Gubbi News: ಗುಬ್ಬಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ
ನಮ್ಮಲ್ಲಿ ಮೊದಲು ಸಮನ್ವಯತೆ ಮೂಡಬೇಕು. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾ ಪನೆ ಮಾಡಿದರೆ ಅದು ಕೇವಲ ಮೂರ್ತಿಯಾಗಿ ಉಳಿಯುತ್ತದೆ. ಆದರೆ ಅವರ ತುಡಿತವನ್ನು ಅರ್ಥ ಮಾಡಿಕೊಂಡು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿ ಕೊಂಡು ಜೀವನ ರೂಪಿಸಿ ಕೊಂಡು ನೊಂದವರಿಗೆ ದನಿಯಾಗಿ ನಿಲ್ಲಬೇಕು ಎಂದ ಅವರು ಮೂಢನಂಬಿಕೆ ಹಿಂದೆ ಹೋಗಬೇಡಿ.
-
ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಹೊಲಯ ಮಾದಿಗ ಸಮನ್ವಯ ಸಮಿತಿಯಿಂದ ನಿರ್ಮಾಣವಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಕಿತ್ತೂರು ಮಠದ ಶ್ರೀ ನಿಜಗುಣಾಪ್ರಭು ತೋಂಟದಾರ್ಯ ಸ್ವಾಮೀಜಿ ಪುತ್ಥಳಿ ಲೋಕಾರ್ಪಣೆ ಗೊಳಿಸಿದರು.
ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಅದ್ದೂರಿ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಸಾಗಿ ತಾಲ್ಲೂಕು ಕಚೇರಿ ಆವರಣ ಮುಟ್ಟಿತು. ಈ ಜೊತೆಗೆ ಸಂವಿಧಾನ ಪೀಠಿಕೆಯ ಜಾಥ ಸಹ ಸಾಗಿಬಂದಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕಿತ್ತೂರು ನಿಷ್ಕಲ ಮಂಟಪದ ಶಾಖಮಠದ ಶ್ರೀ ನಿಜಗುಣಾಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ ದಲಿತರಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕಿದೆ. ಶಿಕ್ಷಣ ಪಡೆದು ದಲಿತರು ಬದಲಾಗಬೇಕಿದೆ. ಇಲ್ಲವಾದರೆ ಸಂವಿ ಧಾನ ಮಾಯಾ ಆಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: Gubbi News: ವಿಶೇಷ ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ ಬರಬಾರದು : ಶಾಸಕ ಎಸ್.ಆರ್.ಶ್ರೀನಿವಾಸ್
ನಮ್ಮಲ್ಲಿ ಮೊದಲು ಸಮನ್ವಯತೆ ಮೂಡಬೇಕು. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾ ಪನೆ ಮಾಡಿದರೆ ಅದು ಕೇವಲ ಮೂರ್ತಿಯಾಗಿ ಉಳಿಯುತ್ತದೆ. ಆದರೆ ಅವರ ತುಡಿತವನ್ನು ಅರ್ಥಮಾಡಿಕೊಂಡು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿ ಕೊಂಡು ಜೀವನ ರೂಪಿಸಿಕೊಂಡು ನೊಂದವರಿಗೆ ದನಿಯಾಗಿ ನಿಲ್ಲಬೇಕು ಎಂದ ಅವರು ಮೂಢನಂಬಿಕೆ ಹಿಂದೆ ಹೋಗಬೇಡಿ. ಸದಾ ಧಾರ್ಮಿಕ ಆಚರಣೆ ಹೆಸರಲ್ಲಿ ಶೋಷಣೆ ಹೆಚ್ಚು ನಮ್ಮ ಜನಕ್ಕೆ ಆಗಿದೆ. ದುಡಿಯುವ ಜನರಾಗಿ ಗುರುತಿಸಿಕೊಂಡ ದಲಿತ ವರ್ಗಕ್ಕೆ ಸಮಾನತೆ ಕೊಟ್ಟ ಕಾನೂನು ಬಳಸಿ ಹೋರಾಟ ನಡೆಸಬೇಕು ಎಂದರು.
