Gubbi News: ಶ್ರೀ ಗ್ರಾಮದೇವತೆ ಅದ್ದೂರಿ ಜಾತ್ರೆಗೆ ಗುಬ್ಬಿ ಪಟ್ಟಣ ಸಜ್ಜು
ಸೆ.1ರಂದು ಬೆಳಿಗ್ಗೆ 10.30 ಕ್ಕೆ ಸಂತೆ ಮೈದಾನದ ಶಿಲಾ ಗದ್ದುಗೆ ದೇವಾಲಯದಲ್ಲಿ ಗದ್ದುಗೆ ಪೂಜೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಹೂವಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ಊರಿನ ರಾಜಬೀದಿಗಳಲ್ಲಿ ವಿವಿಧ ಕಲಾ ತಂಡದೊಂದಿಗೆ ಮೆರವಣಿಗೆ ಸಾಗಿ ಸಂಜೆ 5 ಗಂಟೆಗೆ ಹಳೇ ಸಂತೆ ಮೈದಾನದ ಗದ್ದುಗೆ ತಲುಪಿ ಮೂರು ದಿನಗಳ ಆರತಿ ಸೇವೆಗೆ ಅಮ್ಮನವರನ್ನು ಪ್ರತಿಷ್ಠಾಪಿಸಲಾಗುವುದು. ನಂತರ ವಿವಿಧ ಜನಾಂಗದವರ ಆರತಿ ಸೇವೆ ನಡೆಯಲಿದೆ.
-
ಗುಬ್ಬಿ: ಪಟ್ಟಣದ ಅಧಿ ದೇವತೆ ಶ್ರೀ ಗ್ರಾಮದೇವತೆ ಅಮ್ಮನವರ ಜಾತ್ರಾ ಮಹೋತ್ಸವ ಇದೇ ತಿಂಗಳ 31 ರಿಂದ ಸೆ.3 ರವರೆಗೆ ಅದ್ದೂರಿಯಾಗಿ ನಡೆಸಲು ಇಡೀ ಗುಬ್ಬಿ ಪಟ್ಟಣ ಅಲಂಕೃತವಾಗಿ ಸಜ್ಜಾಗು ತ್ತಿದೆ ಎಂದು ಹದಿನೆಂಟು ಕೋಮಿನ ದೇವಾಲಯ ಸಮಿತಿ ತಿಳಿಸಿದೆ.
ಆಗಸ್ಟ್ 31 ರ ಸೋಮವಾರ ರಾತ್ರಿ 12 ರವರೆಗೆ ಪಣಗಾರರ ಬೀದಿಯಲ್ಲಿನ ಶ್ರೀ ಗ್ರಾಮದೇವತೆ ಅಮ್ಮ ನವರ ದೇವಾಲಯದಲ್ಲಿ ಪೂಜಾ ವಿಧಿ ಆರಂಭವಾಗಿ ವಿಶ್ವಕರ್ಮ ಮತಸ್ಥರಿಂದ ಅಮ್ಮನವ ರಿಗೆ ನೇತ್ರೋನ್ಮಿಲನ ಹಾಗೂ ಆರತಿ ಸೇವೆ ನಡೆಯಲಿದೆ.
ಇದನ್ನೂ ಓದಿ:Gubbi News: ಸುರಿಗೇನಹಳ್ಳಿ ಗುಡ್ಡದ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಮಹಾದಾಸೋಹ
ಸೆ.1 ರಂದು ಬೆಳಿಗ್ಗೆ 10.30 ಕ್ಕೆ ಸಂತೆ ಮೈದಾನದ ಶಿಲಾ ಗದ್ದುಗೆ ದೇವಾಲಯದಲ್ಲಿ ಗದ್ದುಗೆ ಪೂಜೆ ನಡೆಯಲಿದೆ. ಮಧ್ಯಾಹ್ನ 1.30 ಕ್ಕೆ ಹೂವಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ಊರಿನ ರಾಜಬೀದಿಗಳಲ್ಲಿ ವಿವಿಧ ಕಲಾ ತಂಡದೊಂದಿಗೆ ಮೆರವಣಿಗೆ ಸಾಗಿ ಸಂಜೆ 5 ಗಂಟೆಗೆ ಹಳೇ ಸಂತೆ ಮೈದಾನದ ಗದ್ದುಗೆ ತಲುಪಿ ಮೂರು ದಿನಗಳ ಆರತಿ ಸೇವೆಗೆ ಅಮ್ಮನವರನ್ನು ಪ್ರತಿಷ್ಠಾಪಿಸಲಾಗುವುದು. ನಂತರ ವಿವಿಧ ಜನಾಂಗದವರ ಆರತಿ ಸೇವೆ ನಡೆಯಲಿದೆ.
ಮುಂದುವರೆದು ಸೆ.2ರಂದು ಸಹ ಕೆಲ ಸಮುದಾಯದ ಆರತಿ ಸೇವೆ ನಡೆಯಲಿದೆ. ಸೆ.3ರಂದು ಆರತಿ ಜೊತೆ ಬಾನ ಪೂಜೆ, ಘಟ ಸೇವೆ ನಡೆಯಲಿದೆ. ರಾತ್ರಿ 9 ಗಂಟೆಗೆ ಅಮ್ಮನವರನ್ನು ಉತ್ಸವ ಮೂಲಕ ಮೆರವಣಿಗೆ ಹೊರಟು ಲಕ್ಕೇನಹಳ್ಳಿ ಸಮೀಪದ ಗ್ರಾಮದೇವತೆ ವನದಲ್ಲಿನ ಗದ್ದುಗೆಯಲ್ಲಿ ಮುಂಜಾನೆ ವೇಳೆಗೆ ಅಮ್ಮನವರ ಸ್ಥಾಪಿಸಿ ಬೀಳ್ಕೊಡುವ ಮೂಲಕ ಜಾತ್ರೆ ಅಂತಿಮ ಹಂತಕ್ಕೆ ತಲುಪಲಿದೆ.
ನಂತರ ಸೆ.4 ರ ಸಂಜೆ 7.30 ಕ್ಕೆ ಮರುಪೂಜೆ ಸಲ್ಲಿಸಿ ಜಾತ್ರೆ ಸಂಪನ್ನಗೊಳಿಸಲಾಗುವುದು ಎಂದು ಹದಿನೆಂಟು ಕೋಮಿನ ಜಾತ್ರಾ ಸಮಿತಿ ತಿಳಿಸಿದೆ.