದ ಕೃಷ್ಣೇಗೌಡ, ರವಿ, ಸಂದೀಪ್ ಇತರರು ಇದ್ದರು.