ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಅಂಬೇಡ್ಕರ್ ಸೇವಾ ಸಮಿತಿ ‘ಲೆಟರ್ ಹೆಡ್‌’ಗೆ ಸೀಮಿತವಲ್ಲ; ಮೂಲ ಆಶಯದಂತೆ ಸಕ್ರಿಯ ಹೋರಾಟ: ಯಗಚೀಹಳ್ಳಿ ರಾಘವೇಂದ್ರ

ಸಂವಿಧಾನದ ಆಶಯಗಳನ್ನು ಮನೆಮನೆಗೆ ತಲುಪಿಸುವುದು ಮತ್ತು ಶೈಕ್ಷಣಿಕ, ಸಾಮಾಜಿಕವಾಗಿ ಹಿಂದು ಳಿದವರಿಗೆ ನ್ಯಾಯ ಕೊಡಿಸುವುದು ಸಮಿತಿಯ ಮೊದಲ ಆದ್ಯತೆಯಾಗಿದೆ. ಸಮಿತಿಯನ್ನು ಬಲಪಡಿ ಸುವ ನಿಟ್ಟಿನಲ್ಲಿ ಅಗಸರಹಳ್ಳಿ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಸಂಘಟನೆಯು ಬಲಿಷ್ಠವಾಗಿ ಬೆಳೆಯಲಿದೆ

ಅಂಬೇಡ್ಕರ್ ಸೇವಾ ಸಮಿತಿ ‘ಲೆಟರ್ ಹೆಡ್‌’ಗೆ ಸೀಮಿತವಲ್ಲ

-

Ashok Nayak
Ashok Nayak Dec 29, 2025 5:55 PM

ಚಿಕ್ಕನಾಯಕನಹಳ್ಳಿ: ಅಂಬೇಡ್ಕರ್ ಸೇವಾ ಸಮಿತಿಯು ಕೇವಲ ಹೆಸರಿಗಷ್ಟೇ ಸೀಮಿತವಾದ ‘ಲೆಟರ್ ಹೆಡ್’ ಸಂಘಟನೆಯಾಗಿ ಉಳಿಯದೆ, ಬಾಬಾಸಾಹೇಬರ ಮೂಲ ಆಶಯದಂತೆ ಶೋಷಿತರ ಮತ್ತು ದೀನದಲಿತರ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಸಮಿತಿಯ ವಿಭಾಗೀಯ ಪ್ರಮುಖ ರಾದ ಯಗಚೀ ಕಟ್ಟೆ ರಾಘವೇಂದ್ರ ಗುಡುಗಿದ್ದಾರೆ.

ನಗರದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಸೇವಾ ಸಮಿತಿಯ ನೂತನ ಅಧ್ಯಕ್ಷರ ನೇಮಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಿತಿಯ ನೂತನ ಅಧ್ಯಕ್ಷರಾಗಿ ಅಗಸರಹಳ್ಳಿ ನರಸಿಂಹಮೂರ್ತಿ ಅವರನ್ನು ಸರ್ವಾನುಮತದಿಂದ ನೇಮಕ ಮಾಡಿದ ಬಳಿಕ, ಸಂಘಟನೆಯ ಮುಂದಿನ ದಾರಿಯ ಬಗ್ಗೆ ಅವರು ಸ್ಪಷ್ಟ ಸಂದೇಶ ನೀಡಿದರು.

ಇದನ್ನೂ ಓದಿ: Chikkanayakanahalli News: ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಸೇವಾದಳದ ಸಂಸ್ಥಾಪನಾ ದಿನಾಚರಣೆ ಸಂಭ್ರಮ

ಸಭೆಯಲ್ಲಿ ಸಂಘಟನೆಯ ಇತಿಹಾಸವನ್ನು ಸ್ಮರಿಸಿದ ರಾಘವೇಂದ್ರ ಅವರು, ಹಿಂದೆ ಕಾರ್ಮಿಕರ ಮತ್ತು ಉದ್ಯಮಿಗಳ ನಡುವೆ ತೀವ್ರ ಸಂಘರ್ಷ ಉಂಟಾದಾಗ, ಶ್ರಮಿಕರ ಹಿತರಕ್ಷಣೆಗಾಗಿ ಪ್ರೊಫೆಸರ್ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಈ ಸಂಘಟನೆ ಆರಂಭವಾಯಿತು. ಆ ಅಪ್ಪಟ ಹೋರಾಟದ ಕಿಚ್ಚು ನಮ್ಮಲ್ಲಿ ಇರಬೇಕು. ನಮ್ಮ ಸಮಿತಿಯು ಪ್ರತಿ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿ ಸುವ ಮೂಲಕ ಕ್ರಿಯಾಶೀಲವಾಗಿರಲಿದೆ.

ಸಂವಿಧಾನದ ಆಶಯಗಳನ್ನು ಮನೆಮನೆಗೆ ತಲುಪಿಸುವುದು ಮತ್ತು ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ಕೊಡಿಸುವುದು ಸಮಿತಿಯ ಮೊದಲ ಆದ್ಯತೆಯಾಗಿದೆ. ಸಮಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಅಗಸರಹಳ್ಳಿ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ತಾಲ್ಲೂಕಿ ನಾದ್ಯಂತ ಸಂಘಟನೆಯು ಬಲಿಷ್ಠವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷರ ಸಂಕಲ್ಪ: ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅಗಸರಹಳ್ಳಿ ನರಸಿಂಹಮೂರ್ತಿ, ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರಾಮಾಣಿಕವಾಗಿ ಉಳಿಸಿಕೊಳ್ಳು ತ್ತೇನೆ. ಯಗಚೀಹಳ್ಳಿ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಸಮಿತಿಯನ್ನು ಜಿಲ್ಲೆಗೆ ಮಾದರಿ ಯಾಗಿ ರೂಪಿಸುತ್ತೇನೆ, ಎಂದು ಭರವಸೆ ನೀಡಿದರು. ಸಭೆಯಲ್ಲಿ ತಿಪಟೂರು ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ್, ನಗರ ಘಟಕದ ರಮೇಶ್, ಮಾರನಗೆರೆ ಅಶೋಕ್, ವೆಂಕಟೇಶಯ್ಯ, ಪ್ರಕಾಶ್, ಪರಮೇಶ್ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.