ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Koratagere News: ಕೊರಟಗೆರೆ ತಾಲೂಕಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ

Koratagere News: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರದ ಅಂತರ್‌ಸಚಿವಾಲಯ ತಂಡ ಶನಿವಾರ ಕೊರಟಗೆರೆ ತಾಲೂಕಿಗೆ ಭೇಟಿ ನೀಡಿ, ಪರಶೀಲನೆ ನಡೆಸಿತು. ಈ ವೇಳೆ ತಾಲೂಕಿನ ಕಂಬದಹಳ್ಳಿ ಗ್ರಾಮದ ಸಮೀಪ ರೈತರು ಬೆಳೆದಂತಹ ಬೆಳೆ ವೀಕ್ಷಣೆ ಮಾಡಿದರು.

ಕೊರಟಗೆರೆ ತಾಲೂಕಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ

-

Profile
Siddalinga Swamy Oct 3, 2026 7:56 PM

ಕೊರಟಗೆರೆ, ಅ.03: ಬರ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರದ ಅಂತರ್‌ಸಚಿವಾಲಯ ತಂಡ ಶನಿವಾರ ಕೊರಟಗೆರೆ ತಾಲೂಕಿಗೆ (Koratagere News) ಭೇಟಿ ನೀಡಿ, ಪರಶೀಲನೆ ನಡೆಸಿತು.

ಕೊರಟಗೆರೆ ತಾಲೂಕಿನ ಕಂಬದಹಳ್ಳಿ ಗ್ರಾಮದ ಸಮೀಪ ರೈತರು ಬೆಳೆದಂತಹ ಬೆಳೆಗಳನ್ನು ವೀಕ್ಷಣೆ ಮಾಡಿದರು. ಈ ವೇಳೆ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ರೈತರು ಕಂಗಾಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.

Central drought study team

ತುಂಬಾಡಿ ಗ್ರಾಪಂ ವ್ಯಾಪ್ತಿಯ ಟಿ. ಗೊಲ್ಲಹಳ್ಳಿ ಸಮೀಪ ವಿಜಿ-ಜಿ ರಾಮ್ ಜಿ ಯೋಜನೆಯಡಿ ಮುತ್ತರಾಯನಕಟ್ಟೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರನ್ನು ವಿಜಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮಾಹಿತಿ ಪಡೆದರು. ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.‌

Karnataka Drought: ಇಂದಿನಿಂದ ಕೇಂದ್ರ ಬರ ಅಧ್ಯಯನ ತಂಡದಿಂದ ರಾಜ್ಯ ಪ್ರವಾಸ; ರಾಜ್ಯಕ್ಕೆ 3705.30 ಕೋಟಿ ಬರ ಪರಿಹಾರ ನೀಡಲು ಸಿಎಂ ಮನವಿ

ಕೇಂದ್ರ ಬರ ಅಧ್ಯಯನ ತಂಡದಲ್ಲಿ ಎನ್‌ಐಟಿಐ ಆಯೋಗದ ಅಮರಿಂದರ್ ಸಿಂಗ್, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ನಿರ್ದೇಶಕ ಡಾ.ಜೆ. ಹರ್ಷ ಸೇರಿದಂತೆ ಇತರೆ ಸದಸ್ಯರು ಹಾಗೂ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾನ್, ಜಿಪಂ ಸಿಇಒ ಅಶ್ವಿಜ, ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವಥ್‌ ನಾರಾಯಣ್, ಟಿ.ಸಿ.ರಾಮಯ್ಯ, ಸೇರಿದಂತೆ ಇತರರು ಇದ್ದರು.