ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA C B Suresh Babu: ಜನರ ಅಧಿಕಾರ ಜನರ ಕೈಗೆ: ಶಾಸಕ ಸಿ.ಬಿ. ಸುರೇಶ್ ಬಾಬು

​"ನಾವಾಗಲಿ ಅಥವಾ ಇಲಾಖೆಯ ಅಧಿಕಾರಿಗಳಾಗಲಿ, ನಮ್ಮ ಕರ್ತವ್ಯವನ್ನು ಸೇವೆಯ ಮನೋಭಾವ ದಿಂದ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಕಳೆದ 79 ವಾರಗಳಿಂದ ತಿ.ನಂ.ಶ್ರೀ ಭವನದಲ್ಲಿ ವಾರಕ್ಕೊಮ್ಮೆ ಜನಸ್ಪಂದನ ಸಭೆ ನಡೆಸುತ್ತಿದ್ದೇವೆ. ಇದರಿಂದಾಗಿ ಮಾಸಿಕ ವೇತನಗಳ ಅರ್ಜಿಗಳ ಸಂಖ್ಯೆ ತಾಲೂಕಿನಲ್ಲಿ ಕಡಿಮೆಯಾಗಿದೆ. ಇದಲ್ಲದೆ, ಬುಕ್ಕಾಪಟ್ಟಣ ಹೋಬಳಿಯ ಜನರಿಗಾಗಿ ಶಿರಾದಲ್ಲಿ ಸಭೆಗಳನ್ನು ಆಯೋಜಿಸಿದ್ದೇವೆ.

ಜನರ ಅಧಿಕಾರ ಜನರ ಕೈಗೆ: ಶಾಸಕ ಸಿ.ಬಿ. ಸುರೇಶ್ ಬಾಬು

-

Ashok Nayak Ashok Nayak Sep 12, 2025 8:11 PM

​ಚಿಕ್ಕನಾಯಕನಹಳ್ಳಿ: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅಧಿಕಾರಿಗಳ ಮತ್ತು ಶಾಸಕರ ಹಿಂದೆ ಅಲೆದಾಡುವ ಜನರ ಕಷ್ಟವನ್ನು ತಪ್ಪಿಸಲು, 'ಮನೆ ಬಾಗಿಲಿಗೆ ಮನೆ ಮಗ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕನಾಯಕನಹಳ್ಳಿಯ ಶಾಸಕ ಸಿ.ಬಿ. ಸುರೇಶ್ ಬಾಬು(Chikkanayakanahalli MLA C B SureshBabu) ತಿಳಿಸಿದರು.

ಈ ಕಾರ್ಯಕ್ರಮದ ಮೂಲಕ ಜನರ ಅಧಿಕಾರವನ್ನು ಅವರಿಗೇ ಮರಳಿ ತಲುಪಿಸಿ, ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: Tumkur News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ

​ತಾಲೂಕಿನ ಹಂದನಕೆರೆ ಹೋಬಳಿಯ ಬೆಳಗುಲಿ ಗ್ರಾಮ ಪಂಚಾಯಿತಿಯಲ್ಲಿ ನಡೆದ 15ನೇ ವಾರದ 'ಮನೆ ಬಾಗಿಲಿಗೆ ಮನೆ ಮಗ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಲು ಆಯಾ ಇಲಾಖೆ ಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕರು ಕರೆ ನೀಡಿದರು.

​"ನಾವಾಗಲಿ ಅಥವಾ ಇಲಾಖೆಯ ಅಧಿಕಾರಿಗಳಾಗಲಿ, ನಮ್ಮ ಕರ್ತವ್ಯವನ್ನು ಸೇವೆಯ ಮನೋ ಭಾವದಿಂದ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಕಳೆದ 79 ವಾರಗಳಿಂದ ತಿ.ನಂ.ಶ್ರೀ ಭವನದಲ್ಲಿ ವಾರಕ್ಕೊಮ್ಮೆ ಜನಸ್ಪಂದನ ಸಭೆ ನಡೆಸುತ್ತಿದ್ದೇವೆ. ಇದರಿಂದಾಗಿ ಮಾಸಿಕ ವೇತನಗಳ ಅರ್ಜಿಗಳ ಸಂಖ್ಯೆ ತಾಲೂಕಿನಲ್ಲಿ ಕಡಿಮೆಯಾಗಿದೆ. ಇದಲ್ಲದೆ, ಬುಕ್ಕಾಪಟ್ಟಣ ಹೋಬಳಿಯ ಜನರಿಗಾಗಿ ಶಿರಾದಲ್ಲಿ ಸಭೆಗಳನ್ನು ಆಯೋಜಿಸಿದ್ದೇವೆ. ಇವೆಲ್ಲವೂ ಜನರ ಅನುಕೂಲಕ್ಕಾಗಿಯೇ" ಎಂದು ಅವರು ಹೇಳಿದರು.