ಮೂಢನಂಬಿಕೆಯಿಂದ ಹೊರ ಬಂದು ದೇವರು ಮತ್ತು ಮನುಷ್ಯನ ಬಗ್ಗೆ ಮೊದಲು ತಿಳಿಯಬೇಕಿದೆ. ಮನುಷ್ಯ ವೀಕ್ ಪ್ರಾಣಿ. ಬಹುಬೇಗ ಭಯ ಪಡುವ ಮನೋಭಾವವಿದೆ. ಇದನ್ನು ಬಳಸಿಕೊಳ್ಳುವ ಜನ ಕೇವಲ 2 ಸಾವಿರಕ್ಕೆ ಐದು ವರ್ಷದ ನಮ್ಮ ಹಕ್ಕು ಮಾರಿ ಕೊಳ್ಳುತ್ತೇವೆ. ಇವೆಲ್ಲದರ ನಡುವೆ ದಾದ ಸಾಹೇಬ್ ಅಂಬೇಡ್ಕರ್ ಅವರ ಬರಹಗಳನ್ನು ಓದುವ ಕೆಲಸ ದಲಿತ ಯುವಕರು ಮಾಡಬೇಕು. ದಲಿತ ಮಹಿಳೆಯರು ಅಂಧ ನಂಬಿಕೆ ಯಿಂದ ಹೊರ ಬಂದು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸಮಾನತೆ ಬೆಳೆಸಿಕೊಳ್ಳ ಬೇಕು ಎಂದ ಅವರು ಬುದ್ಧ, ಬಸವ ಅಂಬೇಡ್ಕರ್ ಚಿಂತನೆಯನ್ನು ಮೊದಲು ಅರ್ಥೈಸಿ ಕೊಂಡು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಶೋಷಿತ ವರ್ಗಕ್ಕೆ ರಕ್ಷಣೆ, ಸಮಾಜದಲ್ಲಿ ಸಮಾನತೆ ಸಾಧಿಸಲು ಕಾನೂನಾತ್ಮಕ ಶಕ್ತಿ ನೀಡಿದ ಅಂಬೇಡ್ಕರ್ ಅವರ ಸಂವಿಧಾನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಂಘಟನೆ ಶಿಕ್ಷಣ ಹೋರಾಟ ಮೂಲ ತತ್ವ ಅಳವಡಿಸಿಕೊಂಡು ಸಾಗಬೇಕಾದ ಸಂಘಟನೆಯಲ್ಲಿ ಸ್ವಪ್ರತಿಷ್ಠೆ ತೋರುವ ಮಂದಿ ಇಲ್ಲಿ ಕಂಡಿದ್ದು ಬೇಸರ ತಂದಿತು. ಬ್ರಿಟಿಷರ ಒಡೆದು ಆಳುವ ನೀತಿ ಇಲ್ಲೂ ಕಾಣಿಸಿಕೊಳ್ಳಬಾರದಿತ್ತು.
ಸಮಾಜ ನಮ್ಮನ್ನು ಗಮನಿಸುತ್ತದೆ ಎಂಬ ಸೂಕ್ಷ್ಮತೆ ಅರಿತು ಸಂಘಟನೆಯನ್ನು ಜವಾಬ್ದಾರಿ ಯಲ್ಲಿ ನಡೆಸಿಕೊಳ್ಳಬೇಕು. ಅದನ್ನು ಬಿಟ್ಟು ನಿಮ್ಮ ಒಡಕು ಪ್ರದರ್ಶನ ಆದರೆ ರಾಜಕಾರಣಿ ಗಳು ಅದನ್ನು ಬಳಸಿ ನಿಮ್ಮನ್ನು ಮತ್ತೇ ತುಳಿಯುತ್ತಾರೆ ಎಂಬ ಎಚ್ಚರಿಕೆ ಅರಿವು ಇರಲಿ ಎಂದ ಅವರು ಅಂಬೇಡ್ಕರ್ ಹೆಸರು ಜಪ ಮಾಡಿದರೆ ಸಾಲದು. ಅವರ ಆದರ್ಶ ನುಡಿ ಯಂತೆ ನಡೆದು ಸಾಮಾಜಿಕ ಸಮಾನತೆ ಸಾಧಿಸಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಲವು ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತಹಶೀಲ್ದಾರ್ ಆರತಿ.ಬಿ, ತಾಲ್ಲೂಕು ಹೊಲಯ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಜಿ.ಎಚ್.ಜಗನ್ನಾಥ್, ಕಾರ್ಯಾಧ್ಯಕ್ಷ ಟಿ.ಈರಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಸಿ.ಕೃಷ್ಣಕಾಂತ್, ಉದ್ಯಮಿ ಕರಣ್ ಕೌಶಿಕ್, ಚಾಲುಕ್ಯ ಆಸ್ಪತ್ರೆ ಸಿಇಓ ಡಾ.ಬಿ.ಎಂ.ನಾಗಭೂಷಣ, ತಾಪಂ ಇಓ ರಂಗನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಗೋಪಾಲ್, ಸಹಕಾರ್ಯದರ್ಶಿ ಎಚ್.ಬಸವರಾಜ್ ಸೇರಿದಂತೆ ದಲಿತ ಮುಖಂಡರು, ಮುಸ್ಲಿಂ ಸಮಾಜ, ಮಡಿವಾಳ ಸಮಾಜ, ಸವಿತ ಸಮಾಜ, ಅಗ್ನಿವಂಶ ಕ್ಷತ್ರಿಯ, ಯಾದವ ಸಮಾಜ, ವಾಲ್ಮೀಕಿ ಸಮಾಜ, ರೈತ ಸಂಘ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಅಧ್ಯಕ್ಷರು, ಪಿಡಿಓಗಳು ಹಾಗೂ ಅಂಬೇಡ್ಕರ್ ಅಭಿಮಾನಿ ಗಳು ಭಾಗವಹಿಸಿದ್ದರು.