ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Madhugiri News: ಕಂಬದಹಳ್ಳಿಯ ಶ್ರೀ ದೇವಿರಮ್ಮ ಪ್ರತಿಷ್ಠಾಪನೆ, ಕನಕದಾಸರ ಜಯಂತಿಯಲ್ಲಿ ಎಂಎಲ್‌ಸಿ ಆರ್.ರಾಜೇಂದ್ರ ರಾಜಣ್ಣ ಭಾಗಿ

Madhugiri News: ಮಧುಗಿರಿ ಕಸಬಾ ಹೋಬಳಿ ಕಂಬದಹಳ್ಳಿ ಗ್ರಾಮದಲ್ಲಿ ಶ್ರೀ ದೇವಿರಮ್ಮ ದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂಎಲ್‌ಸಿ ಆರ್.ರಾಜೇಂದ್ರ ರಾಜಣ್ಣ ಭಾಗಿಯಾಗಿದ್ದರು. ಭಕ್ತಿ, ಭಾವೈಕ್ಯತೆ, ಸಮಾನತೆ ಹಾಗೂ ದಾಸರ ಸಾಹಿತ್ಯದ ಮೌಲ್ಯಗಳನ್ನು ಸಾರುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಲಿ ಎಂದು ಆಶಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಶ್ರೀ ದೇವಿರಮ್ಮ ಪ್ರತಿಷ್ಠಾಪನೆ, ಕನಕದಾಸರ ಜಯಂತಿಯಲ್ಲಿ ಆರ್.ರಾಜೇಂದ್ರ ಭಾಗಿ

-

Prabhakara R
Prabhakara R Nov 29, 2026 4:11 PM

ಮಧುಗಿರಿ: ಕಸಬಾ ಹೋಬಳಿ ಕಂಬದಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ದೇವಿರಮ್ಮ ದೇವಿಯ ಪ್ರತಿಷ್ಠಾಪನೆ ಹಾಗೂ 539ನೇ ಕನಕದಾಸರ ಜಯಂತಿಯಲ್ಲಿ ಎಂಎಲ್‌ಸಿ ಆರ್.ರಾಜೇಂದ್ರ ರಾಜಣ್ಣ (MLC R. Rajendra Rajanna ) ಭಾಗಿಯಾಗಿದ್ದರು.

ಶ್ರೀ ದೇವಿರಮ್ಮ ದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜೇಂದ್ರ ಅವರು, ಭಕ್ತಿ, ಭಾವೈಕ್ಯತೆ, ಸಮಾನತೆ ಹಾಗೂ ದಾಸರ ಸಾಹಿತ್ಯದ ಮೌಲ್ಯಗಳನ್ನು ಸಾರುವ ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಲಿ, ಶ್ರೀದೇವಿರಮ್ಮ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ತಿಳಿಸಿದರು.

R Rajendra (1)

ಅನಾದಿಕಾಲದಿಂದಲೂ ಆಚಾರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಿಕೊಂಡು ಬರುತ್ತಿದ್ದು, ಜತೆಗೆ ಗುರು ಹಿರಿಯರನ್ನು ಗೌರವಿಸಿಕೊಂಡು ಬರುವುದು ನಮ್ಮ ಸಂಪ್ರದಾಯವಾಗಿದೆ. ಯುವಕರು ದುಶ್ಚಟಕ್ಕೆ ಬಲಿಯಾಗದೆ ಗೌರವಿತವಾಗಿ ಬಾಳುವಂತಾಗಬೇಕು ಎಂದು ಆರ್.ರಾಜೇಂದ್ರ ಕಿವಿಮಾತು ಹೇಳಿದರು.

ಸ್ಥಳೀಯ ಮುಖಂಡರು ಆರ್. ರಾಜೇಂದ್ರ ರಾಜಣ್ಣರವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹಾಜರಿದ್ದರು.