ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಒತ್ತುವರಿ ಮಳಿಗೆಗಳಿಗೆ ವಿದ್ಯುತ್ ಭಾಗ್ಯ: ಚಂದ್ರಶೇಖರ್ ಗರಂ

ಬೆಸ್ಕಾಂ ಎಇಇ ಗವಿರಂಗಯ್ಯ ಪ್ರತಿಕ್ರಿಯಿಸಿ ನಮಗೆ ಜಾಗ ಒತ್ತುವರಿಯಾಗಿದೆಯೇ ಎಂದು ಪರಿಶೀಲಿಸುವ ಅಧಿಕಾರವಿಲ್ಲ. ಕಂದಾಯ ಇಲಾಖೆ ಅಥವಾ ಪುರಸಭೆ ಪತ್ರ ನೀಡಿದರೆ ತಕ್ಷಣ ಸಂಪರ್ಕ ಕಡಿತಗೊಳಿಸು ತ್ತೇವೆ ಎಂದು ಹಾರಿಕೆ ಉತ್ತರ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಚಂದ್ರಶೇಖರ್ ಅಕ್ರಮ ಸಂಪರ್ಕಗಳನ್ನು ಕೂಡಲೇ ಕಡಿತಗೊಳಿಸುವಂತೆ ಎಚ್ಚರಿಕೆ ನೀಡಿದರು.

ಚಿಕ್ಕನಾಯಕನಹಳ್ಳಿ : ಪಟ್ಟಣದ ಅಂಚೆ ಕಚೇರಿ ಪಕ್ಕದ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳಿಗೆ ನಿಯಮ ಬಾಹಿರವಾಗಿ ವಿದ್ಯುತ್ ಸಂಪರ್ಕ ನೀಡಲಾಗು ತ್ತಿದೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಗಂಭೀರವಾಗಿ ಆರೋಪಿಸಿದರು.

ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಚೆ ಕಚೇರಿ ಪಕ್ಕದ ಜಾಗವು ಸರಕಾರಿ ಸ್ವತ್ತಾಗಿದ್ದು, ಅದನ್ನು ಒತ್ತುವರಿ ಮಾಡಿ ಮಳಿಗೆ ನಿರ್ಮಿಸ ಲಾಗಿದೆ. ಇವುಗಳಿಗೆ ಯಾವುದೆ ಟ್ರೇಡ್ ಲೈಸನ್ಸ್ ಅಥವಾ ಅಧಿಕೃತ ದಾಖಲೆಗಳಿಲ್ಲ. ಹೀಗಿದ್ದರೂ ಬೆಸ್ಕಾಂ ಅಧಿಕಾರಿಗಳು ಯಾವ ಆಧಾರದ ಮೇಲೆ ಮೀಟರ್ ಅಳವಡಿಸಿದ್ದಾರೆ? ಎಂದು ಪ್ರಶ್ನಿಸಿದ ಅಧ್ಯಕ್ಷರು ಸರಕಾರ ಬಡವರ ಮನೆಗಳಿಗೆ ಬೆಳಕು ನೀಡಲು ಆದೇಶಿಸಿದರೆ ಇಲ್ಲಿ ಪ್ರಭಾವಿಗಳು ನಿರ್ಮಿಸಿದ ವಾಣಿಜ್ಯ ಸಂಕೀರ್ಣಗಳು ಈ ಆದೇಶದ ಮರೆಯಲ್ಲಿ ವಿದ್ಯುತ್ ಭಾಗ್ಯ ಪಡೆಯುತ್ತಿವೆ ಎಂದು ದೂರಿದರು.

ಇದನ್ನೂ ಓದಿ: Chikkanayakanahalli News: ಅಂಬೇಡ್ಕರ್ ಸೇವಾ ಸಮಿತಿ ‘ಲೆಟರ್ ಹೆಡ್‌’ಗೆ ಸೀಮಿತವಲ್ಲ; ಮೂಲ ಆಶಯದಂತೆ ಸಕ್ರಿಯ ಹೋರಾಟ: ಯಗಚೀಹಳ್ಳಿ ರಾಘವೇಂದ್ರ

ಬೆಸ್ಕಾಂ ಎಇಇ ಗವಿರಂಗಯ್ಯ ಪ್ರತಿಕ್ರಿಯಿಸಿ ನಮಗೆ ಜಾಗ ಒತ್ತುವರಿಯಾಗಿದೆಯೇ ಎಂದು ಪರಿಶೀಲಿ ಸುವ ಅಧಿಕಾರವಿಲ್ಲ. ಕಂದಾಯ ಇಲಾಖೆ ಅಥವಾ ಪುರಸಭೆ ಪತ್ರ ನೀಡಿದರೆ ತಕ್ಷಣ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಚಂದ್ರಶೇಖರ್ ಅಕ್ರಮ ಸಂಪರ್ಕಗಳನ್ನು ಕೂಡಲೇ ಕಡಿತಗೊಳಿಸುವಂತೆ ಎಚ್ಚರಿಕೆ ನೀಡಿದರು.

