ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi news: ತ್ರಿವಿಧ ದಾಸೋಹ ತತ್ವ ಶರಣರ ಆಸ್ತಿ : ಎಂ.ಜಿ.ಸಿದ್ದರಾಮಯ್ಯ

12ನೇ ಶತಮಾನದ ಶರಣರ ಹಾಗೂ ವಚನಕಾರರ ತತ್ತ್ವಾದರ್ಶಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಯುವ ಸಮುದಾಯಕ್ಕೆ ಪರಿಚಯಿಸುವ ಅಗತ್ಯವಿದೆ. ಶರಣರ ಮಾನವೀಯ ಮೌಲ್ಯಗಳನ್ನು ಸಮಾಜ ದಲ್ಲಿ ಪಸರಿಸಿ ವಿಶ್ವ ಶಾಂತಿ ಕಾಪಾಡಲು ಶರಣ ಸಾಹಿತ್ಯ ಪರಿಷತ್ತು ಕಾರ್ಯ ಚಟುವಟಿಕೆಗಳು, ಕಾರ್ಯಗಾರ, ಚಿಂತನಾ ಶಿಬಿರಗಳು, ಸಂವಾದ, ದತ್ತಿ ಉಪನ್ಯಾಸ ಹೀಗೆ ಅನೇಕ ಕಾರ್ಯಕ್ರಮ ನಿರಂತರ ನಡೆಸಿದ್ದೇವೆ

ಗುಬ್ಬಿ: ಬಸವಣ್ಣನವರ ತತ್ವಾನುಸಾರ ಶರಣರ ನಡೆ ನುಡಿ ಸಿದ್ಧಾಂತ ಎಂದಿಗೂ ಪ್ರಚಲಿತವಾಗಿದೆ. ಈ ನಿಟ್ಟಿನಲ್ಲೇ ನಡೆದ ಸಿದ್ದಗಂಗಾ ಶ್ರೀಗಳ ತ್ರಿವಿಧ ದಾಸೋಹ ಶರಣ ಆಸ್ತಿ ಎಂದೆನಿಸಿದೆ. ಇದೇ ಮಾರ್ಗದಲ್ಲಿ ನಾವುಗಳು ನಡೆಯೋಣ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ ತಿಳಿಸಿದರು.

ತಾಲ್ಲೂಕಿನ ನಿಟ್ಟೂರು ಶ್ರೀ ವಿನಾಯಕ ಪ್ರೌಢಶಾಲೆ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಮತ್ತು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಶ್ರೀ ವಿನಾಯಕ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆದ ಸಂಸ್ಥಾಪಕ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಧರ್ಮ ಎನಿಸಿದ ವೀರಶೈವ ಲಿಂಗಾಯತ ಧರ್ಮ ಎಲ್ಲಾ ಸಮಾಜ ಒಪ್ಪುವ ರೀತಿ ನಡೆದಿದೆ ಎಂದರು.

