ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

V Somanna: ವಿಧಾನ ಪರಿಷತ್ತಿನ ಎಲ್ಲಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ : ವಿ.ಸೋಮಣ್ಣ

ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ರನ್ನು ಭೇಟಿ ಮಾಡಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುರೇಶ್ ಅವರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ನಲವತ್ತು ವರ್ಷದಲ್ಲೇ ಕಂಡರಿಯದ ಭೀಕರ ಬರಗಾಲ ತಲ್ಲಣಗೊಳಿಸಿದೆ.

ಗುಬ್ಬಿ: ಬರಗಾಲದಲ್ಲೂ ಕಾಂಗ್ರೆಸ್ ಸರ್ಕಾರ ಉದ್ಧಟತನದ ನಡೆ ಜನರಿಗೆ ಬೇಸರ ತಂದಿದೆ. ಬದಲಾವಣೆ ಬಯಸಿರುವ ಜನರ ಪ್ರತಿಕ್ರಿಯೆ ಈಗ ನಡೆದಿರುವ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲ್ಲಿಸುವ ಮೂಲಕ ಉತ್ತರ ನೀಡುತ್ತಾರೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ(V Somanna) ತಿಳಿಸಿದರು.

ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ರನ್ನು ಭೇಟಿ ಮಾಡಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುರೇಶ್ ಅವರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ನಲವತ್ತು ವರ್ಷದಲ್ಲೇ ಕಂಡರಿಯದ ಭೀಕರ ಬರಗಾಲ ತಲ್ಲಣ ಗೊಳಿಸಿದೆ. ಈ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಪಾಲಿಸುತ್ತಿದೆ. ಈ ನಿಟ್ಟಿನಲ್ಲಿ ಜನರು ಮುಂದಿನ ವಿಧಾನಸಭಾ ಚುನಾವಣೆಗೆ ಈಗಲೇ ತಕ್ಕ ಉತ್ತರ ನೀಡುತ್ತಾರೆ ಎಂದರು.

ಇದನ್ನೂ ಓದಿ: Spandana Somanna: ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ; ಫೋಟೋ ವೈರಲ್‌

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಅಧಿಕಾರಕ್ಕೆ ಬಂದ ನಂತರ ಸುಳ್ಳನ್ನೇ ಮನೆದೇವರು ಮಾಡಿಕೊಂಡು ಎಸ್ಐಆರ್ ವಿಚಾರ ಮುಂದಿಟ್ಟು ಇಲ್ಲಸಲ್ಲದ ಕ್ಯಾತೆ ಮಾಡು ತ್ತಿದ್ದಾರೆ. ಪ್ರಧಾನಿ ಮೋದಿ ಅವರ ವಿಶ್ವ ಮೆಚ್ಚಿದ ಆಡಳಿತದಲ್ಲಿ ಮತದಾರರ ಪರಿಷ್ಕರಣೆ ಜನಪರವಾಗಿಯೇ ನಡೆದಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲು ಸರಿಯಲ್ಲ. ಅಧಿಕಾರ ದುರ್ಬಳಕೆ ತೋರುತ್ತದೆ ಎಂದ ಅವರು ಮುಂದಿನ 25 ವರ್ಷಕ್ಕೆ ಆಗುವಷ್ಟು ಅಭಿವೃದ್ದಿ ಕೆಲಸ ರೈಲ್ವೆ ಮತ್ತು ಹೆದ್ದಾರಿಯಲ್ಲಿ ಮಾಡುತ್ತಿದ್ದೇನೆ. ಬೆಂಗಳೂರಿಗೆ ಸಮನಾದ ತುಮಕೂರು ಬೆಳೆದಂತೆ ಜೊತೆಗೆ ಗುಬ್ಬಿ ನಗರ ಕೂಡಾ ಬೆಳೆಯಲಿದೆ ಎಂದರು.

ಆಗ್ನೇಯ ಪದವೀಧರ ಕ್ಷೇತ್ರದ ಐದು ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಮತದಾರರು ಇರುವ ತುಮಕೂರು ಜಿಲ್ಲೆಯಲ್ಲಿ 3800 ಕ್ಕೂ ಮತ ಗುಬ್ಬಿ ತಾಲ್ಲೂಕಿನಲ್ಲಿದೆ. ಎಲ್ಲರೂ ಪ್ರಜ್ಞಾವಂತ ಮತದಾರರು ಹಾಗಾಗಿ ಆಲೋಚಿಸಿ ಮೋದಿ ಅವರ ಅಭಿವೃದ್ಧಿ ಗಮನಿಸಿ ಮೈತ್ರಿ ಅಭ್ಯರ್ಥಿ ಸುರೇಶ್ ಅವರಿಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡಬೇಕು ಎಂದು ಮನವಿ ಮಾಡಿದರು.

ನಂತರ ನಿಟ್ಟೂರು ಹಾಗೂ ಚೇಳೂರು ಹೋಬಳಿಯ ಮತದಾರರನ್ನು ಸಂಪರ್ಕಿಸಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ವೈ.ಎಚ್.ಹುಚ್ಚಯ್ಯ, ಮೈತ್ರಿ ಪಕ್ಷದ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಎನ್.ಸಿ.ಪ್ರಕಾಶ್, ಎಸ್.ನಂಜೇಗೌಡ, ಬಿಜೆಪಿ ಅಧ್ಯಕ್ಷ ಬಲರಾಮಯ್ಯ, ಸಾಗರನಹಳ್ಳಿ ವಿಜಯಕುಮಾರ್, ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಬಿ.ಲೋಕೇಶ್, ವಕೀಲರ ಸಂಘದ ಅಧ್ಯಕ್ಷ ಎಂ.ಪಿ.ಮೋಹನ್ ಕುಮಾರ್ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.