ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

G Parameshwar: ಮಾನವೀಯತೆ ಕಲಿಸುವ ಕೆಲಸ ಆಗಬೇಕು: ಡಾ.ಜಿ. ಪರಮೇಶ್ವರ್

Tumkur News: ತುಮಕೂರು ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಆಯೋಜಿಸಿದ್ದ ತಲ್ಲಣಿಸದಿರುವ ಮನವೇ ಸಂಸ್ಕೃತಿ-ಚಿಂತನ- ಚಾರಣ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಚಾಲನೆ ನೀಡಿದರು.

ತಲ್ಲಣಿಸದಿರುವ ಮನವೇ ಸಂಸ್ಕೃತಿ-ಚಿಂತನ- ಚಾರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌.

ತುಮಕೂರು, ಡಿ.27: ನಮ್ಮಲ್ಲಿ ಆದರ್ಶ, ವಿಚಾರಧಾರೆಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ಪಾಲಿಸುತ್ತಿಲ್ಲ. ಮನುಷ್ಯತ್ವ, ಮಾನವೀಯತೆ ಕಲಿಸುವ ಕೆಲಸ ಆಗಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ (G Parameshwar) ಹೇಳಿದರು. (Tumkur News) ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಆಯೋಜಿಸಿದ್ದ ತಲ್ಲಣಿಸದಿರು ಮನವೇ ಸಂಸ್ಕೃತಿ-ಚಿಂತನ- ಚಾರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮಾನತೆ ತರಲು ಹಲವರು ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸಾಲಿಗೆ ಕಾಗಿನೆಲೆ ಕನಕ ಗುರುಪೀಠ ಸಹ ಒಂದು ಹೆಜ್ಜೆ ಮುಂದಿರಿಸಿದೆ. ಇದು ಕಠಿಣ ಹಾದಿ, ಇಂತಹ ಸ್ವಾಮೀಜಿಗಳ ಸಂಖ್ಯೆ ಹೆಚ್ಚಬೇಕು. ಸಮಾಜದ ಪರಿವರ್ತನೆಯಲ್ಲಿ ತೊಡಗುವವರನ್ನು ನಾನು ಎಂದಿಗೂ ಗೌರವಿಸುತ್ತೇನೆ. ಹಾಗಾಗಿ ಕಾಗಿನೆಲೆ ಗುರುಪೀಠದ ಎಲ್ಲ ಕಾರ್ಯಗಳಿಗೆ ನನ್ನ ಬೆಂಬಲವಿದೆ ಎಂದು ತಿಳಿಸಿದರು.

ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಧರ್ಮ ತಪ್ಪಲ್ಲ, ಆದರೆ ಧರ್ಮದ ಹೆಸರಿನಲ್ಲಿ ಕೋಮುವಾದಿಯಾಗುವುದು ತಪ್ಪು. 1927ರಲ್ಲಿ ಅಸಮಾನತೆಯಿಂದ ಕೂಡಿದ ಮನುಸೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿ, ಅದರ ಸ್ಥಾನದಲ್ಲಿ ಸಂವಿಧಾನ ತಂದು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಕನಸು ಕಂಡರು. ಆದರೆ ಮನುಸೃತಿಯನ್ನು ಮತ್ತೆ ಹುಟ್ಟು ಹಾಕುವ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಇತರರು ಉಪಸ್ಥಿತರಿದ್ದರು.

ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ವಿಶ್ವೇಶ್ವರ ಭಟ್‌ ಕರೆ

image

ಭಕ್ತಿಗಳಲ್ಲಿ ಎರಡು ವಿಧ, ಶ್ರೀಮಂತರದ್ದು ಮತ್ತು ಬಡವರದ್ದು. ಕನಕದಾಸರ ಪ್ರಕಾರ ಭಕ್ತಿ ಎಂಬುದು ಏಕತೆ. ಅದು ಜಾತಿ-ಮತಗಳನ್ನು ಮೀರಿ ನಿಲ್ಲುತ್ತದೆ.

| ಪ್ರೊ.ನಾಗೇಂದ್ರ ಕುಮಾರ್
image

ಸಮಾಜವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ತರಬೇಕೆಂಬ ಉದ್ದೇಶದಿಂದ ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿವರ್ಷ 1.50-2 ಕೋಟಿ ರೂ.ಗಳ ಸ್ಕಾಲರ್‌ಶಿಫ್ ನೀಡುತ್ತಾ ಬಂದಿದ್ದೇವೆ. ಈ ವರ್ಷ 22 ವಿದ್ಯಾರ್ಥಿಗಳಿಗೆ ಈ ಪುರಸ್ಕಾರ ಲಭಿಸಿದೆ.

| ಡಾ.ರಮಣ್ ಹುಲಿನಾಯ್ಕರ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್