ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಅಂಬೇಡ್ಕರ್ ಆದರ್ಶ ಅಳವಡಿಕೆಗೆ ಕರೆ

ಶಿಕ್ಷಣವು ಬದಲಾವಣೆಯ ಅತ್ಯಂತ ಪ್ರಬಲ ಅಸ್ತ್ರವಾಗಿದೆ. ಪ್ರತಿಯೊಬ್ಬರು ಉತ್ತಮ ಶಿಕ್ಷಣವನ್ನು ಪಡೆದು, ಅಂಬೇಡ್ಕರ್ ಅವರ ಆಶಯದಂತೆ ಪ್ರಗತಿ ಸಾಧಿಸ ಬೇಕು ಎಂದು ಒತ್ತಿ ಹೇಳಿದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತ್ರಿಸೂತ್ರವನ್ನು ಉಲ್ಲೇಖಿಸಿ ಅಂಬೇಡ್ಕರ್ ಚಿಂತನೆಗಳ ಮಹತ್ವ ವನ್ನು ಪ್ರತಿಪಾದಿಸಿ ಅವರ ಅಪ್ರತಿಮ ಕೊಡುಗೆ ಗಳನ್ನು ಸ್ಮರಿಸಿದರು.

ಚಿಕ್ಕನಾಯಕನಹಳ್ಳಿ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನವನ್ನು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಶ್ರದ್ದೆ ಹಾಗು ಗೌರವದಿಂದ ಆಚರಿಸ ಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ.ಜಾತಿ ಮತ್ತು ಪ.ಪಂಗಡಗಳ ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಗೂಳೂರು ನಾಗರಾಜ್, ಶಿಕ್ಷಣವು ಬದಲಾವಣೆಯ ಅತ್ಯಂತ ಪ್ರಬಲ ಅಸ್ತ್ರವಾಗಿದೆ. ಪ್ರತಿಯೊಬ್ಬರು ಉತ್ತಮ ಶಿಕ್ಷಣವನ್ನು ಪಡೆದು, ಅಂಬೇಡ್ಕರ್ ಅವರ ಆಶಯದಂತೆ ಪ್ರಗತಿ ಸಾಧಿಸ ಬೇಕು ಎಂದು ಒತ್ತಿ ಹೇಳಿದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತ್ರಿಸೂತ್ರವನ್ನು ಉಲ್ಲೇಖಿಸಿ ಅಂಬೇಡ್ಕರ್ ಚಿಂತನೆಗಳ ಮಹತ್ವವನ್ನು ಪ್ರತಿಪಾದಿಸಿ ಅವರ ಅಪ್ರತಿಮ ಕೊಡುಗೆ ಗಳನ್ನು ಸ್ಮರಿಸಿದರು.

ಇದನ್ನೂ ಓದಿ: Chikkanayakanahalli News: ದಾರ್ಶನಿಕರ ಜಯಂತಿ ಕರಪತ್ರದಲ್ಲಿ ಸರಕಾರಿ ಲೋಗೋ ದುರ್ಬಳಕೆ: ಶಾಸಕರ ವಿರುದ್ದ ಕಾಂಗ್ರೆಸ್ ವಾಗ್ದಾಳಿ

ಎಇ ಮಂಜುನಾಥ್ ಮಾತನಾಡಿ, ದೇಶಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಸಮಾನತೆ ಯ ಆಧಾರದ ಮೇಲೆ ನಿಂತಿದೆ. ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆ ಯನ್ನು ನಮ್ಮ ಕಾರ್ಯ ಕ್ಷೇತ್ರದಲ್ಲಿ ಮತ್ತು ಸಮಾಜದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.

ಎಸ್.ಓ ಇರ್ಫಾನ್ ಮಾತನಾಡಿ ಅಂಬೇಡ್ಕರ್ ಹೋರಾಟವು ಕೇವಲ ಒಂದು ವರ್ಗಕ್ಕೆ ಸೀಮಿತ ವಾಗಿಲ್ಲ. ಅದು ಇಡೀ ಸಮಾಜಕ್ಕೆ ನ್ಯಾಯ ಒದಗಿಸುವ ದೃಷ್ಟಿಯಿಂದ ಕೂಡಿತ್ತು. ಆ ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ನುಡಿದರು. ಸಿಬ್ಬಂದಿಗಳಾದ ದಿವ್ಯಾ, ಕವಿತಾ, ಕಚೇರಿಯ ಸಿಬ್ಬಂದಿ ವರ್ಗದವರು, ಮಾರ್ಗದಾಳುಗಳು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂವಿಧಾನ ಶಿಲ್ಪಿಗೆ ಪುಷ್ಪ ನಮನ ಸಲ್ಲಿಸಿ ಹಾಗು ಕ್ಯಾಂಡಲ್ ಬೆಳಗುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.