ತುಮಕೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾ ಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ "ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಸಮಾವೇಶ, ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ" ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.
ರಾಜಕೀಯ ಅಸ್ತಿತ್ವಕ್ಕೆ ಹೊಂದಾಣಿಕೆ ಅಗತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್(MLA GB Jyotiganesh), ಮಠ ಮಾನ್ಯಗಳ ನೆರವಿನಿಂದ ಸಮಾಜವು ಶೈಕ್ಷಣಿಕವಾಗಿ ಮುಂದುವರೆದಿದ್ದರೂ, ಕಡಿಮೆ ಸಂಖ್ಯೆಯಲ್ಲಿರುವ ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಅಧಿಕಾರ ಸಿಗಲು ಒಬಿಸಿ, ಎಸ್ಸಿ ಹಾಗೂ ಎಸ್ಟಿ ಸಮುದಾಯಗಳ ಜೊತೆಗೆ ಹೊಂದಿಕೊಂಡು ಹೋಗುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಮಠ ಮಾನ್ಯಗಳ ಕೊಡುಗೆ: ಕರ್ನಾಟಕದ ಅಭಿವೃದ್ಧಿಗೆ ಮತ್ತು ಎಲ್ಲಾ ವರ್ಗದ ಮಕ್ಕಳ ಶಿಕ್ಷಣಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜು ಪ್ರಶಂಸಿಸಿದರು. ಅಂಕಗಳ ಜೊತೆಗೆ ಮಕ್ಕಳು ಮೌಲ್ಯ ಯುತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: Tumkur News: ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿ ಶೀಘ್ರದಲ್ಲೇ ಫುಡ್ ಸ್ಟ್ರೀಟ್ ಆರಂಭ
ಐಕ್ಯತೆಯ ಸಂದೇಶ: ಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪ ಮಾತನಾಡಿ, ಸಮಾಜವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮೇಲೆ ತರಲು ವೀರಶೈವ-ಲಿಂಗಾಯಿತ ಎಂಬ ಭಿನ್ನಮತ ಬದಿಗಿಟ್ಟು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.
ಸಾನಿಧ್ಯ ಹಾಗೂ ಅಧ್ಯಕ್ಷತೆ: ಬೆಳ್ಳಾವೆಯ ಶ್ರೀಕಾರದೇಶ್ವರ ಮಠದ ಶ್ರೀ ವೀರಕಾರದ ಬಸವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಎಂ.ಬಿ. ಷಡಕ್ಷರಿ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾ ಪುರಸ್ಕಾರ: ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಹಾಗೂ ಅರ್ಹ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪುರಸ್ಕಾರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತುಮ ಕೂರು ಜಿಲ್ಲಾ ಉಪಾಧ್ಯಕ್ಷ ಶಶಿ ಹುಲಿಕುಂಟೆ ಮಠ್, ಬೆಸ್ಕಾಂ ಇಇ ಅಮೀನ್, ವಿಜ್ಞಾನಿ ಈರಣ್ಣ ಅವರುಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಅಖಿಲ ಭಾರತ ವೀರಶೈವಲಿಂಗಾಯಿತ ಮಹಾಸಭಾ ತುಮಕೂರು ಜಿಲ್ಲಾ ಮಹಿಳಾ ಧ್ಯಕ್ಷೆ ಮಮತ ದಿವಾಕರ್, ಸಾಗರಹಳ್ಳಿ ನಟರಾಜು, ಡಾ.ಪ್ರಭಾ, ಬೆಸ್ಕಾಂ ಇಇ ಚೇತನ್, ಉದ್ಯಮಿ ಗಳಾದ ಡಾ.ದರ್ಶನ್ ಕೆ.ಎಲ್, ಹೆಚ್.ಕೆ.ರುದ್ರೇಶ್, ಕೊಪ್ಪಲ್ ನಾಗರಾಜು, ವಿವಿಧ ಸಂಘಗಳಿಗೆ ಆಯ್ಕೆ ಯಾಗಿರುವ ಉಮೇಶ್, ಸಿದ್ದಲಿಂಗಸ್ವಾಮಿ.ಎಸ್.ಪಿ, ಪಿ.ಜಿ.ತಿಮ್ಮೇಗೌಡ, ಹೆಚ್.ಎಂ.ರುದ್ರೇಶ್, ಜಿ.ವಿ.ಮೋಹನ್ ಕುಮಾರ್, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಹೆಚ್.ಜಯ ಶಂಕರ್, ಉಮೇಶ್, ಮಂಜುನಾಥ್ ಬಿ.ಎಸ್,ರೇಣುಕಾರಾಧ್ಯ, ಶುಭಮಣಿ ಸೇರಿದಂತೆ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.