ಬಗರ್‌ಹುಕುಂ ಸಾಗುವಳಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ಸೋಮವಾರ ಸಭೆ - ಶಾಸಕ ಸಿ.ಬಿ.ಸುರೇಶ್‌ಬಾಬು
ನಮ್ಮ ತಾಲ್ಲೂಕಿನ ಸಾರ್ವಜನಿಕರಿಗಾಗಿ ಒಂದು ವಿಶೇಷ ಯೋಜನೆಯನ್ನು ರೂಪಿಸಿದ್ದು ಅದರಂತೆ ತಾಲ್ಲೂಕಿನ ಎಲ್ಲಾ ಭಾಗದ ಜನರು ತಮ್ಮ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳಿಗೆ ಹಾಗೂ ಸಾಗುವಳಿ ಚೀಟಿ, ಬಗರ್‌ಹುಕುಂ, ಖಾತೆಗಳಿಗೆ ಸಂಬಂಧಿಸಿದಂತೆ ತಮ್ಮ ಸಮಸ್ಯೆಗಳಿಗಾಗಿ ಎಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಿನ ಸೋಮವಾರದಿಂದ ಪ್ರತಿ ಸೋಮವಾರ ಮಧ್ಯಾಹ್ನ ೨.೩೦ರಿಂದ ಮದ್ಯಾಹ್ನ ೪ ಗಂಟೆಯವರೆಗೆ ತಾಲ್ಲೂಕು ಆಡಳಿತ ಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಅವಕಾಶವಿದ್ದು ಇದನ್ನು ಸಾರ್ವಜನಿಕರು ಉಪ ಯೋಗಿಸಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ


ಚಿಕ್ಕನಾಯಕನಹಳ್ಳಿ: ಬಗರ್‌ಹುಕುಂ ಸಾಗುವಳಿ ಚೀಟಿಗೆ ಸಂಬAಧಿಸಿದAತೆ ಹಾಗೂ ಕಂದಾಯ ಇಲಾಖೆಯ ಯಾವುದೇ ಸಮಸ್ಯೆಗಳಿದ್ದರು ಅವುಗಳನ್ನು ಪರಿಹರಿಸಲು ಪ್ರತಿ ಸೋಮವಾರ ಮಧ್ಯಾ ೨.೩೦ರಿಂದ ಮಧ್ಯಾಹ್ನ ೪ಗಂಟೆಯವರೆಗೆ ಅವಕಾಶವಿದ್ದು ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಬಗರ್‌ಹುಕುಂ ಸಭೆಯ ನಂತರ ಮಾತನಾಡಿದ ಅವರು ನಮ್ಮ ತಾಲ್ಲೂಕಿನ ಸಾರ್ವಜನಿಕರಿಗಾಗಿ ಒಂದು ವಿಶೇಷ ಯೋಜನೆಯನ್ನು ರೂಪಿಸಿದ್ದು ಅದರಂತೆ ತಾಲ್ಲೂಕಿನ ಎಲ್ಲಾ ಭಾಗದ ಜನರು ತಮ್ಮ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳಿಗೆ ಹಾಗೂ ಸಾಗುವಳಿ ಚೀಟಿ, ಬಗರ್‌ಹುಕುಂ, ಖಾತೆಗಳಿಗೆ ಸಂಬಂಧಿಸಿದಂತೆ ತಮ್ಮ ಸಮಸ್ಯೆಗಳಿಗಾಗಿ ಎಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಿನ ಸೋಮವಾರದಿಂದ ಪ್ರತಿ ಸೋಮವಾರ ಮಧ್ಯಾಹ್ನ ೨.