​ಬಗರ್ ಹುಕುಂ ಸಾಗುವಳಿದಾರರಿಗೆ ಸ್ಥಳದಲ್ಲೇ ಹಕ್ಕುಪತ್ರ ವಿತರಣೆ

​ಕ್ಷೇತ್ರದ ಎಲ್ಲಾ 34 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಶುಕ್ರವಾರ ಈ ಕಾರ್ಯಕ್ರಮ ನಡೆಸುವ ಜೊತೆಗೆ, ಬಗರ್ ಹುಕುಂ ಸಾಗುವಳಿದಾರರ ಜಮೀನುಗಳಿಗೆ ನೇರವಾಗಿ ಭೇಟಿ ನೀಡಿ ಸ್ಥಳದಲ್ಲೇ ಪಾರದರ್ಶಕವಾಗಿ ಹಕ್ಕುಪತ್ರಗಳನ್ನು ಮಂಜೂರು ಮಾಡುವ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಜನರು ಇಂತಹ ಕಾರ್ಯಕ್ರಮಗಳ ಸದುಪ ಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

​ಅಧಿಕಾರಿಗಳು ಜನರ ಸಂಪರ್ಕ ಕೊಂಡಿ

​ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಪುರಂದರ ಕೆ. ಅವರು, ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಕಚೇರಿಗಳಿಗೆ ಅಲೆದಾಡುವುದು ತಪ್ಪಿಸಲು ಈ ಕಾರ್ಯಕ್ರಮ ಸಹಕಾರಿ ಎಂದರು. "ಎಲ್ಲಾ ಅಧಿಕಾರಿಗಳು ಇಂದು ನಿಮ್ಮ ಗ್ರಾಮಕ್ಕೇ ಬಂದಿದ್ದಾರೆ. ಈ ಕಾರ್ಯ ಕ್ರಮವು ಅಧಿಕಾರಿಗಳು ಮತ್ತು ಜನರ ನಡುವಿನ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸಲಿದೆ. ಭ್ರಷ್ಟಾಚಾರದಿಂದ ಮುಕ್ತವಾಗಿ, ಜನರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಇದು ಸಹಾಯಕ ವಾಗಿದೆ" ಎಂದು ಅವರು ಹೇಳಿದರು.

​ಬೆಳಗುಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಎಸ್. ಅವರು ಮಾತನಾಡಿ, "ಜಲ್ ಜೀವನ್ ಯೋಜನೆ"ಯನ್ನು ಹೊಸ ಮನೆಗಳಿಗೂ ವಿಸ್ತರಿಸಬೇಕು ಮತ್ತು ಪ್ರತಿ ಗ್ರಾಮಕ್ಕೂ ಸಿಸಿ ರಸ್ತೆ ನಿರ್ಮಿಸ ಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಸ್ವೀಕೃತಗೊಂಡ ಅರ್ಜಿಗಳನ್ನು ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

​ಸಾರ್ವಜನಿಕರ ಅಹವಾಲು ಸ್ವೀಕಾರ

​ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಾಂತ ಕುಮಾರ್ ಅವರು, ಶಾಸಕರು ತಮ್ಮ ತಂದೆಯವರಂತೆಯೇ ಜನಪರವಾಗಿದ್ದಾರೆ ಎಂದು ಪ್ರಶಂಸಿಸಿದರು. ಕಂದಾಯ ಇಲಾಖೆಯ ತಿದ್ದುಪಡಿ, ಪವತಿ ಖಾತೆ ಮತ್ತು ಸರ್ವೇ ಕಾರ್ಯಗಳು ತ್ವರಿತವಾಗಿ ನಡೆಯಬೇಕು ಎಂದು ಅವರು ಕೋರಿದರು.

​ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಪವತಿ ಖಾತೆ, ಗೋಮಾಳ ಮಂಜೂರಾತಿ, ಪಡಿತರ ಚೀಟಿ, ನಿವೇಶನ ಮತ್ತು ಮನೆಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಯಿತು. ಬೆಳಗುಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರೀಕಟ್ಟೆ, ಗೂಬೆಹಳ್ಳಿ, ನಿರುವಗಲ್, ಪಾಪನಾಕೋಣ ಮತ್ತು ಬೆಳಗುಲಿ ಗ್ರಾಮಗಳಲ್ಲಿ ಸಭೆ ನಡೆಸಿ ಅರ್ಜಿಗಳನ್ನು ಪಡೆಯಲಾಯಿತು.

​ಈ ಸಂದರ್ಭದಲ್ಲಿ ಇಒ ದೊಡ್ಡಸಿದ್ಧಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್, ಪಶು ಇಲಾಖೆಯ ವೈದ್ಯಾಧಿಕಾರಿ ಕಾಂತರಾಜು, ಸಿಡಿಪಿಒ ಹೊನ್ನಪ್ಪ, ಸಮಾಜ ಕಲ್ಯಾಣಾಧಿಕಾರಿ ಶ್ರೀಧರ್, ಗ್ರಾ.ಪಂ. ಸದಸ್ಯರಾದ ಲಕ್ಕಮ್ಮ, ರಾಮಯ್ಯ, ಜಯಲಕ್ಷ್ಮಮ್ಮ, ಅಂಜನಪ್ಪ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.