ಗುಬ್ಬಿ: ತಾಲೂಕಿನ ಕಡಬ ಹೋಬಳಿ ತೊಗರಿ ಘಟ್ಟ ಗ್ರಾಮದಲ್ಲಿ ಹಲವು ದಿನಗಳಿಂದ ಜಮೀನಿಗೆ ಹೋಗಲು ದಾರಿಗೆ ಅಡ್ಡಿಪಡಿಸಿದ ದೇವಸ್ಥಾನ ಕಮಿಟಿಯವರಿಂದ ತಹಶೀಲ್ದಾರ್ ಬಿ ಆರತಿರವರು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರು ಜಮೀನಿಗೆ ಓಡಾಡಲು ಜಾಗ ಬಿಡಿಸಿಕೊಟ್ಟರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ದಲಿತ ಸಮುದಾಯ ದವರಾದ ಮಂಜುಳಾ, ನರಸಿಂಹಯ್ಯ, ವೆಂಕಟೇಶ್ ಎಂಬುವವರ ಜಮೀನಿಗೆ ದಾರಿ ಬಿಡಲು ತೊಗರಿ ಘಟ್ಟ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು ಅಡ್ಡಿಪಡಿಸುತ್ತಿದ್ದರು. ಇಂದು ತಹಶೀಲ್ದಾರ್ ರವರ ಸಮ್ಮುಖದಲ್ಲಿ ಗ್ರಾಮಸ್ಥರನ್ನು ಮನವೊಲಿಸಿ ನ್ಯಾಯ ದೊರಕಿಸಿ ಕೊಡಲಾಗಿದೆ ಎಂದರು.
ಇದನ್ನೂ ಓದಿ: Gubbi News: ಅಂಗನವಾಡಿ ಕೇಂದ್ರಗಳಿಗೆ ಅಲಮಾರು ವಿತರಿಸಿದ ಎಂ.ಎಚ್.ಪಟ್ಟಣ ಗ್ರಾಪಂ
ಅದಲಗೆರೆ ಈಶ್ವರಯ್ಯ ಮಾತನಾಡಿ, ಜಮೀನನ್ನೇ ಅವಲಂಬಿತವಾಗಿ ಜೀವನ ನಡೆಸುತ್ತಿರುವ ರೈತರಿಗೆ ದಾರಿಗೆ ಅಡ್ಡಿ ಪಡಿಸುವುದು ಖಂಡನೀಯ. ಊರಿನ ಸೌಹಾರ್ದತೆಯನ್ನು ಕಾಪಾಡುವ ಮೂಲಕ ಶಾಂತಿಯುತವಾಗಿ ಜಮೀನಿಗೆ ದಾರಿ ಬಿಡಿಸಿಕೊಟ್ಟ ಮಾನ್ಯ ದಂಡಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ದಸಂಸ ಪದಾಧಿಕಾರಿಗಳಾದ ಕಲ್ಲೂರು ರವಿಕುಮಾರ್, ಕುಂದರನಹಳ್ಳಿ ನಟರಾಜು, ಕೋಟೆ ಕಲ್ಲೇಶ್, ಶಿವಸ್ವಾಮಿ, ರಂಗಸ್ವಾಮಿ, ಲಕ್ಷ್ಮಯ್ಯ, ಶ್ರೀಧರ್ ಸೇರಿದಂತೆ ಇತರರು ಹಾಜರಿದ್ದರು.