ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Tumkur News: ‘ನಿಸ್ವಾರ್ಥ ಸೇವೆ ಮಾಡಿದರೆ ಕೀರ್ತಿ, ಪ್ರಶಸ್ತಿ ಹುಡುಕಿ ಬರುತ್ತವೆ’ : ಎಸ್.ಪಿ.ಚಿದಾನಂದ್ ಅಭಿಮತ

ಕಳೆದ ನವೆಂಬರ್ 27ರಂದು ಸಂಸ್ಥೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿತ್ತು, ಆ ಸಮಾರಂಭದಲ್ಲಿ ತಾವು ಭಾಗವಹಿಸಲು ಸಾಧ್ಯವಾಗದ ಕಾರಣಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಯಾವುದೇ ಪ್ರಶಸ್ತಿಯೂ ತಾವು ಮಾಡುವ ಕೆಲಸ, ಸೇವೆಗೆ ಪ್ರೇರಣೆ ನೀಡುತ್ತದೆ

‘ನಿಸ್ವಾರ್ಥ ಸೇವೆ ಮಾಡಿದರೆ ಕೀರ್ತಿ, ಪ್ರಶಸ್ತಿ ಹುಡುಕಿ ಬರುತ್ತವೆ’

-

Ashok Nayak
Ashok Nayak Jan 8, 2026 4:37 PM

ತುಮಕೂರು: ಕಾಯಕನಿಷ್ಠೆ ರೂಢಿಸಿಕೊಂಡು ಯಾವುದೇ ಕ್ಷೇತ್ರದಲ್ಲಾದರೂ ನಿಸ್ವಾರ್ಥ ಸೇವೆ ಮಾಡುತ್ತಿದ್ದರೆ ಕೀರ್ತಿ, ಪ್ರಶಸ್ತಿ ಹುಡುಕಿಕೊಂಡು ಬರುತ್ತವೆ. ಸಮಾಜವೂ ಗೌರವಿಸುತ್ತದೆ ಎಂದು ಸ್ಫೂರ್ತಿ ಡೆವಲಪರ್ಸ್ ಮಾಲೀಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.

ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಯ ಉದ್ಯಮ ಹಾಗೂ ಸಮಾಜ ಸೇವೆಗಾಗಿ ನೀಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಗುರುವಾರ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ನವೆಂಬರ್ 27ರಂದು ಸಂಸ್ಥೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿತ್ತು, ಆ ಸಮಾರಂಭದಲ್ಲಿ ತಾವು ಭಾಗವಹಿಸಲು ಸಾಧ್ಯವಾಗದ ಕಾರಣಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಯಾವುದೇ ಪ್ರಶಸ್ತಿಯೂ ತಾವು ಮಾಡುವ ಕೆಲಸ, ಸೇವೆಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Tumkur News: ಬಾಳಿಗೊಂದು ಗುರಿ ಇರಲಿ: ಶ್ರೀ ರಂಭಾಪುರಿ ಜಗದ್ಗುರು

75ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯು ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಧಕರನ್ನು ಗುರುತಿಸಿ ಗೌರವಿಸುವುದು ಒಳ್ಳೆಯ ಸಂಪ್ರದಾಯ. ತಮ್ಮ ಸಾಧನೆಯ ಹಿಂದೆ ಕುಟುಂಬದವರು, ಸಿಬ್ಬಂದಿ, ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರ ಸಹಕಾರವಿದೆ. ಈ ಪ್ರಶಸ್ತಿಯನ್ನು ಇವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಅಧ್ಯಕ್ಷ ಶ್ರಾವಣ ಲಕ್ಷö್ಮಣ್ ಮಾತನಾಡಿ, ನ್ಯಾಯಾಧೀಶರು, ವಿವಿಧ ಗಣ್ಯರ ನೇತೃತ್ವದಲ್ಲಿ ನವೆಂಬರ್‌ನಲ್ಲಿ ನಡೆದ ಸಮಾ ರಂಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ೭೫ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ಉದ್ಯಮ ಮತ್ತು ಸಮಾಜ ಸೇವೆಗಾಗಿ ಎಸ್.ಪಿ.ಚಿದಾನಂದ್ ಅವರನ್ನು ಆಯ್ಕೆ ಮಾಡ ಲಾಗಿತ್ತು. ಅಂದು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಇಂದು ಅವರ ಮನೆಗೆ ಬಂದು ಪ್ರಶಸ್ತಿ ವಿತರಣೆ ಮಾಡಲಾಯಿತು ಎಂದರು.

ಈ ವೇಳೆ, ಚಿದಾನಂದ್ ಅವರ ಆತ್ಮೀಯರು, ವಿವಿಧ ಮುಖಂಡರು ಹಾಜರಿದ್ದು ಅಭಿನಂದಿಸಿದರು.