ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಅಂಗನವಾಡಿ ಕೇಂದ್ರಗಳಿಗೆ ಅಲಮಾರು ವಿತರಿಸಿದ ಎಂ.ಎಚ್.ಪಟ್ಟಣ ಗ್ರಾಪಂ

ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಒಟ್ಟು 17 ಅಂಗನವಾಡಿ ಕೇಂದ್ರಗಳ ಪೈಕಿ ಬಿಳಿಕಲ್ಲಪಾಳ್ಯ, ಚೌಕೇನಹಳ್ಳಿ, ಬೈಜೇನಹಳ್ಳಿ, ರಂಗನಾಥಪುರ, ಚಿಕ್ಕನೆಟ್ಟಗುಂಟೆ, ರಾಯವಾರ ಇಂದಿರಾನಗರ ಈ ಆರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಅಲಮಾರು(ಬೀರು) ವಿತರಿಸಲಾಯಿತು.

ಅಂಗನವಾಡಿ ಕೇಂದ್ರಗಳಿಗೆ ಅಲಮಾರು ವಿತರಿಸಿದ ಎಂ.ಎಚ್.ಪಟ್ಟಣ ಗ್ರಾಪಂ

-

Profile
Ashok Nayak Jul 21, 2026 11:52 PM

ಗುಬ್ಬಿ: ಅಂಗನವಾಡಿ ಕೇಂದ್ರದಲ್ಲಿ ದಾಖಲೆಗಳು, ಕಡತಗಳು, ಇನ್ನಿತರೆ ಪದಾರ್ಥಗಳನ್ನು ಸಂರಕ್ಷಿಸಲು ಅಗತ್ಯ ಅಲಮಾರುಗಳನ್ನು ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಆಡಳಿತ ವ್ಯಾಪ್ತಿಯ ಆರು ಗ್ರಾಮಗಳಿಗೆ ವಿತರಿಸಲಾಯಿತು.

ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 17 ಅಂಗನವಾಡಿ ಕೇಂದ್ರಗಳ ಪೈಕಿ ಬಿಳಿಕಲ್ಲಪಾಳ್ಯ, ಚೌಕೇನಹಳ್ಳಿ, ಬೈಜೇನಹಳ್ಳಿ, ರಂಗನಾಥಪುರ, ಚಿಕ್ಕನೆಟ್ಟಗುಂಟೆ, ರಾಯವಾರ ಇಂದಿರಾನಗರ ಈ ಆರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಅಲಮಾರು(ಬೀರು) ವಿತರಿಸಲಾಯಿತು.

ಇದನ್ನೂ ಓದಿ: Gubbi News: ವರುಣನ ಕೃಪೆಗೆ ಕತ್ತೆಗಳ ಮದುವೆ..!!

ಪಿಡಿಓ ಕೆ.ಎಂ.ಶೇಖರ್ ಮಾತನಾಡಿ ಪಂಚಾಯ್ತಿಯ ನಿಧಿ 1 ರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಈ ಅಲಮಾರು ಅವಶ್ಯವಿದೆ ಎಂಬ ಅಂಶ ಮನಗಂಡು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಂಗನವಾಡಿಗಳಿಗೆ ಬೀರು ವಿತರಣೆ ಮಾಡಲಾಯಿತು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಬಾಲಮೃತ, ಮೊಟ್ಟೆ, ಶಾಲಾ ಪೂರ್ವ ಶಿಕ್ಷಣದ ಸಾಮಗ್ರಿಗಳು ಮತ್ತು ಅಧಿಕೃತ ದಾಖಲೆಗಳನ್ನು ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿಡಲು ಪಂಚಾಯಿತಿ ನಿಧಿ ಮೂಲಕ ಇವುಗಳನ್ನು ಒದಗಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಎಸಿಡಿಪಿಒ ಮಂಜುಳಾ ಅಭಿಬಾ, ಮೇಲ್ವಿಚಾರಕಿ ಪುಷ್ಪಲತಾ, ಎಸ್ ಡಿಎಎ ಗೀತಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿಗಳು ಇದ್ದರು.