ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಕಂದಾಯ ಇಲಾಖೆ ವಿರುದ್ಧ ರೈತರು ದಿಢೀರ್ ಪ್ರತಿಭಟನೆ

ದಲಿತ ಮುಖಂಡ ಅದಲಗೆರೆ ಈಶ್ವರಯ್ಯ  ಮಾತನಾಡಿ, ಸುಮಾರು ಎರಡು ತಲೆ ಮಾರುಗಳಿಂದ ರೈತರು ಜಮೀನಿನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಮೀನು ದುರಾಸ್ತಿ ಮಾಡುವ ಸಂದರ್ಭದಲ್ಲಿ ಒಂದೊಂದು ಜಮೀನಿನಲ್ಲೂ ಹತ್ತು ಕುಂಟೆ ,ಇಪ್ಪತ್ತು ಕುಂಟೆ ಜಮೀನು ಕಡಿಮೆ ಮಾಡಿರುವುದು ಗಮನಕ್ಕೆ ಬಂದಿದ್ದು. ಕೂಡಲೇ ದಂಡಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಯನ್ನು ಬಗೆಹರಿಸಕೊಡಬೇಕು ಎಂದರು.

ಗುಬ್ಬಿ: ತಾಲ್ಲೂಕಿನ ಹಲಸಿನ ನಾಗೇನಹಳ್ಳಿ ಗ್ರಾಮದ ರೈತರ ಜಮೀನನ್ನು ಸರ್ವೆ ಇಲಾಖೆಯ ಅಧಿಕಾರಿಗಳು ಪಹಣಿಯಲ್ಲಿ ಜಮೀನು ಕಡಿಮೆ ಮಾಡಿದ್ದಾರೆ ಎಂದು ಆಗ್ರಹಿಸಿ ದಲಿತ ಕುಟುಂಬ ಗಳು ಕಂದಾಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ಹಲಸಿನ ನಾಗೇನ ಹಳ್ಳಿ ಗ್ರಾಮದಲ್ಲಿ ಸುಮಾರು 30 ದಲಿತ ಕುಂಟುಂಬಗಳು ವಾಸವಾಗಿದ್ದು, ರೈತರ ಜಮೀನಿನ್ನು ಸರ್ವೆ ಮಾಡುತ್ತೇವೆ ಎಂದು  ಮನೆ ಮನೆ ಹತ್ತಿರ ಹೋಗಿ ದಾಖಲಾತಿಗಳನ್ನು ಪಡೆದು  ರೈತರ 1ಎಕರೆ ಜಮೀನಿನಲ್ಲಿ ಹತ್ತು ಕುಂಟೆ ಐದು ಕುಂಟೆ ಈಗೇ ಎಲ್ಲ ರೈತರ ಜಮೀನಿನಲ್ಲಿ ಕಡಿಮೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ.

ಇದನ್ನೂ ಓದಿ: Gubbi News: ಗುಬ್ಬಿ ತಾಲ್ಲೂಕಿನ ಕೆರೆಗಳಿಗೆ ಶೀಘ್ರ ಹೇಮೆ ಹರಿಸಿ : ಗುಬ್ಬಿ ಬಿಜೆಪಿಗರ ಒತ್ತಾಯ

ತಹಶೀಲ್ದಾರ್ ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು. ಈ ಹಿಂದೆೆ ಎಷ್ಟು ಪಹಣಿಯಲ್ಲಿ ಇತ್ತು ಅದೇ ರೀತಿ  ತೋರಿಸಬೇಕು. ಕೂಡಲೇ ಸರಿಪಡಿಸದೆ ಹೋದರೆ  ತಹಶೀಲ್ದಾರ್ ಕಛೇರಿಗೆ ಪಾದಯಾತ್ರೆ ಮಾಡಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಒತ್ತಾಯಿಸಿ ದರು‌.

ದಲಿತ ಮುಖಂಡ ಅದಲಗೆರೆ ಈಶ್ವರಯ್ಯ  ಮಾತನಾಡಿ, ಸುಮಾರು ಎರಡು ತಲೆ ಮಾರುಗಳಿಂದ ರೈತರು ಜಮೀನಿನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಮೀನು ದುರಾಸ್ತಿ ಮಾಡುವ ಸಂದರ್ಭದಲ್ಲಿ ಒಂದೊಂದು ಜಮೀನಿನಲ್ಲೂ ಹತ್ತು ಕುಂಟೆ ,ಇಪ್ಪತ್ತು ಕುಂಟೆ ಜಮೀನು ಕಡಿಮೆ ಮಾಡಿರುವುದು ಗಮನಕ್ಕೆ ಬಂದಿದ್ದು. ಕೂಡಲೇ ದಂಡಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಬಗೆಹರಿಸಕೊಡಬೇಕು ಎಂದರು.

ಕಂದಾಯ ಅಧಿಕಾರಿ ಮೋಹನ್ ಮಾತನಾಡಿ  ಜಮೀನು ಸರ್ವೆ ಮಾಡುವಾಗ ರೈತರ ಜಮೀನು ಕಡಿಮೆ ಆಗಿದೆ ಎಂದು  ರೈತರು ಪ್ರತಿಭಟನೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.ಕೂಡಲೇ ತಹಶೀಲ್ದಾರ್ ಗಮನಕ್ಕೆ ತಂದು ಮತ್ತೊಮ್ಮೆ  ಸರ್ವೆ ಮಾಡಿಸಿ ಒಂದು ವಾರದೊಳಗೆ ಸಮಸ್ಯೆ ಯನ್ನು ಬಗೆಹರಿಸಲಾಗುತ್ತದೆ. ರೈತರು ಸಹಕರಿಸಬೇಕು ಎಂದು ಹೇಳಿದ ಬಳಿಕ ದಲಿತ ಮುಖಂಡರು ಪ್ರತಿಭಟನೆಯನ್ನು ಹಿಂಪಡೆದರು.

ಇದೇ ಸಂದರ್ಭದಲ್ಲಿ ದಸಂಸ ಪದಾಧಿಕಾರಿಗಳಾದ ಕುಂದರನಹಳ್ಳಿ ನಟರಾಜು, ಕಲ್ಲೂರು ರವಿಕುಮಾರ್, ಕೋಟೆ ಕಲ್ಲೇಶ್, ಡಿ ಎಂ ಲಕ್ಷ್ಮಣ್, ಗ್ಯಾರಹಳ್ಳಿ ಯೋಗೀಶ್, ಮಂಚಿಹಳ್ಳಿ ಶಿವಸ್ವಾಮಿ, ರಾಮು, ಗ್ರಾಮಸ್ಥರಾದ ಸೋಮಶೇಖರ್, ರವಿ, ಕುಮಾರ್, ಕಿರಣ್, ನರಸಿಂಹಮೂರ್ತಿ, ಭಾಗ್ಯಮ್ಮ, ಶಾಂತಮ್ಮ, ಗೀತಾ, ಸಿಂಧು ಸೇರಿದಂತೆ ಇನ್ನಿತರರು ಇದ್ದರು.