ಸಿದ್ದಾಪುರ ಕೊಲೆ ಕೇಸ್; ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾಗೆ 8 ದಿನ ನ್ಯಾಯಾಂಗ ಬಂಧನ
ಎರಡು ಮಕ್ಕಳ ತಾಯಿ ಸುಚಿತ್ರಾ ಜತೆಗಿನ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ವಿಚಾರ ನಡೆದ ಗಲಾಟೆ ವೇಳೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಂಧನವಾದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ -
ಸಿದ್ದಾಪುರ: ಅನೈತಿಕ ಸಂಬಂಧ ಪ್ರಶ್ನಿಸಿದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಎ1 ಸುಚಿತ್ರಾ, ಎ2 ಲೋಕನಾಥ್, ಎ3 ಕಮಲಾಕರ ಭಟ್ ಗುರೂಜಿ ಹಾಗೂ ಎ4 ಆಕಾಶ್‌ಗೆ 8 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಸಿದ್ದಾಪುರ ಜೆಎಂಎಫ್ಸಿ ಕೋರ್ಟ್ ಆದೇಶ ನೀಡಿದೆ.
ಮತ್ತೊಂದೆಡೆ ಕೊಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಸಿದ್ದಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಕಮಲಾಕರ್ ಭಟ್ ಅವರನ್ನು ಹತ್ತು ನಿಮಿಷಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಎರಡು ಮಕ್ಕಳ ತಾಯಿ ಸುಚಿತ್ರಾ ಜತೆಗಿನ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧವೇ ಈ ಪ್ರಕರಣಕ್ಕೆ ಮೂಲ ಕಾರಣವಾಗಿದೆ. ಇದೇ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವಸಂತ್ ಎಂಬುವವರ ಕೊಲೆ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಬಂಧನವಾದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸ್ವಾಮೀಜಿಯಿಂದ 1 ಕೋಟಿ ಪರಿಹಾರ ಕೊಡಿಸಬೇಕು
ಸಿದ್ದಾಪುರದ ವಸಂತ್ ನಾಯ್ಕ್ ಕೊಲೆಗೆ ಕಾರಣವಾದ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾಳಿಂದ 1 ಕೋಟಿ ಪರಿಹಾರ ಕೊಡಿಸಬೇಕು ಎಂದು ಮೃತರ ಕುಟುಂಬ ಆಗ್ರಹಿಸಿದೆ. ನಮಗೆ ಸರ್ಕಾರದಿಂದ ಪರಿಹಾರ ಬೇಡ, ಸ್ವಾಮೀಜಿಯಿಂದಲೇ ಪರಿಹಾರ ಕೊಡಿಸಬೇಕು. ಆತ 100 ಕೋಟಿ ವಾರಸುದಾರ, ಹೀಗಾಗಿ ಆತನಿಂದಲೇ ನಮ್ಮ ಮಕ್ಕಳಿಗೆ 1 ಕೋಟಿ ಪರಿಹಾರ ಕೊಡಿಸಬೇಕು. ಇನ್ನು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮೃತರ ಕುಟುಂಬಸ್ಥರು ಆಗ್ರಹಿಸಿದೆ.
ಏನಿದು ಪ್ರಕರಣ?
ಅನೈತಿಕ ಸಂಬಂಧ ವಿಚಾರಕ್ಕೆ ನಡೆದ ಗಲಾಟೆ ವೇಳೆ ವಸಂತ್ ನಾಯ್ಕ (41) ಎಂಬುವರ ಕೊಲೆ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಮೂಲದ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ (Kamalakar Bhat Guruji), ಸುಚಿತ್ರಾ ಸೇರಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸುಚಿತ್ರಾ, ಗಂಡನಿಂದ ಬೇರ್ಪಟ್ಟು ಶಿವಮೊಗ್ಗದದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಈಕೆಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ತಾಯಿ ಸುಚಿತ್ರಾಗೆ ಜ್ಯೋತಿಷಿ ಕಮಲಾಕರ್ ಭಟ್ ಜತೆ ಅಕ್ರಮ ಸಂಬಂಧವಿರುವ ವಿಚಾರ ಮಗಳಿಗೆ ಗೊತ್ತಾಗಿತ್ತು. ಈ ವಿಚಾರವನ್ನು ತಂದೆ ಮಹೇಶ್ ನಾಯ್ಕ್‌ಗೆ ತಿಳಿಸಿದ್ದ ಮಗಳು, ಬಳಿಕ ಸಿದ್ದಾಪುರದ ಅವರಗುಪ್ಪ ಗ್ರಾಮದ ದೊಡ್ಡ ವಸಂತ್ ನಾಯ್ಕ್ ಮನೆಗೆ ಹೋಗಿದ್ದಳು.
ಮಗಳನ್ನು ಹುಡುಕಿಕೊಂಡು ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ವಾಹನದಲ್ಲಿ ತಂದೆ ಜತೆ ಕೆಲವು ಯುವಕರೊಂದಿಗೆ ವಸಂತ್ ನಾಯ್ಕ್ ಅವರ ಮನೆಗೆ ತೆರಳಿದ್ದಳು. ಅಲ್ಲಿ ಆಕೆಯ ಪತಿ ಮಹೇಶ್ ಕೂಡ ಇದ್ದರು. ಈ ವೇಳೆ ಸುಚಿತ್ರಾ ಮತ್ತು ಪತಿ ಮಹೇಶ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಗಲಾಟೆ ತಾರಕಕ್ಕೆ ಹೋಗಿ ಸುಚಿತ್ರ ಜತೆ ಬಂದಿದ್ದ ಯುವಕರು, ಗಲಾಟೆ ಬಿಡಿಸಲು ಮಧ್ಯ ಪ್ರವೇಶಿಸಿದ್ದ ವಸಂತ್‌ಗೆ ಚಾಕು ಇರಿದಿದ್ದಲ್ಲದೇ, ಸುಚಿತ್ರ ಪತಿ ಮಹೇಶ್ ಹಾಗೂ ಪಕ್ಕದ ಮನೆಯ ಕುಮಾರ್ ಎಂಬುವವರಿಗೂ ಚಾಕು ಇರಿದಿದ್ದರು.
ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಪುತ್ರಿಯನ್ನೇ ಕೊಲೆ ಮಾಡಿದ ಪಾಪಿ ತಂದೆ
ಚಾಕು ಇರಿತದಿಂದ ಗಾಯಗೊಂಡಿದ್ದ ವಸಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದರು. ಘಟನೆ ಸಂಬಂಧ ವಸಂತ್ ಅತ್ತಿಗೆ ಸಂಧ್ಯ ನಾಯ್ಕ ನೀಡಿದ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿತ್ತು.