ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ಹಳ್ಳಿಕಾರ್ ತಳಿ ರಾಸುಗಳ ಪಾಲಕ ಸಿ.ಜಿ.ಕೃಷ್ಣಮೂರ್ತಿ ನಿಧನ

ಸಿ.ಎಸ್.ಪುರ ಗ್ರಾಮದ ವಿಪ್ರ ಸಮಾಜದ ಮುಖಂಡರಾದ ಮೃತರು ಉತ್ತಮ ಕೃಷಿಕರಾಗಿ ಹೈನುಗಾರಿಕೆ ಯಲ್ಲಿ ವಿಶೇಷ ಹೆಗ್ಗಳಿಕೆ ಪಡೆದಿದ್ದರು. ಹಳ್ಳಿಕಾರ್ ತಳಿಯ ರಾಸುಗಳನ್ನು ವಿಶೇಷ ಕಾಳಜಿಯಲ್ಲಿ ಸಾಕು ಸಲಹಿದ್ದರು. ಹೋಬಳಿಯ ಹಲವು ರೈತರಿಗೆ ರಾಸುಗಳ ಆರೈಕೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರು.

ಹಳ್ಳಿಕಾರ್ ತಳಿ ರಾಸುಗಳ ಪಾಲಕ ಸಿ.ಜಿ.ಕೃಷ್ಣಮೂರ್ತಿ ನಿಧನ

-

Ashok Nayak Ashok Nayak Nov 2, 2025 12:38 AM

ಗುಬ್ಬಿ: ವಿಶೇಷ ಹಳ್ಳಿಕಾರ್ ತಳಿಯ ರಾಸುಗಳ ಪಾಲಕರಾಗಿ ಗುರುತಿಸಿಕೊಂಡ ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದ ಸಿ.ಜಿ.ಕೃಷ್ಣಮೂರ್ತಿ (81) ದೈವಾಧೀನರಾಗಿದ್ದಾರೆ.

ಇದನ್ನೂ ಓದಿ: Gubbi News: ನಿರ್ಭೀತಿಯಿಂದ ಒತ್ತುವರಿ ತೆರವು ಮಾಡಿ : ಅಧಿಕಾರಿಗಳಿಗೆ ಧೈರ್ಯ ತುಂಬಿದ ಪಪಂ ಸದಸ್ಯರು

ಸಿ.ಎಸ್.ಪುರ ಗ್ರಾಮದ ವಿಪ್ರ ಸಮಾಜದ ಮುಖಂಡರಾದ ಮೃತರು ಉತ್ತಮ ಕೃಷಿಕರಾಗಿ ಹೈನುಗಾರಿಕೆಯಲ್ಲಿ ವಿಶೇಷ ಹೆಗ್ಗಳಿಕೆ ಪಡೆದಿದ್ದರು. ಹಳ್ಳಿಕಾರ್ ತಳಿಯ ರಾಸುಗಳನ್ನು ವಿಶೇಷ ಕಾಳಜಿಯಲ್ಲಿ ಸಾಕು ಸಲಹಿದ್ದರು. ಹೋಬಳಿಯ ಹಲವು ರೈತರಿಗೆ ರಾಸುಗಳ ಆರೈಕೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರು. 

ಸಿ.ಎಸ್.ಪುರ ಬ್ರಾಹ್ಮಣ ಸಮಾಜ ಹಾಗೂ ಎಂ.ಎಚ್.ಪಟ್ಟಣ ಬ್ರಾಹ್ಮಣ ಸಮಾಜದ ಸದಸ್ಯರಾಗಿ ಧಾರ್ಮಿಕ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವಸುಂಧರಾ, ಪುತ್ರ ವಕೀಲ ಸಿ.ಕೆ.ವಿಜಯ್, ಪುತ್ರಿ ಲಕ್ಷ್ಮೀ ಇವರನ್ನು ಅಗಲಿದ್ದಾರೆ.