ಇದನ್ನೂ ಓದಿ: Gubbi News: ಶ್ರೀ ಗ್ರಾಮದೇವತೆ ಅದ್ದೂರಿ ಜಾತ್ರೆಗೆ ಗುಬ್ಬಿ ಪಟ್ಟಣ ಸಜ್ಜು

12ನೇ ಶತಮಾನದ ಶರಣರ ಹಾಗೂ ವಚನಕಾರರ ತತ್ತ್ವಾದರ್ಶಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಯುವ ಸಮುದಾಯಕ್ಕೆ ಪರಿಚಯಿಸುವ ಅಗತ್ಯವಿದೆ. ಶರಣರ ಮಾನವೀಯ ಮೌಲ್ಯ ಗಳನ್ನು ಸಮಾಜದಲ್ಲಿ ಪಸರಿಸಿ ವಿಶ್ವ ಶಾಂತಿ ಕಾಪಾಡಲು ಶರಣ ಸಾಹಿತ್ಯ ಪರಿಷತ್ತು ಕಾರ್ಯ ಚಟುವಟಿಕೆಗಳು, ಕಾರ್ಯಗಾರ, ಚಿಂತನಾ ಶಿಬಿರಗಳು, ಸಂವಾದ, ದತ್ತಿ ಉಪನ್ಯಾಸ ಹೀಗೆ ಅನೇಕ ಕಾರ್ಯಕ್ರಮ ನಿರಂತರ ನಡೆಸಿದ್ದೇವೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಮಾದಾಪುರ ಶಿವಪ್ಪ ಉಪನ್ಯಾಸ ನೀಡಿ, ಮೈಸೂರಿನ ಸುತ್ತೂರು ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರು 1986ರ ಆಗಸ್ಟ್ 29 ರಂದು ತಮ್ಮ 70ನೇ ಜನ್ಮದಿನದಂದು ಈ ಪರಿಷತ್ತನ್ನು ಸ್ಥಾಪಿಸಿ ಸಂಸ್ಥಾಪನಾ ದಿನಾಚರಣೆ ಆಚರಿಸಲು ಆರಂಭಿಸಿದ್ದರು. ಈಗ 111 ನೇ ಜಯಂತಿ ಆಚರಣೆ ಜೊತೆ ದಿನಾಚರಣೆ ಮಾಡುತ್ತಿದ್ದು, ಶರಣರ ಬಾಳು ಬದುಕು ಯುವಕರಿಗೆ ಆದರ್ಶವಾಗಲಿ ಎಂದು ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶರಣರ ಬಗ್ಗೆ ಅರಿವು, ತಿಳಿವು ಪರಿಷತ್ತಿನ ಚಟುವಟಿಕೆ ಮೂಲಕ ತಿಳಿದುಕೊಳ್ಳಲು ಕರೆ ನೀಡಿದರು.

ಪರಿಷತ್ತಿನ ಗೌರವ ಸಲಹೆಗಾರ ಆರ್.ಬಿ.ಜಯಣ್ಣ ಮಾತನಾಡಿ 12 ನೇ ಶತಮಾನದ ವಚನಕಾರರು ತತ್ವ ಪದಗಳು ಎಂದಿಗೂ ಜೀವಂತ ಮಹತ್ವ ತಿಳಿಸುತ್ತದೆ. ಸ್ವಾಸ್ಥ್ಯ ಸಮಾಜ ಸ್ಥಾಪನೆಗೆ ಶರಣ ಸಾಹಿತ್ಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪ್ರಸರಣ ನಿರಂತರ ನಡೆಸಬೇಕಿದೆ. ಈ ಕಾರ್ಯಕ್ಕೆ ಯುವ ಜನಾಂಗ ಮುಂದೆ ಬರಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ದತ್ತಿ ದಾನಿಗಳಾದ ರತ್ನಮ್ಮ ಬಸಪ್ಪ, ದಿವಾಕರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪಾಲನೇತ್ರ, ಪ್ರಧಾನ ಕಾರ್ಯ ದರ್ಶಿ ಸಂಗಪ್ಪ, ಖಜಾಂಚಿ ದೊಡ್ಡೇಗೌಡ, ಮಹಾ ಪೋಷಕರಾದ ವಕೀಲ ಎನ್.ಬಿ.ಕುಮಾರಸ್ವಾಮಿ, ಜಯಪ್ರಕಾಶ್, ಸಲಹೆಗಾರ ಶಾಂತಪ್ಪ, ನಿಟ್ಟೂರು ಹೋಬಳಿ ಅಧ್ಯಕ್ಷ ಶಿವನಂಜಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲತಾ ಮಹದೇವಯ್ಯ, ಮುಖ್ಯ ಶಿಕ್ಷಕ ಉಮೇಶ್, ನಿವೃತ್ತ ಮುಖ್ಯ ಶಿಕ್ಷಕ ಶಿವಕುಮಾರ್ ಇತರರು ಇದ್ದರು.