ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli (Tumkur) News: ಬಸ್ ಸೌಲಭ್ಯಕ್ಕೆ ಒತ್ತಾಯ

ಹಲವು ವರ್ಷಗಳಿಂದ ಚಿಕ್ಕನಾಯಕನಹಳ್ಳಿಯಿಂದ ಪ್ರಾರಂಭವಾಗಿ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚರಿಸುತ್ತಿತ್ತು. ಈ ನಡುವೆ ಸಂಚಾರ ಸ್ಥಗಿತಗೊಳಿಸ ಲಾಗಿದೆ. ಈ ಸಮಯದಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಚಿಕಿತ್ಸೆಗಾಗಿ ತೆರಳುವವರಿಗೆ ಹಾಗು ವ್ಯಾಪಾರಿ ಗಳಿಗೆ ಬೆಂಗಳೂರು ಬಸ್ ಬಹು ಅನುಕೂಲವಾಗಿತ್ತು.

ಚಿಕ್ಕನಾಯಕನಹಳ್ಳಿ : ಹಲವು ದಿನಗಳ ಹಿಂದೆ ಮುಂಜಾನೆ ೫.೩೦ ಕ್ಕೆ ಸಂಚರಿಸುತ್ತಿದ್ದ ಚಿಕ್ಕನಾಯಕನಹಳ್ಳಿ- ಬೆಂಗಳೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಯಥಾರೀತಿಯಾಗಿ ಸಂಚರಿ ಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಪಿಸಿಸಿ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Chikkaballapur News: ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಾಣ ಸಮಾಜದ ಎಲ್ಲರ ಹೊಣೆ : ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎನ್.ರಮೇಶ್

ಹಲವು ವರ್ಷಗಳಿಂದ ಚಿಕ್ಕನಾಯಕನಹಳ್ಳಿಯಿಂದ ಪ್ರಾರಂಭವಾಗಿ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚರಿಸುತ್ತಿತ್ತು. ಈ ನಡುವೆ ಸಂಚಾರ ಸ್ಥಗಿತಗೊಳಿಸ ಲಾಗಿದೆ. ಈ ಸಮಯದಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಚಿಕಿತ್ಸೆಗಾಗಿ ತೆರಳುವವರಿಗೆ ಹಾಗು ವ್ಯಾಪಾರಿಗಳಿಗೆ ಬೆಂಗಳೂರು ಬಸ್ ಬಹು ಅನುಕೂಲವಾಗಿತ್ತು. ತಿಪಟೂರು ಮತ್ತು ತುರುವೇಕೆರೆ ಡಿಪೋ ಅಧಿಕಾರಿಗಳ ಹೊಂದಾಣಿಕೆ ಮಾಡಿಕೊಂಡು ಬಸ್ ಸಮಯವನ್ನು ಸರಿಯಾಗಿ ನಿಗದಿ ಮಾಡದಿರುವುದೇ ಬಸ್ ನಿಲುಗಡೆಗೆ ಕಾರಣ ಎಂದು ಕೆಲ ಪ್ರಯಾಣಿಕರು ದೂರುತ್ತಾರೆ.

ನಿಗಮದ ಅಧ್ಯಕ್ಷ ಶ್ರೀನಿವಾಸ್ ಹಾಗು ಸಾರಿಗೆ ಸಂಸ್ಥೆ ಅಧಿಕಾರಿಗಳು ಆಸಕ್ತಿ ವಹಿಸಿ ಚಿಕ್ಕನಾಯಕನ ಹಳ್ಳಿ ಹಾಲ್ಟ್ ಬಸ್ ಸಂಚಾರವನ್ನು ಪುನಃ ಬೆಂಗಳೂರಿಗೆ ಆರಂಭಿಸಬೇಕು ಎಂದು ಕೃಷ್ಣೇಗೌಡ ಮನವಿ ಮಾಡಿದ್ದಾರೆ.