ಪಡಿತರ ಕೇಂದ್ರಗಳಲ್ಲಿ ಪೇ-ಸ್ಲಿಪ್ ಮಾಯ

ಪಡಿತರ ಕೇಂದ್ರಗಳಲ್ಲಿ ಅಕ್ಕಿಯನ್ನು ನೆಲಕ್ಕೆ ಸುರಿಯುತ್ತಿರುವ ಮತ್ತು ಫಲಾನುಭವಿಗಳಿಗೆ ಪೇ-ಸ್ಲಿಪ್ ನೀಡದ ಬಗ್ಗೆ ಸದಸ್ಯ ನಟರಾಜು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿ ಪ್ರಜ್ವಲ್ ವಿತರಕರಿಗೆ ಕಳೆದ 6 ತಿಂಗಳಿನಿAದ ಸರಕಾರ ಕಮಿಷನ್ ನೀಡಿಲ್ಲ. ಅನುದಾನ ದ ಕೊರತೆಯಿಂದ ವಿತರಕರು ನಿರ್ಲಕ್ಷ್ಯ ವಹಿಸುತ್ತಿರಬಹುದು ಎಂದು ಅಸಹಾಯಕತೆ ವ್ಯಕ್ತಪಡಿಸಿ ದರು. ಇದನ್ನು ಒಪ್ಪದ ಚಂದ್ರಶೇಖರ್À ಕಮಿಷನ್ ಸಮಸ್ಯೆ ಸರಕಾರಿ ಮಟ್ಟದಲ್ಲಿದೆ, ಆದರೆ ಜನರಿಗೆ ನೀಡುವ ಸೇವೆಯಲ್ಲಿ ಲೋಪವಾದರೆ ಸಂಬAಧಪಟ್ಟವರ ಮೇಲೆ ಶಿಸ್ತು ಕ್ರಮ ಅನಿವಾರ್ಯ ಎಂದರು.

ಶಿಷ್ಟಾಚಾರ ಉಲ್ಲಂಘನೆಗೆ ಆಕ್ಷೇಪ

ಸರಕಾರಿ ಕಾರ್ಯಕ್ರಮ ಹಾಗು ಸಭೆಗಳಿಗೆ ಗ್ಯಾರಂಟಿ ಸಮಿತಿ ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ. ಸಮಿತಿ ರಚಿಸಿರುವುದು ಕೇವಲ ಹೆಸರಿಗಲ್ಲ. ಇನ್ನು ಮುಂದೆ ಪ್ರತಿಯೊಂದು ಅಧಿಕೃತ ಕಾರ್ಯಕ್ರಮಕ್ಕೆ ಸದಸ್ಯರನ್ನು ಕಡ್ಡಾಯವಗಿ ಆಹ್ವಾನಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಸಭೆಯಲ್ಲಿ ಇಓ ದೊಡ್ಡಸಿದ್ದಯ್ಯ, ಸಿಡಿಪಿಓ ಹೊನ್ನಪ್ಪ, ಸಾರಿಗೆ ಘಟಕಾಧಿಕಾರಿ ಮಂಜುನಾಥ್, ಉದ್ಯೋಗ ಮಾಹಿತಿ ಕೇಂದ್ರದ ಅರುಣಕುಮಾರ್, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಪಾಂಡುರAಗಯ್ಯ, ಸದಸ್ಯರುಗಳಾದ ಓಂಕಾರಮೂರ್ತಿ, ಮಂಜುನಾಥ್, ಸಿದ್ದರಾಮಯ್ಯ, ಚಂದ್ರಪ್ಪ, ಚಿಕ್ಕತಿಮ್ಮಯ್ಯ, ಚಂದ್ರಶೇಖರ್ ಹಾಜರಿದ್ದರು.