Pavagada News: ವೈದ್ಯನ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕ ಸಾವು; ಆಸ್ಪತ್ರೆ ಎದುರು ಕುಟುಂಬಸ್ಥರ ಪ್ರತಿಭಟನೆ
Pavagada News: ವೈದ್ಯನ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಬಾಲಕನ ಕುಟುಂಬಸ್ಥರು ಪಾವಗಡದ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಡೆಂಗಿ ಜ್ವರ ತೀವ್ರವಾಗಿ, ಪರಿಸ್ಥಿತಿ ಕೈಮೀರಿದ ಬಳಿಕ ವೈದ್ಯರು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಹೀಗಾಗಿ ಬಾಲಕ ಮೃತಪಟ್ಟದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
![Pavagada protest (1)](https://cdn-vishwavani-prod.hindverse.com/media/images/Pavagada_protest_1.max-1280x720.jpg)
![Profile](https://vishwavani.news/static/img/user.5c7ca8245eec.png)
ಪಾವಗಡ: ವೈದ್ಯನ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಪಟ್ಟಣದ ಸುಧಾ ಕ್ಲಿನಿಕ್ ಎದುರು ಮೃತದೇಹದೊಂದಿಗೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಘಟನೆ (Pavagada News) ಬುಧವಾರ ನಡೆದಿದೆ. ಪಟ್ಟಣದ ಬಾಬೈನ ಗುಡಿ ಬೀದಿಯ ಹರಿಕುಮಾರ್ ಎನ್ನುವವರ ಪುತ್ರ ಕರುಣಾಕರ್ (7) ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದ. ಆದರೆ, ವೈದ್ಯ ಸರಿಯಾಗಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ, ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮೃತ ಬಾಲಕನ ತಂದೆ ಹರಿಕುಮಾರ್ ಮಾತನಾಡಿ, ಸೋಮವಾರದಿಂದ ನಾವು ಪಟ್ಟಣದ ಸುಧಾ ಕ್ಲಿನಿಕ್ ಬಳಿಯ ಡಾ.ಸುಧಾಕರ್ ರೆಡ್ಡಿ ಅವರ ಬಳಿ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿದ್ದೆವು. ಡೆಂಗಿ ಜ್ವರ ಎಂದು ವೈದ್ಯರು ಹೇಳಿದರು. ಮಗುವಿನ ದೇಹ ತಣ್ಣಗಾದ ಕೊನೆ ಕ್ಷಣದಲ್ಲಿ ಬೆಂಗಳೂರಿಗೆ ಹೋಗಿ ಎಂದು ತರಾತುರಿಯಲ್ಲಿ ಹೇಳಿ ಆಸ್ಪತ್ರೆ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಇದರಿಂದ ಮಗ ಮೃತಪಟ್ಟಿದ್ದಾನೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Digital Fraud: ಆನ್‌ಲೈನ್‌ನಲ್ಲಿ ಹೊಟೇಲ್ ರೂಂ ಬುಕ್ಕಿಂಗ್ ಮಾಡಲು ಹೋಗಿ ಹಣ ಕಳೆದುಕೊಂಡ ಮಹಿಳೆ
ತಾಯಿಯ ಮೃತದೇಹದ ಮುಂದೆ ಎದೆಹಾಲಿಗೆ ಅಂಗಲಾಚಿದ ಮಗು
![Belagavi news (1)](https://cdn-vishwavani-prod.hindverse.com/media/images/Belagavi_news_1.width-800.jpg)
ಬೆಳಗಾವಿ: ಹಸಿವಿನಿಂದ ಬಳಲುತ್ತಿದ್ದ ಮಗು ತಾಯಿಯ ಮೃತದೇಹದ ಮುಂದೆ ಎದೆಹಾಲಿಗೆ ಅಂಗಲಾಚುತ್ತಿತ್ತು. ಆ ಪುಟ್ಟ ಮಗುವಿಗೆ ಕಲ್ಪನೆ ಇರಲಿಲ್ಲ. ತನ್ನ ತಾಯಿ ದುರುಳ ತಂದೆಯ ಕೋಪಕ್ಕೆ ಬಲಿಯಾಗಿದ್ದಾಳೆ ಎಂದು. ಹೌದು, ಇಂತಹ ಅಮಾನವೀಯ ಘಟನೆ ನಡೆದಿದ್ದು, ಬೆಳಗಾವಿ (Belagavi News) ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ. ಪ್ರತಿದಿನ ಮದ್ಯ ಸೇವಿಸಿ ಪತ್ನಿಯ ಜತೆ ಜಗಳ ಮಾಡುತ್ತಿದ್ದ ಆರೋಪಿ ಬಾಲಾಜಿ ಕಬಲಿ (35) ಮಹಾರಾಷ್ಟ್ರದ ಯಾವತ್ಮಾಳ್ ಜಿಲ್ಲೆಯವನು. ಕುಡಿದ ಅಮಲಿನಲ್ಲಿ ಪತ್ನಿ ಮೀರಾಬಾಯಿ ಕಬಲಿ (25) ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇದೆಲ್ಲದರ ಪರಿವೇ ಇಲ್ಲದ ಪುಟ್ಟ ಕಂದಮ್ಮ ತಾಯಿಯ ಮೃತದೇಹದ ಮುಂದೆ ಕುಳಿತು ಎದೆಹಾಲಿಗೆ ಹಾತೊರೆಯುತ್ತಿದ್ದ ಘಟನೆ ಹೃದಯವಿದ್ರಾವಕವಾಗಿತ್ತು.
ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡಲು ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದ ಮಮದಾಪೂರ ರಸ್ತೆಯಲ್ಲಿ ತಾತ್ಕಾಲಿಕ ಟೆಂಟ್ ನಲ್ಲಿ ವಾಸವಿದ್ದರು. ಮಂಗಳವಾರ ಕುಡಿದು ಪತ್ನಿ ಜೊತೆ ಜಗಳ ಮಾಡಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ ದುಡಿದ ಹಣ ಕುಡಿಯಲು ಕೊಡುವಂತೆ ಆಗ್ರಹಿಸಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ ವಿರೋಧ ಮಾಡಿದ್ದಕ್ಕೆ ಆರೋಪಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ | Theft case: ಚಿನ್ನಗಳ್ಳನ ಪ್ರೇಮಕಥೆ; ಪ್ರೇಯಸಿಗೆ 3 ಕೋಟಿ ಮೌಲ್ಯದ ಮನೆ ಗಿಫ್ಟ್ ಕೊಟ್ಟ ಹೈಟೆಕ್ ಕಳ್ಳ!
ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಘಟನೆ ಕುರಿತು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು ಅವುಗಳನ್ನು ಆಕೆಯ ತವರುಮನೆಯವರಿಗೆ ಒಪ್ಪಿಸಲಾಗಿದೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದರು.