ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ರಾಜಣ್ಣ ವಜಾ ಏಜೆಂಟರ ಸೂಚನೆ ಕಾರಣ: ಡಾ. ಸಾಸಲು ಸತೀಶ್ ವಾಗ್ದಾಳಿ

ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಹಿಂದ ಸಮುದಾಯವು ಪ್ರಬಲ ಬೆಂಬಲ ನೀಡಿತ್ತು. ಆದರೆ ರಾಜಣ್ಣ ವಜಾ ಕ್ರಮವು ಈ ವರ್ಗದ ಮತದಾರರಲ್ಲಿ ತಪ್ಪು ಸಂದೇಶ ರವಾನಿಸಿದೆ. ವಜಾ ಕ್ರಮದಿಂದಾಗಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪ್ರಾತಿನಿಧ್ಯವನ್ನು ಪ್ರಶ್ನಿಸುವಂತಾಗಿದೆ

ಚಿಕ್ಕನಾಯಕನಹಳ್ಳಿ : ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿAದ ವಜಾಗೊಳಿಸಿದ ನಿರ್ಧಾರದ ವಿರುದ್ದ ಕಾಂಗ್ರೆಸ್ ಮುಖಂಡ ಡಾ.ಸಾಸಲು ಸತೀಷ್ ಅವರು ತೀವ್ರ ವಾಗ್ದಾಳಿ ನಡೆಸಿದರು. ಈ ನಿರ್ಧಾರದ ಹಿಂದೆ ಹೈಕಮಾಂಡ್ ಆಪ್ತ ಸಲಹೆಗಾರರ ಅಥವಾ ಏಜೆಂಟರ ಸೂಚನೆ ಕೆಲಸ ಮಾಡಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.

ಸಾಸಲು ಗ್ರಾಮದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಮುಖ ಅಹಿಂದ ನಾಯಕರನ್ನು ಪೂಜಾರಿಗಳ ( ಪ್ರಮುಖ ಸಲಹೆಗಾರರ ) ಮಾತಿನ ಮೇರೆಗೆ ವಜಾ ಮಾಡುವ ಕಠಿಣ ನಿರ್ಧಾರವನ್ನು ಎಐಸಿಸಿ ವರಿಷ್ಠರು ತೆಗೆದುಕೊಂಡಿದ್ದಾರೆ ಎಂದು ಪಕ್ಷದ ತೀರ್ಮಾನ ವನ್ನು ಅಪಹಾಸ್ಯ ಮಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಹಿಂದ ಸಮುದಾಯವು ಪ್ರಬಲ ಬೆಂಬಲ ನೀಡಿತ್ತು. ಆದರೆ ರಾಜಣ್ಣ ವಜಾ ಕ್ರಮವು ಈ ವರ್ಗದ ಮತದಾರರಲ್ಲಿ ತಪ್ಪು ಸಂದೇಶ ರವಾನಿಸಿದೆ. ವಜಾ ಕ್ರಮದಿಂದಾಗಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪ್ರಾತಿನಿಧ್ಯ ವನ್ನು ಪ್ರಶ್ನಿಸುವಂತಾಗಿದೆ ಎಂದು ವಾದಿಸಿದರು. ಮತದಾರರ ಪಟ್ಟಿ ಅಕ್ರಮದ ಕುರಿತು ರಾಜಣ್ಣ ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳು ವಾಸ್ತವವಾಗಿ ವಿರೋಧ ಪಕ್ಷದ ವಿರುದ್ದ ಹೋರಾಡಲು ಪಕ್ಷಕ್ಕೆ ಅನುಕೂಲಕರವಾಗಿದೆ. ಈ ಹೇಳಿಕೆಗಳು ಹೈಕಮಾಂಡ್ ಏಜೆಂಟರ ವಲಯಕ್ಕೆ ಮುಜುಗರ ತಂದಿತ್ತೇ ಹೊರತು ಪಕ್ಷದ ಜನ ಬೆಂಬಲಕ್ಕೆ ಧಕ್ಕೆಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Chikkanayakanahalli News: ತಹಸೀಲ್ದಾರ್ ಕಚೇರಿಗೆ ಕಳಂಕ ! ನೂರಾರು ನಕಲಿ ಸಾಗುವಳಿ ಚೀಟಿ ವಿತರಣೆ ಜನರಲ್ಲಿ ಆತಂಕ

ಶಿಸ್ತು ಕ್ರಮ ಮೃದುಗೊಳಿಸಿ ಸಚಿವ ಸ್ಥಾನ ಮರಳಿ ನೀಡಿ

ರಾಜಣ್ಣ ಅವರು ಧೀರ್ಘಕಾಲದ ರಾಜಕೀಯ ಅನುಭವ ಹೊಂದಿದ್ದು, ಅವರ ವಜಾದಿಂದ ಸಹಕಾರ ಕ್ಷೇತ್ರಗಳಿಗೆ ಮತ್ತು ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ರಾಜಕೀಯದಲ್ಲಿ ಇಂತಹ ಹೇಳಿಕೆಗಳು ಸಹಜ ಕೇವಲ ಏಜೆಂಟರ ಅಂತರಿಕ ಒತ್ತಡಕ್ಕೆ ಮಣಿದು ಹಿರಿಯ ನಾಯಕರನ್ನು ವಜಾ ಮಾಡಿರುವುದು ಸರಿಯಲ್ಲ. ಅವರಿಗೆ ಶಿಸ್ತು ಕ್ರಮವನ್ನು ಸಡಿಲಿಸಿ ಮತ್ತೆ ಸ್ಥಾನ ನೀಡಬೇಕು ಎಂದು ಡಾ. ಸಾಸಲು ಸತೀಷ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಶೋಕ್ ಮಾತನಾಡಿ ರಾಜಣ್ಣ ಅವರು ಸಹಕಾರ ಸಚಿವರಾಗಿದ್ದ ಅವಧಿಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರಲು ಪ್ರಯತ್ನಿಸಿದರು. ಮೀಸಲಾತಿ ತರಲು ಶ್ರಮಿಸಿದ ಪ್ರಮುಖ ನಾಯಕರ ವಜಾ ಅಹಿಂದಾ ವರ್ಗದ ವಿಶ್ವಾಸ ವನ್ನು ಕುಗ್ಗಿಸಿದೆ ಇದು ಸಹಕಾರ ಕ್ಷೇತ್ರಕ್ಕೆ ಹಿನ್ನಡೆ ಎಂದು ತಿಳಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ರಘುನಾಥ್ ಮಾತನಾಡಿದರು. ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ್, ಮುಖಂಡ ಪರಮೇಶ್, ಭೀಮಬಂಧು ಪ್ರವೀಣ್, ಅಜ್ಜೇನಹಳ್ಳಿ ರಮೇಶ್ ಹಾಗು ಇತರರಿದ್ದರು.