ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ವಿಶೇಷ ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ ಬರಬಾರದು : ಶಾಸಕ ಎಸ್.ಆರ್.ಶ್ರೀನಿವಾಸ್

ಗಣಿಬಾಧಿತ ಪ್ರದೇಶದಲ್ಲಿ ಮಕ್ಕಳ ಶಿಕ್ಷಣಕ್ಕೆ ಕೊರತೆ ಆಗದಂತೆ ಸರ್ಕಾರ ವಿಶೇಷ ಅನುದಾನ ನೀಡಿ ಶಾಲೆ ವಾತಾವರಣ ಸರಿ ಪಡಿಸಿದೆ. ಜೊತೆಗೆ ಬಿಸಿಯೂಟ ಜೊತೆ ಸಂಜೆಯಲ್ಲಿ ಪೌಷ್ಟಿಕ ಆಹಾರ ಕಾಳು ಉಸಲಿ ನೀಡಲು ಯೋಜನೆ ರೂಪಿಸಿರುವುದು ಮೆಚ್ಚುವಂತಹದ್ದು. ಐಟಿಬಿಟಿ ಯುಗದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.

ಗುಬ್ಬಿ: ಗಣಿಬಾದಿತ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ವಿಶೇಷ ಪೌಷ್ಟಿಕ ಆಹಾರವನ್ನು ಬಿಸಿಯೂಟದ ಜೊತೆ ಸಂಜೆ ವೇಳೆ ನೀಡುವ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಅರ್ಹ ಮಕ್ಕಳಿಗೆ ಈ ಆಹಾರ ಸಿಗಬೇಕು. ಯಾವುದೇ ಲೋಪ ಕಾಣದಂತೆ ಎಚ್ಚರಿಕೆ ವಹಿಸಿ ಎಂದು ಶಿಕ್ಷಕರಿಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಿಎಂಶ್ರಿ ಶಾಲೆಯಲ್ಲಿ ಆಯೋಜಿಸಿದ್ದ ಸಿಇಪಿಎಂಐಝಡ್ ಯೋಜನೆಯ ಮೂಲಕ ಮಕ್ಕಳಿಗೆ ವಿಶೇಷ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಸಿಯೂಟವನ್ನು ರುಚಿ ಶುಚಿಯಾಗಿ ನೀಡಬೇಕು. ಇತ್ತೀಚಿಗೆ ದೂರುಗಳು ಬರುತ್ತಿವೆ. ಎಲ್ಲವನ್ನೂ ಸರಿಪಡಿಸಿ ಶಿಕ್ಷಕರು ನಿಮ್ಮ ಮಕ್ಕಳಂತೆ ವಿದ್ಯಾರ್ಥಿಗಳನ್ನು ಬೆಳೆಸಲು ಸಲಹೆ ನೀಡಿದರು.

ಗಣಿಬಾಧಿತ ಪ್ರದೇಶದಲ್ಲಿ ಮಕ್ಕಳ ಶಿಕ್ಷಣಕ್ಕೆ ಕೊರತೆ ಆಗದಂತೆ ಸರ್ಕಾರ ವಿಶೇಷ ಅನುದಾನ ನೀಡಿ ಶಾಲೆ ವಾತಾವರಣ ಸರಿ ಪಡಿಸಿದೆ. ಜೊತೆಗೆ ಬಿಸಿಯೂಟ ಜೊತೆ ಸಂಜೆಯಲ್ಲಿ ಪೌಷ್ಟಿಕ ಆಹಾರ ಕಾಳು ಉಸಲಿ ನೀಡಲು ಯೋಜನೆ ರೂಪಿಸಿರುವುದು ಮೆಚ್ಚುವಂತಹದ್ದು. ಐಟಿಬಿಟಿ ಯುಗದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. 90 ರ ಮೇಲಿನ ಅಂಕ ಗಳಿಸಿದರೂ ಹಾಸ್ಟೆಲ್ ದಾಖಲು ಆಗುತ್ತಿಲ್ಲ. ಈ ಹಿನ್ನಲೆ ಉತ್ತಮ ಪಾಠ ಜೊತೆಗೆ ಆಹಾರ ನೀಡುವ ಸರ್ಕಾರಿ ಸವಲತ್ತು ಬಳಸಿ ಕೊಂಡು ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.

ಇದನ್ನೂ ಓದಿ: Gubbi News: ಹಳ್ಳಿಕಾರ್ ತಳಿ ರಾಸುಗಳ ಪಾಲಕ ಸಿ.ಜಿ.ಕೃಷ್ಣಮೂರ್ತಿ ನಿಧನ

ಡಿಡಿಪಿಐ ರಘುಚಂದ್ರ ಮಾತನಾಡಿ ಗಣಿಬಾದಿತ ನಾಲ್ಕು ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಸೇರಿದೆ. ಒಟ್ಟು 15200 ಮಕ್ಕಳು ಈ ಯೋಜನೆಗೆ ಒಳಪಡುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ವಿಶೇಷ ಯೋಜನೆಯಲ್ಲಿ ಪೌಷ್ಟಿಕಾಂಶ ಇರುವ ಕಾಳುಗಳ ಉಸಲಿ ವಿತರಣೆ ಮಾಡಲಾಗುತ್ತದೆ. ಬಿಸಿಯೂಟ ಜೊತೆಗೆ ಸಂಜೆ ವೇಳೆ ಈ ಆಹಾರ ನೀಡಲಾಗುತ್ತಿದೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ, ಗಣಿಬಾದಿತ 4 ಜಿಲ್ಲೆಯ ಒಟ್ಟು 10 ತಾಲ್ಲೂಕಿನಲ್ಲಿ ಗುಬ್ಬಿ ತಾಲ್ಲೂಕು ಸೇರಿದ್ದು, ಶಾಲಾ ಅವಧಿಯ ನಂತರ ವಿಶೇಷ ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡಲು ಸೂಚಿಸಲಾಗಿದೆ. ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾ ಗಿದೆ. ಪ್ರತಿನಿತ್ಯ ಮಕ್ಕಳಿಗೆ ನೀಡಿ ದೈಹಿಕ ಸದೃಢತೆ ಕಾಪಾಡಬೇಕಿದೆ. ಶಿಕ್ಷಕರು ಈ ಯೋಜನೆ ಯನ್ನು ಉತ್ತಮ ರೀತಿಯಲ್ಲಿ ನಡೆಸಿ ಮಕ್ಕಳ ಆರೋಗ್ಯ ಕಾಪಾಡಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಆರತಿ.ಬಿ, ಡಿಡಿಪಿಐ (ಅಭಿವೃದ್ದಿ) ಮಂಜುನಾಥ್, ತಾಪಂ ಇಓ ರಂಗನಾಥ್, ಬಿಇಓ ನಟರಾಜ್, ಬಿಆರ್ ಸಿ ಮಧುಸೂದನ್, ಎಸ್ ಡಿಎಂಸಿ ಅಧ್ಯಕ್ಷ ಆನಂದ್, ಮುಖ್ಯ ಶಿಕ್ಷಕಿ ಮಂಜುಳಾ, ಶಿಕ್ಷಕರಾದ ನಟರಾಜ್, ಸುಮಿತ್ರಾ, ನಿತ್ಯಶ್ರೀ, ಶೋಭಾ, ಪುರುಷೋತ್ತಮ್, ಈರಮ್ಮ ಇತರರು ಇದ್ದರು.