೩೦ರಿಂದ ಮದ್ಯಾಹ್ನ ೪ ಗಂಟೆಯವರೆಗೆ ತಾಲ್ಲೂಕು ಆಡಳಿತ ಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಅವಕಾಶವಿದ್ದು ಇದನ್ನು ಸಾರ್ವಜನಿಕರು ಉಪ ಯೋಗಿಸಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದ ಅವರು ನಮೂನೆ ೫೦ ಹಾಗೂ ೫೩ರಲ್ಲಿ ಈ ಹಿಂದೆ ಗೋಮಾಳದಲ್ಲಿ ಮಂಜೂರಾದ ಜಮೀನುಗಳಿಗೆ ಮಾತ್ರ ಖಾತೆ ಮಾಡಲು ಅವಕಾಶವಿದ್ದು ನಂತರ ನಮೂನೆ ೫೭ರಲ್ಲಿ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಲು ಸರ್ಕಾರ ಅವಕಾಶ ನಿಡಿಲ್ಲ ಹಾಗೂ ಗೋಮಾಳವನ್ನು ಉಳುಮೆ ಮಾಡುತ್ತಿರುವ ರೈತರಿಗೆ ಗೋಮಾಳ ಮಂಜೂರು ಮಾಡುವ ಬಗ್ಗೆಯು ಕೆಲವು ಷರತ್ತುಗಳನ್ನು ಹಾಕಿದೆ ಅದರಂತೆ ಗ್ರಾಮಕ್ಕೆ ಸೇರಿದ ಹೆಚ್ಚುವರಿ ಗೋಮಾಳವಿದ್ದರೆ ಅಂತಹವುಗಳನ್ನು ಪರೀಶಿಲನೆ ಮಾಡಲು ತಿಳಿಸಿದ್ದಾರೆ ಅದೇ ರೀತಿ ನಮ್ಮ ಬಗರ್‌ಹುಕುಂ ಸಮಿತಿಯೊಂದಿಗೆ ಚರ್ಚೆನಡೆಸಿ ನೈಜ ಪಲಾನುಭವಿಗಳನ್ನು ಗುರುತಿಸಿ ಅರ್ಹರಿಗೆ ಭೂಮಿಯನ್ನು ಮಂಜೂರು ಮಾಡಲಾಗುವುದು ಎಂದರು.
ತಹಸೀಲ್ದಾರ್ ಪುರಂದರ ಕೆ ಮಾತನಾಡಿ ತಾಲ್ಲೂಕಿನಲ್ಲಿ ಈಗಾಗಲೇ ನಮೂನೆ ೫೦. ೫೩ ಹಾಗೂ ೫೭ರಲ್ಲಿ ಇದುವರೆಗೆ ಒಟು ೨೭ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು ಇದರಲ್ಲಿ ವಿವಿಧ ಕಾರಣ ಗಳಿಂದಾಗಿ ಸುಮಾರು ೮ಸಾವಿರ ಅರ್ಜಿಗಳನ್ನು ವಜಾ ಮಾಡಲಾಗಿದ್ದು ಅದರಂತೆ ಇನ್ನು ಉಳಿದ ಅರ್ಜಿಗಳ ಬಗ್ಗೆ ಪರಿಶಿಲನೆ ಮಾಡಲಾಗುತ್ತಿದೆ ಹಂತ ಹಂತವಾಗಿ ಅವುಗಳ ವಿಲೇವಾರಿಯಾಗುತ್ತದೆ ಎಂದ ಅವರು ಈಗ ಸರ್ಕಾರ ಶೇಂದಿವನದ ಬಗ್ಗೆ ಮಾಹಿತಿಯನ್ನು ಕೇಳಿದ್ದು ಬಹುಶಃ ಮುಂದಿನ ದಿನಗಳಲ್ಲಿ ಶೇಂದಿವನ ಮಂಜೂರಾತಿಗೂ ಅವಕಾಶ ಸಿಗಬಹುದು ಸರ್ಕಾರದ ಅದೇಶದಂತೆ ಕಾನೂನುರೀತಿಯಲ್ಲಿ ಕ್ರಮ ಕೈಗೊಳ್ಳುತ್ತವೆ ಎಂದರು.
ಈ ಸಂದರ್ಭದಲ್ಲಿ ಆರ್.ಆರ್. ಶಿರಸ್ಥೇದಾರ್ ವನಜಾಕ್ಷಮ್ಮ, ಬಗರ್‌ಹುಕುಂ ಕಮಿಟಿಯ ಸದಸ್ಯರುಗಳಾದ ಬೇವಿನಹಳ್ಳಿ ಚನ್ನಬಸವಯ್ಯ, ವನಜಾಕ್ಷಮ್ಮದೇವರಾಜು, ಮಂಜುನಾಥ್ ಸೇರಿದಂತೆ ಎಲ್ಲಾ ಹೋಬಳಿಗಳ ಕಂದಾಯ ನಿರೀಕ್ಷಕರು, ಗ್ರಾಮಾಡಾಳಿತಾಧಿಕಾರಿಗಳು ಹಾಜರಿದ್ದರು.