ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನವಚೇತನ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ನಿರ್ವಾಣಯ್ಯ ಅವಿರೋಧ ಆಯ್ಕೆ

ಸಂಘದ ಸದಸ್ಯರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹಾಗೂ ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ನೂತನ ಉಪಾಧ್ಯಕ್ಷ ಸಿ. ಜಿ. ರೇವಣ್ಣ ಮಾತನಾಡಿ, ಇಡೀ ನಿರ್ದೇಶಕ ಮಂಡಳಿಯನ್ನು ವಿಶ್ವಾಸಕ್ಕೆ ಪಡೆದು ಸಂಸ್ಥೆಯನ್ನು ಆರ್ಥಿಕವಾಗಿ ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ ಹೇಳಿದರು

ಸಂಘದ ಅಧ್ಯಕ್ಷರಾಗಿ ಎಸ್. ನಿರ್ವಾಣಯ್ಯ ಅವಿರೋಧ ಆಯ್ಕೆ

-

Ashok Nayak
Ashok Nayak Mar 6, 2026 5:32 PM

​ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪ್ರತಿಷ್ಠಿತ ನವಚೇತನ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ನಿರ್ವಾಣಯ್ಯ ಹಾಗೂ ಉಪಾಧ್ಯಕ್ಷರಾಗಿ ಸಿ.ಜಿ.ರೇವಣ್ಣ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಗಳಾದ ಶ್ರೀನಿವಾಸ್ ಅವರು ಯಶಸ್ವಿ ಯಾಗಿ ನಡೆಸಿಕೊಟ್ಟರು.

ಇದನ್ನೂ ಓದಿ: Karnataka Budget: ರಾಜ್ಯಕ್ಕೆ 2026-27ರಲ್ಲಿ ಅಂದಾಜು ಸಾಲ 1.32 ಲಕ್ಷ ಕೋಟಿ ರುಪಾಯಿ; ಎಲ್ಲಿಂದ?

ಸಂಘದ ಕಾರ್ಯದರ್ಶಿ ಚೈತ್ರಾ ಅವರು ಚುನಾವಣಾ ಕಾರ್ಯಕಲಾಪಗಳನ್ನು ಸಮರ್ಪಕ ವಾಗಿ ನಿರ್ವಹಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ, ಇಬ್ಬರೂ ನಾಯಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದರು.



​ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಎಸ್.ನಿರ್ವಾಣಯ್ಯ ಅವರು, ಸಂಘದ ಸದಸ್ಯರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹಾಗೂ ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ನೂತನ ಉಪಾಧ್ಯಕ್ಷ ಸಿ. ಜಿ. ರೇವಣ್ಣ ಮಾತನಾಡಿ, ಇಡೀ ನಿರ್ದೇಶಕ ಮಂಡಳಿಯನ್ನು ವಿಶ್ವಾಸಕ್ಕೆ ಪಡೆದು ಸಂಸ್ಥೆಯನ್ನು ಆರ್ಥಿಕವಾಗಿ ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ ಹೇಳಿದರು. ನೂತನ ನಿರ್ದೇಶಕರುಗಳಾಗಿ ಕೋದಂಡಯ್ಯ, ಕೃಷ್ಣೇಗೌಡ, ಶಿಲ್ಪಾ, ಉಮಾ, ಲಿಂಗರಾಜು, ದೇವರಾಜ್, ನಾಗರಾಜ್, ಇಂದುಕುಮಾರ್, ಬೀರಲಿಂಗಯ್ಯ, ಗುರುಮೂರ್ತಿ ಹಾಗೂ ಮಂಜುನಾಥಸ್ವಾಮಿ ಅವರು ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಸಂಘದ ವಿವಿಧ ಸಹಕಾರ ಸಂಘಗಳ ಮುಖಂಡರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.