ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳ ಆಯ್ಕೆ

ಸಾವಿತ್ರಿಬಾಯಿ ಫುಲೆಯವರ ಶೈಕ್ಷಣಿಕ ಮತ್ತು ಸಾಮಾಜಿಕ ಸೌಹಾರ್ದತೆಯ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಈಗ ನಿಮ್ಮ ಹೆಗಲೇರಿದೆ. ಶಿಕ್ಷಣ, ಮಹಿಳಾ ಸಬಲೀಕರಣ, ಸಾಮಾಜಿಕ ಸಮಾನತೆ ಮತ್ತು ಜಾಗೃತಿ ಮೂಡಿಸುವ ನಿಮ್ಮ ಈ ಕಾರ್ಯಕ್ಕೆ ನಮ್ಮೆಲ್ಲರ ಪೂರ್ಣ ಬೆಂಬಲವಿದೆ.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳ ಆಯ್ಕೆ

-

Profile
Ashok Nayak Jul 26, 2026 11:22 PM

ಗುಬ್ಬಿ: ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ಜಿಲ್ಲಾ ಘಟಕ ತುಮಕೂರು ತಾಲ್ಲೂಕು ಘಟಕ ಅಧ್ಯಕ್ಷರನ್ನಾ ಗಿಮಂಜಮ್ಮ ಜಿ ಎಸ್ ರವರನ್ನು ಸಂಸ್ಥಾಪಕ ರಾಷ್ಟ್ರೀಯ ಅದ್ಯಕ್ಷರು ಹಾಗೂ ರಾಜ್ಯದ್ಯಾಕ್ಷರಾದ ಡಾ.ಲತಾ ಎಸ್ ಮುಳ್ಳೂರವರ ಆಯ್ಕೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಸಿ.ಪೂರ್ಣಿಮಾ, ಖಜಾಂಚಿಯಾಗಿ ಕೆ.ಎಸ್.ಲತಾಮಣಿ, ತಾಂತ್ರಿಕ ಮುಖ್ಯಸ್ಥೆಯಾಗಿ ಎಂ.ಜಿ ಸಿಂಧು ಇವರನ್ನು ಆಯ್ಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯಿಂದ ಸಭೆ ಸಮಾರಂಭಗಳಿಗೆ ನಮ್ಮ ಸಂಘದ ಪದಾಧಿಕಾರಿಗಳಿಗೆ ಆಹ್ವಾನ ನೀಡುವಂತೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಎಂ.ಎಸ್.ನಟರಾಜು ಮಾತನಾಡಿ, ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಸಾಮಾ ಜಿಕ ಕ್ರಾಂತಿಯ ಹರಿಕಾರರಾದ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ ದಿವ್ಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ನಿಮ್ಮೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು.

ಇದನ್ನೂ ಓದಿ: Gubbi News: ಪ್ರಸ್ತುತ ದುಡಿದು ಹಂಚಿ ತಿನ್ನುವ ಗುಣ ಬೇಕಿದೆ : ಶ್ರೀ ಚಂದ್ರಶೇಖರ ಸ್ವಾಮೀಜಿ

ಸಾವಿತ್ರಿಬಾಯಿ ಫುಲೆಯವರ ಶೈಕ್ಷಣಿಕ ಮತ್ತು ಸಾಮಾಜಿಕ ಸೌಹಾರ್ದತೆಯ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಈಗ ನಿಮ್ಮ ಹೆಗಲೇರಿದೆ. ಶಿಕ್ಷಣ, ಮಹಿಳಾ ಸಬಲೀಕರಣ, ಸಾಮಾಜಿಕ ಸಮಾನತೆ ಮತ್ತು ಜಾಗೃತಿ ಮೂಡಿಸುವ ನಿಮ್ಮ ಈ ಕಾರ್ಯಕ್ಕೆ ನಮ್ಮೆಲ್ಲರ ಪೂರ್ಣ ಬೆಂಬಲವಿದೆ.

ನಿಮ್ಮ ನಾಯಕತ್ವದಲ್ಲಿ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಸಮಾಜಕ್ಕೆ ಮಾದರಿಯಾಗು ವಂತಹ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳು ನಿಮ್ಮಿಂದ ನೆರವೇರಲಿ ಎಂದು ಆಶಿಸುತ್ತೇನೆ ಎಂದರು.

ಈ ಪದಾಧಿಕಾರಿಗಳಾದ ವೀಣಾ ,ಶಾರದಮ್ಮ, ಸರೋಜ ,ರೇಣುಕಮ್ಮ, ಸರೋಜಮ್ಮ, ಕೋಮಲ ಮತ್ತು ಶಿಡ್ಲಪ್ಪನವರು ಹಾಜರಿದ್ದರು.