ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ನರಸಿಂಹಮೂರ್ತಿ ಆಯ್ಕೆ
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂಘದ ಚುನಾವಣೆ ನಡೆದಿದೆ. ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಹಾಗೂ ಪ್ರಧಾನಕಾರ್ಯದರ್ಶಿ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಉಳಿದಂತೆ ಖಜಾಂಚಿ, ಕಾರ್ಯದರ್ಶಿ ಎರಡು ಸ್ಥಾನ ಹಾಗೂ ನಿರ್ದೇಶಕರ 7 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಕೊರಟಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು. -
ಕೊರಟಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊರಟಗೆರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆ.ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಕೆ.ನರಸಿಂಹಮೂರ್ತಿ ಅವರು ಅತಿಹೆಚ್ಚು ಮತಗಳನ್ನು ಪಡೆದು ತಾಲೂಕು ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಹಾಗೂ ಚುನಾವಣಾಧಿಕಾರಿ ಪತ್ರಕರ್ತ ಪ್ರಸನ್ನ ದೊಡ್ಡಗುಣಿ ಹಾಗೂ ಸಹಾಯಕ ಅಧಿಕಾರಿ ಯೋಗೀಶ್ ಮಳೇಕಲ್ಲಹಳ್ಳಿ ಹಾಗೂ ಸುಪ್ರೀತಿಕ್ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಹಾಗೂ ಪ್ರಧಾನಕಾರ್ಯದರ್ಶಿ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಉಳಿದಂತೆ ಖಜಾಂಚಿ, ಕಾರ್ಯದರ್ಶಿ ಎರಡು ಸ್ಥಾನ ಹಾಗೂ ನಿರ್ದೇಶಕರ 7 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಕೊರಟಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ನರಸಿಂಹಮೂರ್ತಿ (ವಿ.ಕೆ.ಮೂರ್ತಿ), ಉಪಾಧ್ಯಕ್ಷ ಸ್ಥಾನ ಎರಡರಲ್ಲಿ ಎಚ್.ಎನ್.ನಾಗರಾಜು, ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ಡಿ.ಎಂ.ರಾಘವೇಂದ್ರ ಅವರು ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ. ಅವಿರೋಧವಾಗಿ ಕಾರ್ಯದರ್ಶಿ ಸ್ಥಾನ ಎರಡರಲ್ಲಿ ಲಕ್ಷ್ಮೀಕಾಂತ, ಲಕ್ಷ್ಮೀಶ, ಖಜಾಂಚಿ ನವೀನ್‌ಕುಮಾರ್, ನಿರ್ದೇಶಕರಾಗಿ ಲೋಕೇಶ್, ದೇವರಾಜು, ವಿಜಯಶಂಕರ್, ನಾಗೇಂದ್ರ, ಮಂಜುಸ್ವಾಮಿ, ಸಿದ್ದರಾಜು, ನರಸಿಂಹಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಮಾತನಾಡಿ, ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಹಾಗೂ ಸರ್ಕಾರ, ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವನ್ನು ಬರಹ ಮೂಲಕ ಮಾಡಬೇಕು. ನೂತನ ತಾಲೂಕು ಸಂಘ ರಚನೆಯಾಗಿದ್ದು, ನಮ್ಮ ಜಿಲ್ಲಾ ಸಂಘ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸುವ ಕೆಲಸದಲ್ಲಿ ತೊಡಗಿದ್ದೇವೆ ಎಂದು ಹೇಳಿ, ನೂತನ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿದೆ ಬರೋಬ್ಬರಿ 946 ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಚುನಾವಣೆ ವೇಳೆ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್, ಉಪಾಧ್ಯಕ್ಷ ಜಯನುಡಿ ಜಯಣ್ಣ, ಕಾರ್ಯದರ್ಶಿ ರಂಗಧಾಮಯ್ಯ, ನಂದೀಶ್ ಖಜಾಂಚಿ ಸತೀಶ್ ಹಾರೋಗೆರೆ, ನಿರ್ದೇಶಕರಾದ ಮಾರುತಿ ಗಂಗಹನುಮಯ್ಯ, ಪುರುಷೋತ್ತಮ್, ಸುರೇಶ್‌ವತ್ಸ, ದೊಡ್ಡೇರಿ ಕಣಿಮಯ್ಯ, ತಾಲೂಕು ಪತ್ರಕರ್ತರಾದ ಹರೀಶ್ ಬಾಬು, ಚಿದಂಬರ್, ಪದ್ಮನಾಬ್, ಮಂಜುನಾಥ್, ಶಿವನಂದ್, ಪದ್ಮರಾಜು, ಸತೀಶ್, ಚಿಕ್ಕಕಾಮಣ್ಣ, ಶ್ರೀನಿವಾಸ್, ರಮೇಶ್, ಸತೀಶ್, ಬಾಬುನಾಯ್ಕ್, ಸಿದ್ದೇಶ್, ತಿಮ್ಮಯ್ಯ, ಮುಖಂಡರಾದ ಚೇತನ್ ದಾಸರಹಳ್ಳಿ, ನರಸಿಂಹಮೂರ್ತಿ, ರವಿಣ್ಣ, ರೇಣುಕಾ ಪ್ರಸಾದ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.