ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli (Tumkur) News: ಹತ್ತನೇ ತರಗತಿ ಫಲಿತಾಂಶ ತಾಲ್ಲೂಕಿಗೆ ಪ್ರಥಮ ಸ್ಥಾನ : ಸಿಬಿಎಸ್ ಸಂತಸ

ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳು ಸೇರಿ ಒಟ್ಟು ಹತ್ತು ತಾಲ್ಲೂಕಿನಲ್ಲಿ ತಾಲ್ಲೂಕು ಪ್ರಥಮವಾಗಿದೆ. ಶೇಕಡಾ ೭೩.೪೮ ಮಕ್ಕಳು ಉತ್ತೀರ್ಣರಾಗಿದ್ದಾರೆ. ಮಕ್ಕಳಿಗೆ ವೈಯಕ್ತಿಕ ಹಾಗು ಶಿಕ್ಷಣ ನೀತಿಗೆ ಆದ್ಯತೆ ನೀಡುವತ್ತ ಗಮನಹರಿಸಿದೆ. ಒಳ್ಳೆಯ ಕಾರ್ಯಕ್ರಮಗಳ ಮೂಲಕ ಶ್ರಮಿಸಿದ್ದೇವೆ ಶಿಕ್ಷಣ ಕ್ಷೇತ್ರ ಅಭಿವೃದ್ದಿಗೆ ನಮ್ಮ ಶ್ರಮ ನಿರಂತರವಾಗಿ ಮುಂದುವರೆಯುತ್ತದೆ

ಹತ್ತನೇ ತರಗತಿ ಫಲಿತಾಂಶ ತಾಲ್ಲೂಕಿಗೆ ಪ್ರಥಮ ಸ್ಥಾನ : ಸಿಬಿಎಸ್ ಸಂತಸ

Profile Ashok Nayak May 2, 2025 7:55 PM

ಚಿಕ್ಕನಾಯಕನಹಳ್ಳಿ : ಹತ್ತನೇ ತರಗತಿ ಪರಿಕ್ಷಾ ಫಲಿತಾಂಶದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಸಿ.ಬಿ.ಸುರೇಶಬಾಬು ಮಾಹಿತಿ ನೀಡಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದ ಮಕ್ಕಳ ಸಾಧನೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳು ಸೇರಿ ಒಟ್ಟು ಹತ್ತು ತಾಲ್ಲೂಕಿನಲ್ಲಿ ತಾಲ್ಲೂಕು ಪ್ರಥಮವಾಗಿದೆ. ಶೇಕಡಾ ೭೩.೪೮ ಮಕ್ಕಳು ಉತ್ತೀರ್ಣರಾಗಿದ್ದಾರೆ. ಮಕ್ಕಳಿಗೆ ವೈಯಕ್ತಿಕ ಹಾಗು ಶಿಕ್ಷಣ ನೀತಿಗೆ ಆದ್ಯತೆ ನೀಡುವತ್ತ ಗಮನಹರಿಸಿದೆ. ಒಳ್ಳೆಯ ಕಾರ್ಯಕ್ರಮಗಳ ಮೂಲಕ ಶ್ರಮಿಸಿದ್ದೇವೆ ಶಿಕ್ಷಣ ಕ್ಷೇತ್ರ ಅಭಿವೃದ್ದಿಗೆ ನಮ್ಮ ಶ್ರಮ ನಿರಂತರವಾಗಿ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: Tumkur News: ದೇಶವೇ ಶೋಕಾಚರಣೆಯಲ್ಲಿರುವಾಗ ಸಿಪಿಐಗೆ ಅದ್ಧೂರಿ ಬೀಳ್ಕೊಡುಗೆ!

ಇನ್ನು ವಿಶೇಷ ಕಾರ್ಯಕ್ರಮಗಳಡಿ ನಿರಂತರವಾಗಿ ಶೈಕ್ಷಣಿಕ ಕಾರ್ಯಾಗಾರ ನಡೆಸಿದ್ದೇವೆ. ಈ ಮೂಲಕ ಬೇರು ಮಟ್ಟದಿಂದ ಸುಧಾರಣೆಗೆ, ಸಮಸ್ಯೆಗಳಿಗೆ ಅಗತ್ಯ ಪರಿಹಾರ ನೀಡುವ ಕೆಲಸ ವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೈಗೊಂಡ ಶಿಕ್ಷಣ ಉಪಕ್ರಮ ಶಾಲೆಗಳ ಪ್ರಗತಿಗೆ ಮುನ್ನುಡಿ ಯಾಗಿದೆ. ಈ ಸಾಧನೆ ಕೇಂದ್ರಿಕೃತ ಪ್ರಯತ್ನ, ವಿವಿಧ ಹಂತಗಳಲ್ಲ ದೊರಕಿದ ಸಹಯೋಗದಿಂದ ಸಾಧ್ಯವಾಗಿದೆ. ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಕ್ಷೇತ್ರದ ಮಕ್ಕಳು ನಿರೂಪಿಸಿದ್ದಾರೆ. ಮಕ್ಕಳಿಗೆ, ಅವರ ಪೋಷಕರು ಮತ್ತು ಶಿಕ್ಷಕ ವೃಂದದವರಿಗೆ ಶಾಸಕರು ಅಭಿನಂದ ನೆ ತಿಳಿಸಿದರು.